ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾದ 'ಕೌರವ' ಬಿಸಿ ಪಾಟೀಲ್

ನಟ, ರಾಜಕಾರಣಿ ಬಿ.ಸಿ ಪಾಟೀಲ್ ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಭೇಟಿ ಬಳಿಕ ಇಬ್ಬರು ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು. ದರ್ಶನ್ ಭೇಟಿಯಾದ ಬೆನ್ನಲೇ ಬಿಸಿ ಪಾಟೀಲ್ ನಿನ್ನೆ (ಡಿಸೆಂಬರ್ 10) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗಿದ್ದಾರೆ. ಇಬ್ಬರು ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದೇ ಸಮಯದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಜೊತೆಯಲ್ಲಿದ್ದರು. ಪವರ್ ಸ್ಟಾರ್ ಬಿಸಿ ಪಾಟೀಲ್ ಮನೆಗೆ ಭೇಟಿ ನೀಡಿದ್ದರು. ಇದೇ ಸಮಯದಲ್ಲಿ ಮೂವರು ಭೇಟಿಯಾಗಿ ಕೆಲ ಸಮಯ ಮಾತುಕಥೆ ನಡೆಸಿದ್ದಾರೆ. ಮೂವರು ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿವರಾಜ್ ಹೆಬ್ಬಾರ್, 'ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ಅವರನ್ನು ನಿನ್ನೆ ಕೃಷಿ ಸಚಿವರಾದ ಶ್ರೀ ಬಿ.ಸಿ‌.ಪಾಟೀಲ್ ಅವರ ನಿವಾಸದಲ್ಲಿ ಅನೌಪಚಾರಿಕವಾಗಿ ಭೇಟಿಯಾದ ಸಂದರ್ಭ.' ಎಂದು ಬರೆದುಕೊಂಡಿದ್ದಾರೆ.

Minister Shivaram Hebbar Met Puneeth Rajkumar Along With Bc Patil

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯುವರತ್ನ ಸಿನಿಮಾದ ಚಿತ್ರೀಕರಣ ಮುಗಿಸಿರುವ ಪುನೀತ್, ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜೇಮ್ಸ್ ಮುಗಿಯುತ್ತಿದ್ದಂತೆ ಅಪ್ಪು ಮತ್ತೆ ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಇಬ್ಬರ ಹ್ಯಾಟ್ರಿಕ್ ಸಿನಿಮಾದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಇನ್ನು ನಟ ಬಿಸಿ ಪಾಟೀಲ್ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯದ ನಡುವೆಯೂ ಕೆಲವು ಸಿನಿಮಾ ಕಾರ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇಂದು ಬಿ‌.ಸಿ ಪಾಟೀಲ್, ಅಜಿತ್ ಜಯರಾಜ್ ನಟನೆಯ 'ಜಾಂಟಿ s/o ಜಯರಾಜ್' ಚಲನಚಿತ್ರ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದರು.

Recommended Video

ದಶಕಗಳು ಕಳೆದ್ರು ಇಂದಿಗೂ ರಾಜಣ್ಣನೆ ನಂಬರ್ ಒನ್ | Dr Rajkumar | Filmibeat Kannada

More from Filmibeat

English summary
Minister Shivaram Hebbar met Puneeth Rajkumar along with BC patil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X