For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಲು ಬರ್ತಿದ್ದಾಳೆ ಮಿಸ್ ದೀವಾ

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ಈಗಾಗಲೇ ಮಿಸ್ ದೀವಾಗಳು ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ಅದೇ ಸಾಲಿನಲ್ಲಿ 2016ರಲ್ಲಿ ಮಿಸ್ ದಿವಾ ಮುಕುಟ ಗೆದ್ದುಕೊಂಡ ರೋಷ್ಮಿತಾ ಹರಿಮೂರ್ತಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

  ಮಾಡೆಲಿಂಗ್ ನಲ್ಲಿ ಸಾಕಷ್ಟು ಹೆಸರು ಗಳಿಸಿರುವ ರೋಷ್ಮಿತಾ ಹರಿಮೂರ್ತಿ ಚಂದನವನಕ್ಕೆ ಕಾಲಿಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನವರೇ ಆದ ರೋಷ್ಮಿತಾ ಸದ್ಯ ಮುಂಬೈನಲ್ಲಿ ಚಿತ್ರರಂಗಕ್ಕೆ ಬರುವ ಮುನ್ನ ಬೇಕಿರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

  ಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿ

  ಕನ್ನಡ ಚಿತ್ರರಂಗದಿಂದಲೇ ವೃತ್ತಿ ಜೀವನ ಆರಂಭ ಮಾಡಬೇಕೆಂದು ಆಸೆ ಹೊತ್ತಿರುವ ರೋಷ್ಮಿತಾ ಮುಂಬೈನಲ್ಲಿ ಬಾಲಿವುಡ್ ಚಿತ್ರಗಳಿಗೆ ಆಡಿಷನ್ ಕೊಡುತ್ತಿದ್ದಾರೆ.

  ಹಿಂದಿನಿಂದಲೂ ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಕೊಂಡಿದ್ದ ರೋಷ್ಮಿತಾ ಅವರಿಗೆ ಪುನೀತ್ ರಾಜ್ ಕುಮಾರ್ , ಸುದೀಪ್ ಹಾಗೂ ಯಶ್ ಅವರ ಸಿನಿಮಾಗಳನ್ನ ನೋಡಿ ಚಿತ್ರಗಳಲ್ಲಿ ನಟಿಸುವ ಆಸೆ ಮತ್ತಷ್ಟು ಹೆಚ್ಚಾಗಿದೆಯಂತೆ.

  ಸಿನಿಮಾಗಾಗಿ ಮಾರ್ಷಲ್ ಆರ್ಟ್ಸ್ ಹಾಗೂ ಡ್ಯಾನ್ಸ್ ಅಭ್ಯಾಸ ಮಾಡುತ್ತಿರುವ ರೋಷ್ಮಿತಾ ಆದಷ್ಟು ಬೇಗ ಕನ್ನಡ ಚಿತ್ರರಂಗದಲ್ಲಿ ನಾಯಕಿ ಆಗಿ ಮಿಂಚುವ ಭರವಸೆಯನ್ನು ಹೊಂದಿದ್ದಾರೆ. ಕನ್ನಡದಲ್ಲಿ ನಾಯಕಿಯರಿಲ್ಲ ಎಂದು ದೂರುವ ನಿರ್ದೇಶಕರು ಹಾಗೂ ನಿರ್ಮಾಪಕರ ಕಣ್ಣಿಗೆ ರೋಷ್ಮೀತಾ ಆದಷ್ಟು ಬೇಗ ಕಾಣಿಸಿಕೊಳ್ಳಲಿ ಎನ್ನುವುದು ನಮ್ಮ ಆಶಯ.

  English summary
  Roshamita Harimurthy, who won the Miss Diva crown in 2016, is ready to act as heroine in Kannada cinema. Roshanmita Harimurthy is currently preparing for the film in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X