'ಮಿಸ್ಸಿಂಗ್ ಬಾಯ್'ನನ್ನು ಹುಡುಕಿ ಕೊಟ್ಟ ಕಿಚ್ಚ ಸುದೀಪ್

'ಮಿಸ್ಸಿಂಗ್ ಬಾಯ್'ನನ್ನು ನಟ ಸುದೀಪ್ ಹುಡುಕಿಕೊಟ್ಟಿದ್ದಾರೆ. ಅರ್ಥಾತ್ 'ಮಿಸ್ಸಿಂಗ್ ಬಾಯ್' ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಈ ಕಾರ್ಯಕ್ರಮ ನಡೆದಿದೆ.

ಸಿನಿಮಾದ ಟ್ರೇಲರ್ ಎಲ್ಲರ ಮೆಚ್ಚುಗೆ ಪಡೆದಿದೆ. ಶಿವಣ್ಣ ಧ್ವನಿಯ ಮೂಲಕ ಕಥೆಯ ನಿರೂಪಣೆ ಕೇಳುವುದು ಸೊಗಸಾಗಿದೆ. ಮುಖ್ಯವಾಗಿ ಚಿತ್ರದ ಕ್ಯಾಮರಾ ವರ್ಕ್ ಹಾಗೂ ಎಮೋಷನ್ಸ್ ಚೆನ್ನಾಗಿ ಮೂಡಿ ಬಂದಿದೆ.

ಶ್ರೀಮಂತನಾಗಿರುವ ಕಥಾ ನಾಯಕ ತಾಯಿ ಮತ್ತು ತಾಯ್ನಡನ್ನು ಹುಡುಕಿಕೊಂಡು ಹೋಗುವ ಕಥೆಯೇ ಈ ಸಿನಿಮಾವಾಗಿದೆ. 5 ವರ್ಷದ ಒಬ್ಬ ಹುಡುಗ ತಂದೆ, ತಾಯಿಯಿಂದ ತಪ್ಪಿಸಿಕೊಂಡು ಹೋಗುತ್ತಾನೆ. ಮತ್ತೆ ಆ ಹುಡುಗ ತನ್ನ ತಾಯಿಯ ಮಡಿಲು ಸೇರುತ್ತಾನೆಯೇ ? ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

missing boy kannada movie trailer will be released by sudeep

ರಘು ರಾಮ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕೊಲ್ಲ ಎಂಟಟೈನ್ಮೆಂಟ್ ಚಿತ್ರದ ನಿರ್ಮಾಣ ಮಾಡಿದೆ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ.

ರಘುನಂದನ್, ರಂಗಾಯಣ ರಘು, ಸುಮಿತ್ರ, ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 22 ರಂದು ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.

More from Filmibeat

English summary
Actor Sudeep released Gurunandan 'Missing Boy' kannada movie trailer. The movie is directed by Raghuram. 'Missing Boy' is a emotional drama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X