ಸಾನ್ವಿ ಸುದೀಪ್ ಹೇಳಿಕೆ ತಿರುಚಿದ ಕಿಡಿಗೇಡಿಗಳು; ಸೈಬರ್ ದೂರಿಗೆ ಅಭಿಮಾನಿಗಳ ಮನವಿ

ಸೆಲೆಬ್ರೆಟಿಗಳ ಪರ್ಸನಲ್ ಲೈಫ್, ಕರಿಯರ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಬಹಳ ಆಸಕ್ತಿ ಇರುತ್ತದೆ. ನಟ, ನಟಿಯರು ಸಂದರ್ಶನಗಳನ್ನು ಕೇಳುತ್ತಿರುತ್ತಾರೆ. ಇಂಟ್ರೆಸ್ಟಿಂಗ್ ಸುದ್ದಿಗಳನ್ನು ಓದುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿ ಸುಳ್ಳು ಸುದ್ದಿಗಳ ಆರ್ಭಟ ಜೋರಾಗಿದೆ.

ಬರೀ ಸುಳ್ಳು ಸುದ್ದಿ ಮಾತ್ರವಲ್ಲ ಸೆಲೆಬ್ರೆಟಿಗಳು ಮಾತನಾಡಿದ್ದನ್ನು ತಿರುಚುವ ಪ್ರಯತ್ನ ಕೂಡ ನಡೆಯುತ್ತದೆ. ಕೆಲವೊಮ್ಮೆ ಸತ್ಯಾಂಶ ತಿಳಿಯದೇ ಅದನ್ನೇ ಸತ್ಯ ಎಂದು ನಂಬುವವರು ಇದ್ದಾರೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಅದರಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.

Miscreants distort Kichcha Sudeep daughter Sanvi s statement fans upset

ತಮ್ಮ ಓದು, ಹವ್ಯಾಸ, ಚಿತ್ರರಂಗಕ್ಕೆ ಬರುವ ಆಸಕ್ತಿ, ಯಶ್ ಸೇರಿದಂತೆ ಕೆಲ ತಾರೆಯರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆಯೂ ಸಾನ್ವಿ ಕೆಲ ಸಂಗತಿ ಬಿಚ್ಚಿಟ್ಟಿದ್ದರು. 'ದಬಾಂಗ್- 3' ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಅಬ್ಬರಿಸಿದ್ದರು. ಚಿತ್ರೀಕರಣಕ್ಕೆ ಹೋದಾಗ ಮಗಳನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದರು.

ಸಲ್ಮಾನ್ ಖಾನ್ 'ಪನ್ವೆಲ್' ಹೆಸರಿನ ದೊಡ್ಡ ಫಾರ್ಮ್ ಹೌಸ್ ಹೊಂದಿದ್ದಾರೆ. ಸಲ್ಲು ಆಪ್ತರು ಆಗಾಗ್ಗೆ ಅಲ್ಲಿ ಸೇರಿ ಕಾಲ ಕಳೆಯುತ್ತಾರೆ. ಪಾರ್ಟಿ ಅಂತೆಲ್ಲಾ ಎಂಜಾಯ್ ಮಾಡುತ್ತಾರೆ. 'ದಬಾಂಗ್-3' ಶೂಟಿಂಗ್ ವೇಳೆ ಸುದೀಪ್ ಫ್ಯಾಮಿಲಿಯನ್ನು ಸಲ್ಲು ತಮ್ಮ ಫಾರ್ಮ್‌ಹೌಸ್‌ಗೆ ಆಹ್ವಾನಿಸಿದ್ದರು. 3 ದಿನಗಳ ಕಾಲ ನಾನು ಅಲ್ಲಿದ್ದೆ ಎಂದು ಜಿನಲ್ ಮೋದಿ ಎಂಬ ಐಟ್ಯೂಬ್ ಸಂದರ್ಶನದಲ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಆಗ ನನಗೆ 14 ವರ್ಷ ವಯಸ್ಸು, ಅಪ್ಪ ಮೊದಲು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್​ಮೆಂಟ್‌ಗೆ ಸರ್‌ಪ್ರೈಸ್ ಆಗಿ ಕರೆದುಕೊಂಡು ಹೋಗಿದ್ದರು. ಸಲ್ಮಾನ್ ಖಾನ್ ಅವರನ್ನು ಹತ್ತಿರದಿಂದ ನೋಡಿ ಶಾಕ್ ಆಗಿತ್ತು. ನಾನು ಹಾಡುವುದನ್ನು ಕೇಳಿ ನಿರ್ದೇಶಕರಿಗೆ ಕರೆ ಮಾಡಿ ಟ್ರ್ಯಾಕ್ ರೆಕಾರ್ಡ್ ಮಾಡಿಸಲು ಹೇಳಿದ್ದರು. ಅಗತ್ಯವಿದ್ದರೆ ನನ್ನ ಹಾಡು ಬಳಸಿಕೊಳ್ಳಿ ಎಂದು ಹೇಳಿದ್ದರು. ಚಿತ್ರದಲ್ಲಿ ನನ್ನ ಹಾಡು ಬಳಸಿಕೊಳ್ಳದಿದ್ದರೂ ಸಲ್ಮಾನ್ ಸರ್ ನನ್ನ ಹಾಡು ಮೆಚ್ಚಿದ್ದರು" ಎಂದು ಸಾನ್ವಿ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಸಾನ್ವಿ "ಮರುದಿನ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ನನ್ನನ್ನು ಕರೆದುಕೊಂಡು ಹೋದರು. 3 ದಿನ ಅಲ್ಲಿದ್ದೆ. ಜಿಮ್‌ಗೆ ಕರೆದುಕೊಂಡು ಹೋಗಿದ್ದರು, ಈಜಲು ಹೋಗುತ್ತಿದ್ದೆವು. ಕಾರು, ಬೈಕ್ ಏರಿ ಫಾರ್ಮ್‌ಹೌಸ್‌ನಲ್ಲಿ ಸುತ್ತಾಡಿದೆವು. ಅದನ್ನೆಲ್ಲಾ ಸಖತ್ ಎಂಜಾಯ್ ಮಾಡ್ದೆ. ನನ್ನ ಜೀವನದಲ್ಲಿ ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ" ಎಂದು ಸಾನ್ವಿ ವಿವರಿಸಿದ್ದಾರೆ.

ಸಾನ್ವಿ ಸುದೀಪ್ ಮಾತನಾಡಿರುವ ಹೇಳಿಕೆಯನ್ನು ಕಿಡಿಗೇಡಿಗಳು ಕೊಂಚ ತಿರುಚಿ ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ಬಗ್ಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟ್ಟರ್‌ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಸರಿಯಾಗಿ ಅರ್ಥ ಮಾಡಿಕೊಂಡು ಕಾಮೆಂಟ್ ಮಾಡಿ. ಕೆಟ್ಟದಾಗಿ ಏನೇನೋ ಕಾಮೆಂಟ್ ಮಾಡುವುದಲ್ಲ ಎಂದು ಸುದೀಪ್ ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೇ ಸಂದರ್ಶನದಲ್ಲಿ ಸಾನ್ವಿ ತಮ್ಮ ವಿದ್ಯಾಭ್ಯಾಸದ ಬಗ್ಗೆಯೂ ಮಾತನಾಡಿದ್ದಾರೆ. ಪಿಯುಸಿವರೆಗೆ ಓದಿದ್ದೇನೆ. ಬಳಿಕ ನಾಲ್ಕು ತಿಂಗಳುಗಳ ಕಾಲ ಅನ್ನಪೂರ್ಣ ಸ್ಟುಡಿಯೋದಲ್ಲಿ ಆಕ್ಟಿಂಗ್‌ ಕೋರ್ಸ್‌ ಮಾಡಿದ್ದಾಗಿ ತಿಳಿಸಿದ್ದಾರೆ.

ಸಿನಿಮಾದಲ್ಲಿ ನನಗೆ ನಾಯಕಿಯಾಗಿ ನಟಿಸೋಕೆ ಇಷ್ಟವಿಲ್ಲ. ಕೆಲ ದಿನಗಳ ಹಿಂದೆ ಒಂದು ಫೋಟೊಶೂಟ್ ಮಾಡಿಸಿದ್ದೆ. ಅದರಲ್ಲಿ ನನ್ನನ್ನು ನೋಡಿ ವಿಲನ್ ಪಾತ್ರಕ್ಕೆ ಸೂಕ್ತ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು. ಬೇರೊಬ್ಬರ ನಾಯಕಿಯಾಗಿ ನಟಿಸುವ ಪಾತ್ರ ಬೇಕಿಲ್ಲ ಎಂದಿದ್ದಾರೆ. ಇನ್ನು ನಾನು ಮೊದಲು ದಪ್ಪ ಇದ್ದೆ. ಬಳಿಕ ಡಯೆಟ್, ವರ್ಕೌಟ್ ಮಾಡಿ ತೂ ಇಳಿಸಿಕೊಂಡಿದ್ದೇನೆ ಎಂದು ಸಾನ್ವಿ ವಿವರಿಸಿದ್ದಾರೆ.

'ದಬಾಂಗ್- 3' ಚಿತ್ರದ ಬಗ್ಗೆ ಹೇಳುವುದಾದರೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಸಲ್ಲು 3ನೇ ಬಾರಿ ಚುಲ್‌ಬುಲ್ ಪಾಂಡೆ ಆಗಿ ನಟಿಸಿದ್ದ ಸಿನಿಮಾ ಅದು. ಚಿತ್ರದಲ್ಲಿ ಬಲಿ ಸಿಂಗ್ ಎಂಬ ಖಳನ ಪಾತ್ರದಲ್ಲಿ ಸುದೀಪ್ ಅಬ್ಬರಿಸಿದ್ದರು. ಕಿಚ್ಚನ ಆರ್ಭಟಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.

Take a Poll

More from Filmibeat

English summary
Miscreants twist Kichcha Sudeep's daughter Sanvi's statement, Fans express outrage
Read more about: sudeep salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X