ಸಚಿವ ಸುಧಾಕರ್ ನಟಿಸುತ್ತಿದ್ದಾರೆ ಈ ಕನ್ನಡ ಸಿನಿಮಾದಲ್ಲಿ!

ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಬಹು ಆತ್ಮೀಯತೆ. ಸಿನಿಮಾ ರಂಗದವರು ರಾಜಕಾರಣಿಗಳಾಗುವುದು ಹೊಸತೇನಲ್ಲ. ರಾಜಕಾರಣಿಗಳಿಗೆ 'ನಟನೆ' ಹೊಸತಲ್ಲ. ಆದರೆ ರಾಜಕಾರಣಿಗಳಾಗಿರುವವರು ಸಿನಿಮಾದಲ್ಲಿ ನಟಿಸುವುದು ತುಸು ಅಪರೂಪ.

ಕನ್ನಡದಲ್ಲಿ ರಾಜಕಾರಣಿಗಳಾಗಿದ್ದವರು ಸಿನಿಮಾಗಳಲ್ಲಿ ನಟಿಸಿರುವ ಉದಾಹರಣೆ ತುಸು ಕಡಿಮೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಯಲ್ಲಿ ನಟಿಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಮೇಲೆ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.

ಇದೀಗ ಸಚಿವ ಸುಧಾಕರ್ ಅವರು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಪೋಸ್ಟರ್ ಅನ್ನು ಇಂದು ಸಿಎಂ ಯಡಿಯೂರಪ್ಪ ಬಿಡುಗಡೆ ಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಸುಧಾಕರ್, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್. ಹಾಜರಿದ್ದರು.

Minister Sudhakar Acting In Kannada Movie Thanuja

'ತನುಜಾ' ಹೆಸರಿನ ಸಿನಿಮಾ ಒಂದರಲ್ಲಿ ಸಚಿವ ಕೆ.ಸುಧಾಕರ್ ನಟಿಸಲಿದ್ದಾರೆ. 'ತನುಜಾ' ನಿಜಜೀವನದ ಘಟನೆಯಿಂದ ಪ್ರೇರಣೆಗೊಂಡ ಸಿನಿಮಾ. ಕೆಲವೇ ತಿಂಗಳ ಹಿಂದೆ ನಡೆದ ಘಟನೆಯೊಂದನ್ನು ಸಿನಿಮಾ ಮಾಡುತ್ತಿದ್ದಾರೆ ಹರೀಶ್.

Recommended Video

ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada

ಸಿನಿಮೀಯ ರೀತಿಯಲ್ಲಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿನಿ ಶಿಕಾರಿಪುರದ, ಮಲ್ಲೇನಹಳ್ಳಿ ಗ್ರಾಮದ ತನುಜಾ ಕುರಿತಾದ ಸಿನಿಮಾ ಇದಾಗಿದೆ. ಕೊರೊನಾ ಕಾರಣದಿಂದ ಒಂದು ಬಾರಿ ನೀಟ್ ಪರೀಕ್ಷೆ ವಂಚಿತಳಾಗಿದ್ದ ತನುಜಾ, ಎರಡನೇ ಅವಕಾಶದಲ್ಲಿ ಶಿಕ್ಷಕ ಪ್ರದೀಪ್, ಸಂಪಾದಕ ವಿಶ್ವೇಶ್ವರ ಭಟ್, ಸಿಎಂ ಯಡಿಯೂರಪ್ಪ, ಸಚಿವ ಸುಧಾಕರ್, ಬಿಜೆಪಿ ಮುಖಂಡ ಬಿವೈ ವಿಜಯೇಂದ್ರ ಇವರೆಲ್ಲರುಗಳ ಸಹಾಯದಿಂದ ಸಮಯಕ್ಕೆ ಸರಿಯಾಗಿ ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಗಿಟ್ಟಿಸಿಕೊಂಡ ನಿಜ ಘಟನೆಯನ್ನು ಸಿನಿಮಾ ಮಾಡಲಾಗುತ್ತಿದೆ.

More from Filmibeat

English summary
Karnataka government minister Sudhakar acting in Kannada movie Thanuja. Movie based on real life incidents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X