»   » ಮೀರಾ ನಾಯರ್‌ ಹೊಸ ಸಿನಿಮಾದಲ್ಲಿ ಅಮಿತಾಬ್‌ ಹಾಗೂ ಮಾಧುರಿ

ಮೀರಾ ನಾಯರ್‌ ಹೊಸ ಸಿನಿಮಾದಲ್ಲಿ ಅಮಿತಾಬ್‌ ಹಾಗೂ ಮಾಧುರಿ

Posted By: Super
Subscribe to Filmibeat Kannada

ಮೀರಾ ನಾಯರ್‌ ಏನು ಮಾಡುತ್ತಿದ್ದಾರೆ? ಅವರ ಹೊಸ ಸಿನಿಮಾ ಯಾವುದು?

ಗೋಲ್ಡನ್‌ ಲಯನ್‌ ಪ್ರಶಸ್ತಿ ಪಡೆದು, ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ಹೆಸರಿಸಲಾಗಿರುವ ಖುಷಿಯಲ್ಲಿರುವ ಮೀರಾ ನಾಯರ್‌ ಅವರ ಹೊಸ ಸಿನಿಮಾದ ಬಗ್ಗೆ ಚಿತ್ರರಂಗ- ಅಭಿಮಾನಿಗಳು ಕಾತರದಿಂದ ಇರುವುದು ಸಹಜವೇ. ಅವರ ಇತ್ತೀಚಿನ ಚಿತ್ರ ಮಾನ್ಸೂನ್‌ ವೆಡ್ಡಿಂಗ್‌ ನ ಅಭೂತಪೂರ್ವ ಯಶಸ್ಸು ಕೂಡ ಮೀರಾ ಬಗೆಗಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿವೆ.

ಮಾನ್ಸೂನ್‌ ವೆಡ್ಡಿಂಗ್‌ ಸಿನಿಮಾದಲ್ಲಿನ ಮೀರಾ ಸ್ಪರ್ಶದ ಬಗ್ಗೆ ಸಿನಿಮಾ ಪಂಡಿತರಿಂದ ಮೆಚ್ಚುಗೆ ವ್ಯಕ್ತವಾಗಿತ್ತು . ಮೀರಾ ಸಿನಿಮಾದ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡಿದ್ದಾರೆ, ಪ್ರೇಕ್ಷಕರ ನಾಡಿ ಮಿಡಿತದ ಲಯ ಅವರಿಗೆ ಸಿಕ್ಕಿದೆ ಎಂದೂ ವಿಮರ್ಶಕರು ಹೊಗಳಿದ್ದರು. ಆ ಮಟ್ಟಿಗೆ ಮೀರಾ ಅದೃಷ್ಟವಂತೆ.

ಮಾನ್ಸೂನ್‌ ಯಶಸ್ಸಿನ ಖುಷಿಯಲ್ಲಿರುವ ಮೀರಾ ಅವರ ಹೊಸ ಚಿತ್ರದ ಯೋಜನೆಯೂ ಭರ್ಜರಿಯಾಗಿದೆ. ತಾರಾಗಣವೇ ಬೆಚ್ಚಿ ಬೀಳಿಸುವಷ್ಟು ಅದ್ದೂರಿ. ಅಮಿತಾಬ್‌ ಬಚ್ಚನ್‌ ಹಾಗೂ ಮಾಧುರಿ ದೀಕ್ಷಿತ್‌ ಈ ಸಿನಿಮಾದ ನಾಯಕ ನಾಯಕಿ. ಮಾಧುರಿಯೇ ಯಾಕೆಂದರೆ- ಆಕೆ ತಮ್ಮ ಸಿನಿಮಾದ ಪಾತ್ರಕ್ಕೆ ನ್ಯಾಯ ಒದಗಿಸುತ್ತಾಳೆ ಎನ್ನುತ್ತಾರೆ ಮೀರಾ.

ಈ ಮುನ್ನ ಕಲಾತ್ಮಕ ಚಿತ್ರಗಳ ಮೂಲಕ ಸುದ್ದಿ ಮಾಡಿದ್ದ ಮೀರಾ ನಾಯರ್‌ ಈ ಬಾರಿ ಕಮರ್ಷಿಯಲ್‌ನತ್ತ ಕಣ್ಣು ಹಾಯಿಸಿದ್ದಾರೆ. ಎರಡೂ ಕಡೆ ಸೈ ಅನ್ನಿಸಿಕೊಳ್ಳುವುದು, ಮುಖ್ಯ ವಾಹಿನಿಗೆ ಸಲ್ಲುವುದು ಅವರ ಬಯಕೆ- ತವಕ. ಹೊಸ ಚಿತ್ರದಲ್ಲಿ ಹಾಡು- ಕುಣಿತ ಎಲ್ಲವೂ ಉಂಟು. ಅಲ್ಲಿಗೆ ಮೀರಾ ಅವರ ಇನ್ನೊಂದು ಮುಖ ಅನಾವರಣಗೊಳ್ಳಲಿದೆ ಎಂದಾಯಿತು.

ಮೀರಾ ಚಿತ್ರದಲ್ಲಿ ನಟಿಸಲು ಮಾಧುರಿ ಹ್ಞೂಂಗುಟ್ಟಿದ್ದಾರೆ. ಅಮಿತಾಭ್‌ ತಲೆ ಅಲ್ಲಾಡಿಸುವುದಷ್ಟೇ ಬಾಕಿ. ಅಂದಹಾಗೆ, ಮೀರಾ ಕಮರ್ಷಿಯಲ್‌ ಸಿನಿಮಾಗೆ ಕೈ ಹಾಕುತ್ತಿರುವುದು ಇದೇ ಮೊದಲು. ಅವರು ತಿರುವಿನಲ್ಲಿದ್ದಾರೆ; ದಡ ಮುಟ್ಟುತ್ತಾರಾ?

English summary
Mira Nair turning towards commercial films: Big B and Madhuri in Mira Nairs next project

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X