ರವಿಚಂದ್ರನ್ ಪುತ್ರ ಮನೋರಂಜನ್ ಎರಡನೇ ಚಿತ್ರದ ನಾಯಕಿ ಇವರೇ ನೋಡಿ
'ಸಾಹೇಬ' ಚಿತ್ರದ ನಂತರ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಎರಡನೇ ಸಿನಿಮಾದ ಚಿತ್ರೀಕರಣ ಕೂಡ ಅನೇಕ ದಿನದಿಂದ ನಡೆಯುತ್ತಿದೆ. ಜೊತೆಗೆ ಸಿನಿಮಾದ ನಾಯಕಿಯ ಬಗ್ಗೆ ಸುದ್ದಿಯೊಂದು ಇದೀಗ ಹೊರಬಂದಿದೆ.
ಈ ಚಿತ್ರಕ್ಕೆ ನಟಿ ಮಿಶ್ಟಿ ಚಕ್ರಬಾರ್ತಿ (mishti chakraborty) ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ. ಈಗಾಗಲೇ ಈ ನಟಿ ಬಾಲಿವುಡ್ ನಲ್ಲಿ 'ಬೇಗಂ ಜಾನ್' ಸೇರಿದಂತೆ ಕೆಲ ಸಿನಿಮಾಗಳನ್ನು ಮಾಡಿದ್ದಾರೆ. ತಮಿಳಿನಲ್ಲಿ ಅಮಲ ಪೌಲ್ ಮಾಡಿದ ಪಾತ್ರವನ್ನು ಮಿಶ್ಟಿ ಚಕ್ರಬಾರ್ತಿ (mishti chakraborty) ನಿರ್ವಹಿಸಲಿದ್ದಾರೆ. ಅಂದಹಾಗೆ, ಸದ್ಯ ಹೀರೋಯಿನ್ ಭಾಗದ ಚಿತ್ರೀಕರಣ ಕೂಡ ನಡೆಯುತ್ತಿದೆ. ನಂದ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರೀಕರಣದ ಕೆಲ ಮೇಕಿಂಗ್ ಪೋಟೋಗಳು ಹೊರಬಂದಿದೆ. ಇಲ್ಲಿ ನಾಯಕ ಮನೋರಂಜನ್ ಮತ್ತು ನಾಯಕಿ ಮೈಸೂರು ಅರಮನೆ ಮುಂದೆ ನಿಂತ್ತಿದ್ದಾರೆ. ಜಂಬು ಸವಾರಿ ತಯಾರಿಯ ಸಂಭ್ರಮದಲ್ಲಿ ಸಿನಿಮಾದ ಶೂಟಿಂಗ್ ಕೂಡ ಸಾಗಿದೆ. ಅಂದಹಾಗೆ, ಈ ಚಿತ್ರಕ್ಕೆ ಈಗ' ಸನ್ ಆಫ್ ರವಿಚಂದ್ರನ್' ಎಂಬ ಟೈಟಲ್ ಇಡುವ ಸಾಧ್ಯತೆ ಇದೆ.


Click it and Unblock the Notifications











