ವಿಷ್ಣು ಪ್ರತಿಮೆ ಧ್ವಂಸ: ಬೇರೆ ಸ್ಥಳದಲ್ಲಿ ಪ್ರತಿಮೆ ಮರುಸ್ಥಾಪನೆ- ವಿ ಸೋಮಣ್ಣ

ಮಾಗಡಿ ರಸ್ತೆಯ ಟೋಲ್ ಗೇಟ್‌ ಬಳಿಕ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ನಟ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಳೆದ ರಾತ್ರಿ ಕಿಡಿಗೇಡಿಗಳು ಧ್ವಂಸ ಗೊಳಿಸಿದ್ದಾರೆ.

Recommended Video

Vishnuvardhan ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳು | Memorial Destroyed | Filmibeat Kannada

ಈ ಸಂಬಂಧ ಸಚಿವ ವಿ ಸೋಮಣ್ಣ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ''ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಬೇರೆ ಸ್ಥಳದಲ್ಲಿ ಸ್ಥಾಪನೆ ಮಾಡಲು ಎಲ್ಲ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ'' ಎಂದು ಭರವಸೆ ನೀಡಿದ್ದಾರೆ.

''ಸುಮಾರು ನಲವತ್ತು ವರ್ಷದಿಂದಲೂ ಅದು ಬಾಲಗಂಗಾಧರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಈ ಸ್ಥಳದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ಬೇಡ ಎಂದು ನಾನು ಮೊದಲೇ ಹೇಳಿದ್ದೆ. ಆದರೂ ಸಂಘಟನೆ ಅವರು ಕೇಳಲಿಲ್ಲ, ನಿನ್ನೆ ನಡೆದಿರುವ ಘಟನೆ ಬಗ್ಗೆ ನನಗೆ ಗೊತ್ತಿಲ್ಲ. ಕೂಡಲೇ ಬೇರೆ ಸ್ಥಳದಲ್ಲಿ ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆ ಮಾಡಲು ಸೂಚಿಸುತ್ತೇನೆ'' ಎಂದು ಸೋಮಣ್ಣ ಮಾಹಿತಿ ನೀಡಿದರು.

Minister Somanna apologizes for vishnuvardhan fans for shifting statue

''ಈ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭದಲ್ಲೇ ನಾನು ಸಂಘಟನೆಯವರ ಜೊತೆ ಮಾತನಾಡಿದ್ದೆ. ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ವಿಜಯನಗರ ಬಸ್ ನಿಲ್ದಾಣ ಅಥವಾ ಆಸ್ಪತ್ರೆಯ ಬಳಿ ಸ್ಥಾಪಿಸಬಹುದು ಎಂದು ಸಲಹೆ ನೀಡಿದ್ದೆ. ಅದಕ್ಕೆ ಅವರ ಸಹ ಒಪ್ಪಿದ್ದರು'' ಎಂದು ಸೋಮಣ್ಣ ತಿಳಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅಭಿಮಾನಿಗಳು ವಿಷ್ಣು ಪ್ರತಿಮೆ ಬಳಿ ಪ್ರತಿಭಟನೆ ಮಾಡ್ತಿದ್ದಾರೆ. ''ಪುತ್ಥಳಿ ದ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರತಿಮೆಗೆ ಬೇರೆ ಸ್ಥಳ ನಿಗದಿ ಪಡಿಸಿದರೆ ಅದಕ್ಕೆ ಅಭ್ಯಂತರವಿಲ್ಲ'' ಎಂದು ಹೇಳಿದ್ದಾರೆ.

ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ್ ಸಹ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ''ಇಂತಹ ಘಟನೆ ಆಗಬಾರದಿತ್ತು. ಏನಾದರೂ ಸಮಸ್ಯೆ ಇದ್ದರೆ ಬೆಳಗ್ಗಿನ ಸಮಯದಲ್ಲಿ ಕೂತು ಚರ್ಚಿಸಿ ಗೌರವಾನ್ವಿತವಾಗಿ ನಡೆದುಕೊಳ್ಳಬೇಕು. ದ್ವಂಸ ಮಾಡಿದ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
Minister Somanna apologizes for vishnuvardhan fans for shifting statue and he agreed to re establish Vishnu statue in other place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X