twitter
    For Quick Alerts
    ALLOW NOTIFICATIONS  
    For Daily Alerts

    'ಮಿಸ್ಸಿಂಗ್ ಬಾಯ್' : ಇದು ಕರ್ನಾಟಕದಲ್ಲಿ ನಡೆದ ಅಪರೂಪದ ನೈಜ ಕತೆ

    |

    ನೈಜ ಕಥೆಯ ಸಿನಿಮಾಗಳು ಕನ್ನಡಕ್ಕೆ ಹೊಸತೇನು ಅಲ್ಲ. ಈಗಾಗಲೇ ನೈಜ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಮುಂದೆಯೂ ಬರುತ್ತವೇ ಕೂಡ. ಆದರೆ, ಸದ್ಯ, ಬಂದಿರುವ 'ಮಿಸ್ಸಿಂಗ್ ಬಾಯ್' ಒಂದು ವಿಶೇಷ ಸಿನಿಮಾವಾಗಿದೆ.

    ಇದು ಕರ್ನಾಟಕ ಪೊಲೀಸರು ಕಂಡ ಕುತೂಹಲಕಾರಿ ಘಟನೆಗಳಲ್ಲಿ ಪ್ರಮುಖವಾಗಿದೆ. 5 ವರ್ಷದ ಒಬ್ಬ ಹುಡುಗನ ಜೀವನದಲ್ಲಿ ನಡೆದ ಈ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇಂತಹ ಕಥೆಯನ್ನು ನಿರ್ದೇಶಕ ರಘುರಾಮ್ ಸಿನಿಮಾ ಮಾಡಿದ್ದಾರೆ. ಅದೇ 'ಮಿಸ್ಸಿಂಗ್ ಬಾಯ್'. ಈ ಸಿನಿಮಾ ಇದೇ ತಿಂಗಳ 22 ರಂದು ಬಿಡುಗಡೆ ಆಗುತ್ತಿದೆ.

     'ಮಿಸ್ಸಿಂಗ್ ಬಾಯ್'ನನ್ನು ಹುಡುಕಿ ಕೊಟ್ಟ ಕಿಚ್ಚ ಸುದೀಪ್ 'ಮಿಸ್ಸಿಂಗ್ ಬಾಯ್'ನನ್ನು ಹುಡುಕಿ ಕೊಟ್ಟ ಕಿಚ್ಚ ಸುದೀಪ್

    'ಮಿಸ್ಸಿಂಗ್ ಬಾಯ್' ಒಂದು ಸಾಮಾನ್ಯ ಕಮರ್ಷಿಯಲ್ ಕಥೆಯಲ್ಲ. ಈ ಸಿನಿಮಾದ ಕಥೆ ಕೇಳಿದರೆ ಎಲ್ಲರಿಗೂ ಒಂದು ಕ್ಷಣ ಶಾಕ್ ಆಗುತ್ತದೆ. 1973-74 ರಲ್ಲಿ ನಡೆದ ರೋಚಕ ಕಥೆಯು ಪರದೆ ಮೇಲೆ ಪ್ರಜ್ವಲಿಸಲು ಕೆಲವೇ ದಿನಗಳ ಬಾಕಿ ಇದೆ.

    ಅಂದಹಾಗೆ, 'ಮಿಸ್ಸಿಂಗ್ ಬಾಯ್' ಸಿನಿಮಾ ನೋಡುವ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿ ಇರಲಿ. ಮುಂದೆ ಓದಿ...

    ಜೋನಾಥನ್ ಎಂಬ ಹುಡುಗನ ಕಥೆ

    ಜೋನಾಥನ್ ಎಂಬ ಹುಡುಗನ ಕಥೆ

    'ಮಿಸ್ಸಿಂಗ್ ಬಾಯ್' ಕಥೆ ಇರುವುದು ಜೋನಾಥನ್ ಎಂಬ ಹುಡುಗ ಬಗ್ಗೆ. ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದ ಒಂದು ಊರಿನಲ್ಲಿ ಜೋನಾಥನ್ ಹುಟ್ಟುತ್ತಾನೆ. ರೈಲ್ವೆ ನಿಲ್ದಾಣದಿಂದ ಮಿಸ್ ಆಗುವ ಈ ಹುಡುಗ ಬೆಂಗಳೂರು ತಲುಪುತ್ತಾನೆ. ಮುಂದೆ ಬೆಂಗಳೂರಿನ ಪೊಲೀಸರೇ ಆತವನ್ನು ಆಶ್ರಮಕ್ಕೆ ಸೇರಿಸುತ್ತಾರೆ.

    ಮತ್ತೆ ಗುರುನಂದನ್ ಸಹಾಯಕ್ಕೆ ಬಂದ ಸುದೀಪ್ ಮತ್ತೆ ಗುರುನಂದನ್ ಸಹಾಯಕ್ಕೆ ಬಂದ ಸುದೀಪ್

    ಸ್ವೀಡನ್ ಗೆ ಸೇರುವ ಹುಡುಗ

    ಸ್ವೀಡನ್ ಗೆ ಸೇರುವ ಹುಡುಗ

    ಆಶ್ರಮದಲ್ಲಿ ಇರುವ ಜೋನಾಥನ್ ನನ್ನು ದಂಪತಿಯೊಬ್ಬರು ದತ್ತು ಪಡೆಯುತ್ತಾರೆ. ಮುಂದೆ ಈ ಹುಡುಗ ಈ ದಂಪತಿಯ ಮಗನಾಗಿ ಸ್ವೀಡನ್ ಸೇರುತ್ತಾನೆ. ಹೀಗಿರುವಾಗ, 25 ವರ್ಷಗಳ ಬಳಿಕ ಜೋನಾಥನ್ ಗೆ ನನ್ನ ತಾಯ್ನಡು, ತನ್ನ ತಂದೆ, ತಾಯಿ ಯಾರೆಂದು ತಿಳಿದುಕೊಳ್ಳುವ ಆಸೆ ಆಗುತ್ತದೆ. ಅಲ್ಲಿಂದಲೇ ಈ ಸಿನಿಮಾ ಶುರು ಆಗುತ್ತದೆ.

    ಪೊಲೀಸರ ಕಾರ್ಯ ಮೆಚ್ಚಬೇಕು

    ಪೊಲೀಸರ ಕಾರ್ಯ ಮೆಚ್ಚಬೇಕು

    ವಾಪಸ್ ಬೆಂಗಳೂರಿಗೆ ಬರುವ ಜೋನಾಥನ್ ನನ್ನು ಪೊಲೀಸರು ಗೂಡು ಸೇರಿಸುತ್ತಾರೆ. ಅದು ಹೇಗೆ..? ಎನ್ನುವ ದೊಡ್ಡ ಕುತೂಹಲಕಾರಿ ಕಥೆಯೇ 'ಮಿಸ್ಸಿಂಗ್ ಬಾಯ್'. ಇಂತಹ ಸುಂದರ ಕಥೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಸ್ವಲ್ಪ ಮಾಡಿ, ಕಮರ್ಷಿಯಲ್ ಅಂಶಗಳು ಮೂಲಕ ಸಿನಿಮಾ ಮಾಡಲಾಗಿದೆ.

    ಒಂದು ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು

    ಒಂದು ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು

    ಒಂದು ಕಾಲದಲ್ಲಿ ಈ ಕಥೆ ಬಹಳ ಸುದ್ದಿ ಮಾಡಿತ್ತು. ಉದಯ ಟಿವಿಯ 'ಕ್ರೈಮ್ ಸ್ಟೋರಿ' ಕಾರ್ಯಕ್ರಮದಲ್ಲಿ ಮೂರು ಸಂಚಿಕೆಗಳ ಮೂಲಕ ಈ ಕಥೆ ಹೇಳಿದ್ದರು, ಎಂದ ಮೇಲೆ ಈ ಕಥೆಯ ರೋಚಕತೆ ಎಷ್ಟಿದೆ ಎನ್ನುವುದನ್ನು ನೀವೇ ಊಹೆ ಮಾಡಿದೆ. ಇದು ಕರು ಹಸುವನ್ನು ಸೇರುವ ಕಥೆ. ಇಂತಹ ಭಾವನಾತ್ಮಕ ಕಥೆ ಕರುನಾಡಿನ ಜನಕ್ಕೂ ಇಷ್ಟ ಆಗಬಹುದು.

    English summary
    Actor Gurunandan 'Missing Boy' kannada movie is a real story real story based movie. The movie is directed by Raghu Ram. 'Missing Boy' will be releasing on March 22.
    Friday, March 15, 2019, 18:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X