Miss Universe Portugal 2023: ಮೊದಲ ಬಾರಿಗೆ ಮಿಸ್ ಪೋರ್ಚುಗಲ್ ಕಿರೀಟ ತೊಟ್ಟ ಟ್ರಾನ್ಸ್‌ಜೆಂಡರ್ ಮಹಿಳೆ
28 ವರ್ಷದ ಫ್ಲೈಟ್ ಅಟೆಂಡೆಂಟ್ ಮರೀನಾ ಮ್ಯಾಚೆಟೆ ಅವರು ಆಗ್ನೇಯ ಇವೊರಾ ಪ್ರದೇಶದ ಬೋರ್ಬಾದಲ್ಲಿ ಮಿಸ್ ಪೋರ್ಚುಗಲ್ 2023 ರ ಕಿರೀಟವನ್ನು ಮುಗಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಟ್ರಾನ್ಸ್‌ಜೆಂಡರ್ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಮಿಸ್ ಪಾಲ್ಮೆಲಾ ಆಗಿರುವ ಮರೀನಾ ಮ್ಯಾಚೆಟೆ ಅವರು ಮಿಸ್ ಯೂನಿವರ್ಸ್ ಪೋರ್ಚುಗಲ್ 2023 ರ ಕಿರೀಟವನ್ನು ಅಕ್ಟೋಬರ್ 5 ರಂದು ಎವೊರಾ ಜಿಲ್ಲೆಯ ಬೋರ್ಬಾದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. 28 ವರ್ಷದ ಈ ಸುಂದರಿ 16 ಫೈನಲಿಸ್ಟ್‌ಗಳನ್ನು ದಾಟಿ ಕಿರೀಟ ಮುಡಿಗೇರಿಸಿಕೊಂಡರು. ಕಿರೀಟದ ಹೊರತಾಗಿ, ಅವರು ಮಿಸ್ ಬ್ಯೂಟಿಫುಲಿ ಕಾನ್ಫಿಡೆಂಟ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಮಿಸ್ ಯೂನಿವರ್ಸ್ ಪೋರ್ಚುಗಲ್ ಆದ ಮೊದಲ ಟ್ರಾನ್ಸ್‌ಜೆಂಡರ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರ ಗೆಲುವು ಐತಿಹಾಸಿಕವಾಗಿತ್ತು. "ಮಿಸ್ ಯೂನಿವರ್ಸ್ ಪೋರ್ಚುಗಲ್ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಟ್ರಾನ್ಸ್‌ಜೆಂಡರ್ ಮಹಿಳೆ ಎಂಬುದಕ್ಕೆ ನನಗೆ ಹೆಮ್ಮೆಯಿದೆ" ಎಂದು ಅವರು ಪ್ರಶಸ್ತಿಯನ್ನು ಗೆಲ್ಲುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.
"ಹಲವು ವರ್ಷಗಳವರೆಗೆ ನನಗೆ ಈ ಸ್ವರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ . ಆದರೆ ಈಗ ನಾನು ಈ ಸುಂದರವಾದ ಫೈನಲಿಸ್ಟ್‌ಗಳ ಗುಂಪಿನ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ" ಎಂದು ಅವರು ಹೇಳಿದರು. ಈ ನವೆಂಬರ್‌ನಲ್ಲಿ ಎಲ್ ಸಾಲ್ವಡಾರ್‌ನಲ್ಲಿ ನಡೆಯುವ ಮಿಸ್ ಯೂನಿವರ್ಸ್ 2023 ರಲ್ಲಿ ತನ್ನ ದೇಶವನ್ನು ಪ್ರತಿನಿಧಿಸಲು ಮರೀನಾ ಮ್ಯಾಚೆಟೆ ತಯಾರಿ ನಡೆಸುತ್ತಿದ್ದಾರೆ.

ಜುಲೈನಲ್ಲಿ, 22 ವರ್ಷದ ಡಚ್ ಮಹಿಳೆ ರಿಕ್ಕಿ ಕೊಲ್ಲೆ ಮಿಸ್ ನೆದರ್ಲ್ಯಾಂಡ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಟ್ರಾನ್ಸ್ಜೆಂಡರ್ ಮಹಿಳೆಯಾಗಿದ್ದಾರೆ. ಇನ್ನು, 2018 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಗಾಗಿ ಮೊದಲ ಟ್ರಾನ್ಸ್ಜೆಂಡರ್ ಅಭ್ಯರ್ಥಿಯಾದ ಸ್ಪೇನ್‌ನ ಏಂಜೆಲಾ ಪೊನ್ಸ್ ಅವರ ಬಳಿಕ ಇಂತಹ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರ ಸಾಲಿನಲ್ಲಿ ಮರೀನಾ ಮ್ಯಾಚೆಟ್ ಮತ್ತು ರಿಕ್ಕಿ ಕೊಲ್ಲೆ ಇತಿಹಾಸ ಬರೆದಿದ್ದಾರೆ.


Click it and Unblock the Notifications











