ದರ್ಶನ್ ಕುರುಕ್ಷೇತ್ರಕ್ಕೆ ಈಗ ಎದುರಾಳಿಗಳ ಚಿಂತೆ.!

Recommended Video

Kurukshetra Movie: ದರ್ಶನ್ ಕುರುಕ್ಷೇತ್ರಕ್ಕೆ ಈಗ ಎದುರಾಳಿಗಳ ಚಿಂತೆ.! | FILMIBEAT KANNADA

ಡಿ-ಬಾಸ್ ಅಭಿನಯದ ಕುರುಕ್ಷೇತ್ರ ಸಿನಿಮಾ ಐದು ಭಾಷೆಯಲ್ಲಿ ಬರ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಪೌರಾಣಿಕ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 9 ರಂದು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಮತ್ತು ಆಗಸ್ಟ್ 15 ರಂದು ಹಿಂದಿಯಲ್ಲಿ ಕುರುಕ್ಷೇತ್ರ ಬರುತ್ತೆ ಎನ್ನಲಾಗಿದೆ.

ಹಾಗ್ನೋಡಿದ್ರೆ, ಕುರುಕ್ಷೇತ್ರ ಚಿತ್ರದ ಎದುರು ಅಂತಹ ದೊಡ್ಡ ಚಿತ್ರ ಯಾವುದು ಬರ್ತಿಲ್ಲ. ಆದ್ರೀಗ, ಹಿಂದಿ ಮತ್ತು ತಮಿಳಿನಲ್ಲಿ ಡಿ ಬಾಸ್ ಚಿತ್ರಕ್ಕೆ ಸ್ವಲ್ಪ ಚಿಂತೆ ಎದುರಾಗಿದೆ. ಹಾಗಿದ್ರೆ, ಕುರುಕ್ಷೇತ್ರ ಚಿತ್ರಕ್ಕೆ ಯಾವ ಭಾಷೆಯಲ್ಲಿ, ಯಾವ ಸಿನಿಮಾ ಎದುರಾಗುತ್ತಿದೆ? ಮುಂದೆ ಓದಿ.....

ದರ್ಶನ್ ಎದುರು ಮಿಷನ್ ಮಂಗಲ್

ದರ್ಶನ್ ಎದುರು ಮಿಷನ್ ಮಂಗಲ್

ಸದ್ಯಕ್ಕೆ ಕುರುಕ್ಷೇತ್ರ ಸಿನಿಮಾ ಹಿಂದಿಯಲ್ಲಿ ಆಗಸ್ಟ್ 15 ರಂದು ತೆರೆಗೆ ಬರ್ತಿದೆ. ಸೆನ್ಸಾರ್ ಆಗದ ಪರಿಣಾಮ 9 ರಿಂದ ಒಂದು ವಾರ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಅದೇ ನಿಜವಾದರೇ ಬಾಲಿವುಡ್ ನಲ್ಲಿ ಕುರುಕ್ಷೇತ್ರಕ್ಕೆ ಅಕ್ಷಯ್ ಕುಮಾರ್ ಚಿತ್ರ ಎದುರಾಳಿಯಾಗಲಿದೆ. ಅಕ್ಷಯ್ ಅಭಿನಯದ ಮಿಷನ್ ಮಂಗಲ್ ಆಗಸ್ಟ್ 15ಕ್ಕೆ ಚಿತ್ರಮಂದಿರಕ್ಕೆ ಬರ್ತಿದೆ.

ಅಕ್ಷಯ್ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ

ಅಕ್ಷಯ್ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ

ಕಳೆದ ಹತ್ತು ವರ್ಷದಲ್ಲಿ ಅಕ್ಷಯ್ ಕುಮಾರ್ ಕಮರ್ಷಿಯಲ್ ಆಗಿ ಹೆಚ್ಚು ಸಕ್ಸಸ್ ಕಂಡಿದ್ದಾರೆ. ನೈಜ ಘಟನೆ ಆಧಾರಿತ ಚಿತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರುವ ಅಕ್ಷಯ್, ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಬಿಸಿನೆಸ್ ಮಾಡ್ತಿದೆ. ನಿರೀಕ್ಷೆಯಂತೆ ಮಿಷನ್ ಮಂಗಲ್ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ. ಸೋ, ಹಿಂದಿ ಕುರುಕ್ಷೇತ್ರಕ್ಕೆ ಇದು ಸ್ವಲ್ಪ ಮಟ್ಟಿಗೆ ಕಾಡಬಹುದು.

ತಮಿಳಿನಲ್ಲಿ ಅಜಿತ್ ಸಿನಿಮಾ

ತಮಿಳಿನಲ್ಲಿ ಅಜಿತ್ ಸಿನಿಮಾ

ಸೌತ್ ಇಂಡಿಯಾದಲ್ಲಿ 'ತಲಾ' ಎಂದೇ ಗುರುತಿಸಿಕೊಂಡಿರುವ ಅಜಿತ್ ಕುಮಾರ್ ಅವರ ಚಿತ್ರ ಆಗಸ್ಟ್ 8ಕ್ಕೆ ಬರ್ತಿದೆ. ಹಿಂದಿಯ ಪಿಂಕ್ ಚಿತ್ರದ ತಮಿಳು ರೀಮೇಕ್ 'ನೇರ್ಕೊಂಡ ಪಾರ್ವಿ' ಕುರುಕ್ಷೇತ್ರಕ್ಕೂ ಒಂದು ಮುಂಚೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದೆ. ಸಹಜವಾಗಿ ಇದು ದರ್ಶನ್ ಚಿತ್ರದ ಮೇಲೆ ಪರಿಣಾಮ ಬೀರಬಹುದು.

ಕನ್ನಡದಲ್ಲಿ ಕೆಂಪೇಗೌಡ 2

ಕನ್ನಡದಲ್ಲಿ ಕೆಂಪೇಗೌಡ 2

ಈ ಕಡೆ ಕನ್ನಡದಲ್ಲೂ ಕುರುಕ್ಷೇತ್ರದ ಜೊತೆ ಸಿನಿಮಾವೊಂದು ಬರ್ತಿದೆ. ಕೋಮಲ್ ಕುಮಾರ್ ಅಭಿನಯದ ಕೆಂಪೇಗೌಡ-2 ಆಗಸ್ಟ್ 9 ರಂದು ರಿಲೀಸ್ ಆಗುತ್ತಿದೆ. ಆದರೆ, ಇದು ಕುರುಕ್ಷೇತ್ರಕ್ಕೆ ಎದುರಾಳಿ ಅಲ್ಲ. ಎರಡು ಚಿತ್ರಗಳು ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ.

More from Filmibeat

English summary
Akshay kumar Mission Mangal and darshan Kurukshetra movies will Release Together on August 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X