Don't Miss!
- News
ವಿಡಿಯೋ: ಟ್ರ್ಯಾಕ್ಟರ್ ಚಲಾಯಿಸಿ ಮದುವೆ ಸ್ಥಳಕ್ಕೆ ಬಂದ ಸಿಂಗಾರಗೊಂಡ ವಧು
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹಿಂದು' ಪುಷ್ಪ ಮಾಡಿದ್ದು ಧರ್ಮ, 'ಜಾತ್ಯಾತೀತ' ರಾಕಿಭಾಯ್ ಮಾಡಿದ್ದು ಅಧರ್ಮ!
ತೆಲುಗಿನ 'ಪುಷ್ಪ' ಹಾಗೂ ಕನ್ನಡದ 'ಕೆಜಿಎಫ್ 2' ಇತ್ತೀಚೆಗೆ ಭಾರಿ ಸದ್ದು ಮಾಡಿದ ಸಿನಿಮಾಗಳು. ಈ ನಡುವೆ 'RRR' ಸಿನಿಮಾ ಸಹ ಸದ್ದು ಮಾಡಿತಾದರೂ, ಅದು ರಾಜಮೌಳಿ ಸಿನಿಮಾ ಆದ್ದರಿಂದ ಅದರ ಯಶಸ್ಸು ನಿರೀಕ್ಷಿತವೇ ಆಗಿತ್ತು. ಹಾಗಾಗಿ 'ಪುಷ್ಪ' ಹಾಗೂ 'ಕೆಜಿಎಫ್ 2' ಯಶಸ್ಸು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತು. ಹೆಚ್ಚು ಚರ್ಚೆಯನ್ನು ಹುಟ್ಟುಹಾಕಿತು.
'ಪುಷ್ಪ' ಹಾಗೂ 'ಕೆಜಿಎಫ್ 2' ಎರಡೂ ಮಾಸ್ ಹೀರೋಗಳ ಕತೆಗಳು. ರಾಕಿಭಾಯ್ ಹಾಗೂ ಪುಷ್ಪ ಇಬ್ಬರೂ ಸಹ ತಮ್ಮ ಮನದ ಮರ್ಜಿಯಂತೆ ಬದುಕುವವರು. ಇಬ್ಬರೂ ಸಣ್ಣ ವಯಸ್ಸಿನಲ್ಲಿ ಅಪಮಾನಗಳನ್ನು, ಕಷ್ಟಗಳನ್ನು ಎದುರಿಸಿರುವವರು. ಸಾಮಾಜಿಕ ಗೌರವ, ಶಕ್ತಿ, ಹಣ ಸಂಪಾದನೆಗಾಗಿ ತಮ್ಮದೇ ಹಾದಿಯಲ್ಲಿ ಹೋರಾಟಕ್ಕೆ ಇಳಿದವರು.
ಕಲೆಗೆ
ಅಂಟಿದ
ಧರ್ಮ:
ಮುಸ್ಲಿಂ
ನೃತ್ಯಗಾರ್ತಿಗೆ
ಅವಕಾಶ
ನಿರಾಕರಿಸಿದ
ದೇವಾಲಯ

'ಪುಷ್ಪ' ಹಾಗೂ 'ಕೆಜಿಎಫ್' ಸಿನಿಮಾಗಳ ನಾಯಕನ ಪಾತ್ರಗಳು ಎರಡು ಭಿನ್ನ ಪ್ರದೇಶಗಳಲ್ಲಿ, ಭಿನ್ನವಾದ ಸವಾಲುಗಳನ್ನು ಎದುರಿಸುತ್ತಾ ಮೇಲೆ ಬಂದವರು. ಆದರೆ ಇಬ್ಬರ ಒಳಗಿನ ಫೈಯರ್ ಒಂದೇ. ಇಬ್ಬರು ವ್ಯಕ್ತಿತ್ವದಲ್ಲಿ ಹಲವು ಸಾಮ್ಯತೆಗಳಿವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮತಾಂಧರು, ಪುಷ್ಪ ಹಾಗೂ ರಾಕಿ ಭಾಯ್ ಅನ್ನು ಹೋಲಿಕೆ ಮಾಡಿರುವುದು ಅವರ ವ್ಯಕ್ತಿತ್ವದಲ್ಲಿರುವ ಸಾಮ್ಯತೆಗಲ್ಲ ಬದಲಿಗೆ ಕಣ್ಣಿಗೆ ಕಾಣದ, ಮುಟ್ಟಲು ಆಗದ ಧರ್ಮದ ಕಾರಣಕ್ಕೆ.

ಕೆಜಿಎಫ್ ಅನ್ನು ಅವಹೇಳನ ಮಾಡಲು ಹರಿಬಿಡಲಾಗಿರುವ ಪೋಸ್ಟರ್?
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದು ವೈರಲ್ ಆಗುತ್ತಿದೆ. ಪೋಸ್ಟರ್ನಲ್ಲಿ 'ಪುಷ್ಪ' ಸಿನಿಮಾದ ನಾಯಕ ಪಾತ್ರ ಪುಷ್ಪರಾಜ್ ಹಾಗೂ 'ಕೆಜಿಎಫ್ 2' ಸಿನಿಮಾದ ನಾಯಕ ಪಾತ್ರ ರಾಕಿ ಭಾಯ್ ನಡುವೆ ಧಾರ್ಮಿಕತೆಯ ಸಾಮ್ಯತೆಯನ್ನು ಅಳೆದು ನೀಡಲಾಗಿದೆ. ಒಟ್ಟಾರೆ ಪೋಸ್ಟ್ ಅನ್ನು ಗಮನಿಸಿದಾಗ ರಾಕಿ ಭಾಯ್ ಹಿಂದುತ್ವವಾದಿ ಅಲ್ಲ ಎಂಬುದನ್ನು ಹೇಳಲೆಂದೇ ಈ ಪೋಸ್ಟರ್ ಅನ್ನು ಮಾಡಿ ಹರಿಬಿಟ್ಟಿರುವುದು ವೇದ್ಯವಾಗುತ್ತದೆ.

'ಪುಷ್ಪ'ನಿಗೆ ಹಿಂದು ಆರೈಕೆ, ರಾಕಿ ಭಾಯ್ಗೆ ಮುಸ್ಲಿಂ ಆರೈಕೆ
'ಪುಷ್ಪ' ಸಿನಿಮಾದಲ್ಲಿ ಪುಷ್ಪ ರಾಜ್ ಅನ್ನು ಹಿಂದು ತಾಯಿಯೊಬ್ಬರು ಬೆಳೆಸುತ್ತಾಳೆ. ಆದರೆ 'ಕೆಜಿಎಫ್' ಸಿನಿಮಾದಲ್ಲಿ ರಾಕಿ ಭಾಯ್ ಅನ್ನು ಮುಸ್ಲಿಂ ವ್ಯಕ್ತಿ ಖಾಸಿಂ ಬೆಳೆಸುತ್ತಾನೆ ಎಂಬುದನ್ನು ಪೋಸ್ಟರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಪೋಸ್ಟರ್ ಮಾಡಿರುವ ಧರ್ಮಾಂದ ರಾಕಿ ಭಾಯ್ ತಾಯಿಯನ್ನು ಮರೆತಂತಿದೆ ಅಥವಾ 'ಕೆಜಿಎಫ್'ಗೆ ಹಿಂದು ವಿರೋಧಿ ಪಟ್ಟ ಕಟ್ಟಲೆಂದೇ ಈ ವಿಷಯವನ್ನು ಮರೆಮಾಚಿದ್ದಾನೇನೋ?. 'ಪುಷ್ಪ' ಸಿನಿಮಾದಲ್ಲಿ ಪುಷ್ಪರಾಜ್ ಅನ್ನು ಕೊಂಡಾ ರೆಡ್ಡಿ ಎಂಬಾತ ಗುರುತಿಸಿ ಆತನನ್ನು ಪಾರ್ಟರ್ ಮಾಡಿಕೊಳ್ಳುತ್ತಾನೆ. ರಾಕಿ ಭಾಯ್ ಅನ್ನು ಕ್ರಿಶ್ಚಿಯನ್ ವ್ಯಕ್ತಿ ಆಂಡ್ರಿವ್ಸ್ ಗುರುತಿಸುತ್ತಾನೆ ಎಂದು ವ್ಯತ್ಯಾಸ ನಮೂದಿಸಲಾಗಿದೆ ಪೋಸ್ಟರ್ನಲ್ಲಿ.

'ಪುಷ್ಪ' ವಿವಾಹವಾಗುವುದು ಸ್ವಜಾತಿ ಯುವತಿಯನ್ನು
'ಪುಷ್ಪ' ಸಿನಿಮಾದಲ್ಲಿ ಪುಷ್ಪರಾಜ್, ತನ್ನದೇ ಜಾತಿಯ ಶ್ರೀವಲ್ಲಿಯನ್ನು ವಿವಾಹವಾಗುತ್ತಾನೆ. ಆದರೆ 'ಕೆಜಿಎಫ್ 2' ನಲ್ಲಿ ರಾಕಿಭಾಯ್ ಪ್ರೀತಿಸುವ ರೀನಾಳ ಜಾತಿ ಸಹ ಅವನಿಗೆ ಗೊತ್ತಿಲ್ಲ ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ. ಪೋಸ್ಟರ್ ಮಾಡಿವನಿಗೆ ಅಂತರ್ಜಾತೀಯ ವಿವಾಹದ ವಿರುದ್ಧ ಮಹಾ ದ್ವೇಷವಿದ್ದಂತಿದೆ.

'ಪುಷ್ಪ' ಮಾಡಿದ್ದು ಧರ್ಮ, ರಾಕಿ ಭಾಯ್ ಮಾಡಿದ್ದು ಅಧರ್ಮವೇ?
'ಪುಷ್ಪ' ಸಿನಿಮಾದಲ್ಲಿ ಪುಷ್ಪರಾಜ್ನ ಗುರು ಕೊಂಡಾರೆಡ್ಡಿಯನ್ನು ಕೊಂದ ಮುಗಿಲೇಸುವನ್ನು ಪುಷ್ಪ ಕೊಲ್ಲುತ್ತಾನೆ ಅದು ಧರ್ಮ. ಆದರೆ ರಾಕಿ ಭಾಯ್, ಗರುಡನನ್ನು ಕೊಲ್ಲುತ್ತಾನೆ ಅದೂ ಆತ ಪೂಜೆ ಮಾಡುವಾಗ, ಅದು ಅಧರ್ಮ ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ. ಇಲ್ಲಿ ಗರುಡ ಪೂಜೆ ಮಾಡುತ್ತಿರುವುದನ್ನು ಮಾತ್ರವೇ ಹೇಳಲಾಗಿದೆಯೇ ಹೊರತು, ಗರುಡ ಎಂಥಹಾ ರಾಕ್ಷಸನಾಗಿದ್ದ ಎಂಬುದನ್ನಲ್ಲ. ಪೋಸ್ಟರ್ ಮಾಡಿದವನ ಪ್ರಕಾರ ಎಂಥಹಾ ಕ್ರೂರಿಯಾದರೂ ಪೂಜೆ ಮಾಡಿಬಿಟ್ಟರೆ ಅವನು ಪುಣ್ಯಾತ್ಮನಾಗಿಬಿಡುತ್ತಾನೆ!

'ಕೆಜಿಎಫ್' ಅನ್ನು 'ಖಾನ್ ಜಿಎಫ್' ಎಂದು ತಿದ್ದಿದ ಧರ್ಮಾಂಧರು
'ಪುಷ್ಪ' ಸಿನಿಮಾದಲ್ಲಿ ಪುಷ್ಪರಾಜ್ಗೆ ಒಬ್ಬ ಗೆಳೆಯನಿರುತ್ತಾನೆ, ಅವನು ಸದಾ ಪುಷ್ಪರಾಜ್ಗೆ ಸಹಾಯ ಮಾಡುತ್ತಿರುತ್ತಾನೆ ಅವನ ಹೆಸರು ಕೇಶವ ಅವನು ಹಿಂದು. ಅದೇ 'ಕೆಜಿಎಫ್ 2' ಸಿನಿಮಾದಲ್ಲಿ ರಾಕಿ ಭಾಯ್ ಸಹಾಯ ಕೇಳಿಕೊಂಡು ಇನಾಯತ್ ಖಲೀಲ್ ಬಳಿಗೆ ಹೋಗುತ್ತಾನೆ ಆತ ಅರಬ್ ಮುಸ್ಲಿಂ. ಪೋಸ್ಟರ್ನಲ್ಲಿ 'ಕೆಜಿಎಫ್' ಅನ್ನು ವ್ಯಂಗ್ಯದ ರೀತಿಯಲ್ಲಿ 'ಖಾನ್ ಜಿಎಫ್' ಎಂದು ಬರೆಯಲಾಗಿದೆ. ಹಲವರು ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಈ ಪೋಸ್ಟರ್ಗೆ ತೀವ್ರ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. 'ಕೆಜಿಎಫ್'ಗೆ ಧರ್ಮವಿರೋಧಿ ಪಟ್ಟ ಕಟ್ಟಲೆಂದು ಮಾಡಿರುವ ಉದ್ದೇಶಪೂರ್ವಕ ಕುತಂತ್ರವೆಂದು ಕೆಲವರು ಅನುಮಾನಿಸಿದ್ದಾರೆ.