For Quick Alerts
  ALLOW NOTIFICATIONS  
  For Daily Alerts

  ಸಾಮಾಜಿಕ ಜಾಲತಾಣದಲ್ಲಿ ಹೆಸರು ದುರ್ಬಳಕೆ ದೂರು ನೀಡಿದ ಸಾಧುಕೋಕಿಲಾ

  |

  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರು ಮತ್ತು ಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕನ್ನಡ ಖ್ಯಾತ ಹಾಸ್ಯನಟ ಸಾಧುಕೋಕಿಲಾ ದೂರು ದಾಖಲಿಸಿದ್ದಾರೆ.

  ಸಾಧುಕೋಕಿಲಾ ಹೆಸರಲ್ಲಿ ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಹಲವಾರು ಖಾತೆಗಳಿದ್ದು, ಆ ಖಾತೆಗಳಲ್ಲಿ ಕೆಲವು ಜಾಹೀರಾತುಗಳನ್ನು ಪ್ರದರ್ಶಿಸುವುದು, ಪೇಯ್ಡ್ ಲಿಂಕ್‌ಗಳನ್ನು ಪ್ರಕಟಿಸುವುದು ಮಾಡುತ್ತಿವೆ.

  ಯಾರದ್ದೋ ಪಾಲಾಗಿದ್ದ 'ರಕ್ತ ಕಣ್ಣೀರು' ಸಾಧುಕೋಕಿಲಾ ಅದೃಷ್ಟ ಬದಲಾಯಿಸಿದ್ದು ಹೇಗೆ?ಯಾರದ್ದೋ ಪಾಲಾಗಿದ್ದ 'ರಕ್ತ ಕಣ್ಣೀರು' ಸಾಧುಕೋಕಿಲಾ ಅದೃಷ್ಟ ಬದಲಾಯಿಸಿದ್ದು ಹೇಗೆ?

  ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ಗಳಲ್ಲಿ ತಮ್ಮ ಫೋಟೋ, ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಇದು ತಮ್ಮ ಗೌರವಕ್ಕೆ ಧಕ್ಕೆ ತರುವ ಯತ್ನವಾಗಿದೆ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾಧುಕೋಕಿಲಾ ಅವರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  ಸಾಧು ಕೋಕಿಲ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಹಿಂದಿದೆ ಕಿಡಿಗೇಡಿಗಳ ಕೈವಾಡ ಸಾಧು ಕೋಕಿಲ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಹಿಂದಿದೆ ಕಿಡಿಗೇಡಿಗಳ ಕೈವಾಡ

  ಸಾಧುಕೋಕಿಲಾ ಮಾತ್ರವಲ್ಲದೆ ಹಲವು ನಟ-ನಟಿಯರ ಬಗ್ಗೆ ಫೇಸ್‌ಬುಕ್ ಪೇಜ್‌ಗಳು ಚಾಲ್ತಿಯಲ್ಲಿವೆ. ಕೆಲವು ಫ್ಯಾನ್‌ ಪೇಜ್‌ಗಳಾಗಿದ್ದು, ಅವು ಜಾಹೀರಾತು, ಪೇಯ್ಡ್ ಲಿಂಕ್ ಶೇರ್‌ನಿಂದ ದೂರ ಉಳಿದಿವೆ, ಆದರೆ ಕೆಲವು ಪೇಜ್‌ಗಳು ಜಾಹೀರಾತು ಪ್ರಕಟಣೆ, ಸುಳ್ಳು ಸುದ್ದಿಗಳ ಪ್ರಸಾರ ಮಾಡುತ್ತಿವೆ.

  English summary
  Actor Sadhu Kokila gave complaint to police station. He alleged that some people misusing his photo and name in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X