twitter
    For Quick Alerts
    ALLOW NOTIFICATIONS  
    For Daily Alerts

    ಆ ಎರಡು ಕನ್ನಡ ಸಿನಿಮಾಗಳನ್ನು ನೆನಪಿಸುತ್ತಿವೆ ಲವ್ ಮಾಕ್‌ಟೇಲ್, ದಿಯಾ ಸಿನಿಮಾಗಳು

    |

    ಲವ್ ಮಾಕ್ಟೆಲ್ ಮತ್ತು ದಿಯಾ ಸಿನಿಮಾಗಳು ಕನ್ನಡ ಸಿನಿ ಪ್ರೇಕ್ಷಕ ತನ್ನ ಭಾಷೆಯ ಸಿನಿಮಾಗಳ ಬಗ್ಗೆ ಮತ್ತೊಮ್ಮೆ ಹೆಮ್ಮೆಯಿಂದ ಮಾತನಾಡುವಂತೆ ಮಾಡಿವೆ.

    ಎರಡೂ ಸಿನಿಮಾಗಳು ತಮ್ಮ ತಾಜಾ ತನದಿಂದ, ನವಿರುತನದಿಂದ, ಅಬ್ಬರ ರಹಿತ ತಣ್ಣನೆಯ ಕತೆಯಿಂದ ಹೊಸ ಮುಖಗಳ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದೆ.

    ಚಿತ್ರಮಂದಿರದಲ್ಲಿ ಎರಡೂ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ, ಇದಕ್ಕೆ ಕೊರೊನಾ ಭೀತಿ ಸೇರಿದಂತೆ ಬೇರೆ-ಬೇರೆ ಕಾರಣಗಳಿವೆ. ಏನೇ ಆಗಲಿ ಜನರಿಗೆ ಸಿನಿಮಾ ಇಷ್ಟವಾಗಿದೆ. ಸಿನಿ ತಂಡಕ್ಕೆ ಇದಕ್ಕಿಂತಲೂ ಬೇರೆ ಏನು ಬೇಕು?

    ಈ ಎರಡೂ ಸಿನಿಮಾಗಳು ಹದಿನೈದು ವರ್ಷದ ಹಿಂದೆ ಬಿಡುಗಡೆ ಆಗಿ ಕನ್ನಡ ಸಿನಿರಂಗದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದ ಎರಡು ಸಿನಿಮಾಗಳನ್ನು ನೆನಪಿಸುತ್ತಿವೆ. ಅದೇ ಮುಂಗಾರು ಮಳೆ ಮತ್ತು ದುನಿಯಾ. ಹೌದು ಈ ಎರಡೂ ಸಿನಿಮಾಗಳನ್ನು ದಿಯಾ ಮತ್ತು ಲವ್‌ ಮಾಕ್ಟೆಲ್ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಕಾರಣವೂ ಇದೆ.

    ಎರಡೂ ಸಿನಿಮಾಗಳಿಗೂ ಇದೆ ಅಲ್ಪ ಸಾಮ್ಯತೆ

    ಎರಡೂ ಸಿನಿಮಾಗಳಿಗೂ ಇದೆ ಅಲ್ಪ ಸಾಮ್ಯತೆ

    ಮುಂಗಾರು ಮಳೆ ಮತ್ತು ದುನಿಯಾ ಸಿನಿಮಾಗಳು ಸಹ ಇದೇ ಲವ್ ಮಾಕ್ಟೆಲ್ ಮತ್ತು ದುನಿಯಾ ರೀತಿಯಲ್ಲಿ ಅತ್ಯಲ್ಪ ಅಂತರದಲ್ಲಿ ಬಿಡುಗಡೆ ಆಗಿದ್ದವು. ಮುಂಗಾರು ಮಳೆ 2006 ಡಿಸೆಂಬರ್ 29 ರಂದು ಬಿಡುಗಡೆ ಆದರೆ, ದುನಿಯಾ 2007 ಫೆಬ್ರವರಿ 23 ರಂದು ಬಿಡುಗಡೆ ಆಗಿತ್ತು. ನಂತರ ಎರಡೂ ಸಿನಿಮಾಗಳು ಇತಿಹಾಸ ಸೃಷ್ಟಿಸಿದವು.

    ಮುಂಗಾರು ಮಳೆ ಸಿನಿಮಾಕ್ಕೆ ಜನರೇ ಬಂದಿರಲಿಲ್ಲ

    ಮುಂಗಾರು ಮಳೆ ಸಿನಿಮಾಕ್ಕೆ ಜನರೇ ಬಂದಿರಲಿಲ್ಲ

    ಬಿಡುಗಡೆ ಆದಾಗ ಮುಂಗಾರು ಮಳೆ ಮತ್ತು ದುನಿಯಾ ಸಿನಿಮಾಗಳಿಗೆ ಪ್ರೇಕ್ಷಕ ಬಂದಿರಲಿಲ್ಲ. ಮುಂಗಾರು ಮಳೆ ಎರಡು ವಾರ ಜನವಿಲ್ಲದೆ ಓಡಿತ್ತು, ಆ ನಂತರ ಜನ ಕಿಕ್ಕಿರಿದು ತುಂಬಿದರು. ಲವ್ ಮಾಕ್ಟೆಲ್ ಮತ್ತು ದಿಯಾ ಸಿನಿಮಾಕ್ಕೂ ಸಹ ಆರಂಭದಲ್ಲಿ ಜನ ಆಸಕ್ತಿ ತೋರಿಸಿರಲಿಲ್ಲ. ಆದರೆ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆದ ನಂತರ ಸಿನಿಮಾ ಸೂಪರ್ ಹಿಟ್ ಆಯಿತು.

    ಅದೂ ಸಹ ಹೊಸಬರ ಸಿನಿಮಾ ಆಗಿತ್ತು

    ಅದೂ ಸಹ ಹೊಸಬರ ಸಿನಿಮಾ ಆಗಿತ್ತು

    ಮುಂಗಾರು ಮಳೆ ಮತ್ತು ದುನಿಯಾ ಸಿನಿಮಾ ಹೊಸಬರ ಸಿನಿಮಾ ಆಗಿತ್ತು. ಆಗಷ್ಟೆ ಸಿನಿಮಾ ರಂಗಕ್ಕೆ ಬಂದವರು ಕಷ್ಟಪಟ್ಟು ಕಟ್ಟಿದ್ದ ಸಿನಿಮಾ ಅದಾಗಿದ್ದವು. ದಿಯಾ ಮತ್ತು ಮಾಕ್‌ಟೇಲ್ ಸಿನಿಮಾಗಳು ಸಹ ಹೊಸಬರಿಂದಲೇ ಕಟ್ಟಲ್ಪಟ್ಟ ಸಿನಿಮಾಗಳಾಗಿವೆ.

    ಕನ್ನಡ ಸಿನಿಮಾ ದಿಶೆ ಬದಲಿಸಿದ ಸಿನಿಮಾಗಳು

    ಕನ್ನಡ ಸಿನಿಮಾ ದಿಶೆ ಬದಲಿಸಿದ ಸಿನಿಮಾಗಳು

    ಮುಂಗಾರು ಮಳೆ ಸಿನಿಮಾದ ಬಳಿಕ ಕನ್ನಡ ಸಿನಿಮಾರಂಗದ ಹಾದಿಯೇ ಬದಲಾಯಿತು. ಕತೆಗಳ ಕಟ್ಟುವಿಕೆ, ಹಾಡುಗಳ ಶೈಲಿ, ಸಿನಿಮಾ ದೃಶ್ಯಾವಳಿಗಳ ಶೈಲಿ ಎಲ್ಲದರಲ್ಲೂ ಬದಲಾವಣೆಗಳು ಕಾಣಿಸಿಕೊಂಡಿತು. ಈಗ ದಿಯಾ, ಲವ್ ಮಾಕ್‌ಟೆಲ್‌ ಬಳಿಕ ಇದೇ ಮಾದರಿಯ ಬದಲಾವಣೆಗಳು ಚಿತ್ರರಂಗದಲ್ಲಿ ನಿರೀಕ್ಷಿಸಲಾಗುತ್ತಿದೆ.

    ಭಾರಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಸಿನಿಮಾಗಳು

    ಭಾರಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಸಿನಿಮಾಗಳು

    ಲವ್ ಮಾಕ್‌ಟೇಲ್ ಮತ್ತು ದಿಯಾ ಸಿನಿಮಾಗಳು ಪ್ರಸ್ತುತ ಅಮೆಜಾನ್ ನಲ್ಲಿ ಲಭ್ಯವಿದ್ದು, ಎರಡೂ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರಮಂದಿರಗಳಲ್ಲಿ ಇಂಥಹಾ ಒಳ್ಳೆಯ ಸಿನಿಮಾವನ್ನು ನೋಡುವುದನ್ನು ತಪ್ಪಿಸಿಕೊಂಡಿದ್ದಕ್ಕೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    English summary
    Minute similarities between love mocktail-Dia movies and Mungalur Male and Duniya movie.
    Saturday, March 21, 2020, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X