For Quick Alerts
  ALLOW NOTIFICATIONS  
  For Daily Alerts

  'ಸಿದ್ಲಿಂಗು'ನ ಮೀರಿಸುವಂತಿದೆ 'ಲಂಬೋದರ' ಟ್ರೈಲರ್

  By Bharath Kumar
  |
  ಪಡ್ಡೆ ಹುಡುಗರ ಮೆಚ್ಚುಗೆ ಪಡೆದ ಯೋಗೇಶ್ ಲಂಬೋದರ ಟ್ರೇಲರ್..! | Filmibeat Kannada

  ಲೂಸ್ ಮಾದ ಯೋಗೇಶ್ ಅಭಿನಯಿಸಿದ್ದ 'ಸಿದ್ಲಿಂಗು' ಚಿತ್ರ ನೆನಪಿರಬಹುದು. ಆ ಚಿತ್ರದಲ್ಲಿ ಹದಿಹರೆಯದ ಹುಡುಗನಾಗಿ ಅಭಿನಯಿಸಿ ಯೋಗಿ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದರು. ಇದೀಗ, ಇಂತಹದ್ದೇ ಪಾತ್ರದಲ್ಲಿ ಮತ್ತೊಮ್ಮೆ ಬಂದಿರುವ ಲೂಸ್ 'ಸಿದ್ಲಿಂಗು' ಚಿತ್ರಕ್ಕಿಂತ ಮತ್ತಷ್ಟು ಬೋಲ್ಡ್ ಆಗಿ ನಟಿಸಿದ್ದಾರೆ. ಇದು ಪಡ್ಡೆ ಹುಡುಗರಿಗೆ ಕಿಕ್ ಹೆಚ್ಚಿಸಿದೆ.

  ಹೌದು, ಯೋಗೇಶ್ ಅವರ 'ಲಂಬೋದರ' ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಜೊತೆಗೆ ಯುವ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ರಿಲೀಸ್ ಆದ ನಾಲ್ಕು ದಿನಗಳಲ್ಲಿ ಸುಮಾರು 2.1 ಲಕ್ಷ ವೀಕ್ಷಕರು ಟ್ರೈಲರ್ ನೋಡಿದ್ದಾರೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರೆದುರು ಬರುವ ಯೋಗೇಶ್ ಈ ಚಿತ್ರದಲ್ಲೂ ಅಂತಹದ್ದೇ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಿದ್ದರೂ, ಯೋಗಿ ಬಗ್ಗೆ ಬೇಸರವಾಗಿರುವುದೇಕೆ.? ಮುಂದೆ ಓದಿ.....

  ಯೋಗಿ ಫ್ಯಾನ್ಸ್ ಫುಲ್ ಹ್ಯಾಪಿ

  ಯೋಗಿ ಫ್ಯಾನ್ಸ್ ಫುಲ್ ಹ್ಯಾಪಿ

  'ಲಂಬೋದರ' ಚಿತ್ರದ ಟ್ರೈಲರ್ ನೋಡಿ ಬಹುತೇಕ ಯೋಗಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾಮಿಡಿ, ಮನರಂಜನೆ ದೃಷ್ಟಿಯಿಂದ ಈ ಸಿನಿಮಾ ಸಕ್ಸಸ್ ಕಾಣಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, ಈ ಸಿನಿಮಾ ಪಕ್ಕಾ ಯೂತ್ ಗಾಗಿಯೇ ಮಾಡಿದಂತಿದೆ.

  ಬೇಸರ ಮಾಡಿಕೊಂಡವರು ಇದ್ದಾರೆ

  ಬೇಸರ ಮಾಡಿಕೊಂಡವರು ಇದ್ದಾರೆ

  ಮತ್ತೊಂದು ವರ್ಗ 'ಲಂಬೋದರ' ಟ್ರೈಲರ್ ಬಗ್ಗೆ ತೀರಾ ಬೇಸರ ವ್ಯಕ್ತಪಡಿಸಿದ್ದಾರೆ. ಲೂಸ್ ಮಾದ ಅವರ ಪಾತ್ರದ ಬಗ್ಗೆ ಮತ್ತು ಅವರ ಸಂಭಾಷಣೆಯ ಬಗ್ಗೆ ಕಿಡಿಕಾರಿದ್ದಾರೆ. ಯಾಕಂದ್ರೆ, ಈ ಟ್ರೈಲರ್ ನಲ್ಲಿ ತುಂಬಾ ಹಸಿಬಿಸಿಯ ಸಂಭಾಷಣೆಯನ್ನ ಬಳಸಲಾಗಿದೆ. ಇದರಿಂದ ಫ್ಯಾಮಿಲಿ ಆಡಿಯೆನ್ಸ್ ಬರುವ ಧೈರ್ಯ ಮಾಡುವುದಿಲ್ಲ ಎನ್ನುತ್ತಿದ್ದಾರೆ.

  ಸಿನಿಮಾ ಬೇರೆ ಇದೆ

  ಸಿನಿಮಾ ಬೇರೆ ಇದೆ

  ಇದು ಟ್ರೈಲರ್ ಮಾತ್ರ. ಚಿತ್ರದಲ್ಲಿ ಬೇರೆನೇ ಇದೆ ಎಂಬುದು ಚಿತ್ರತಂಡದ ಧೈರ್ಯ. ಹಾಸ್ಯ ಪ್ರಧಾನ ಈ ಚಿತ್ರದಲ್ಲಿ ಯೋಗಿ ಅವರು ಶಾಲಾ ವಿದ್ಯಾರ್ಥಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಆ ವಯಸ್ಸಿನಲ್ಲಿ ಹುಡುಗರು ಹೇಗಿರುತ್ತಾರೆ ಎಂಬುದನ್ನ ಟ್ರೈಲರ್ ನಲ್ಲಿ ತೋರಿಸಲಾಗಿದೆ.

  ಯೋಗಿ ಜೊತೆ ಆಕಾಂಕ್ಷ ನಟನೆ

  ಯೋಗಿ ಜೊತೆ ಆಕಾಂಕ್ಷ ನಟನೆ

  ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ. ಲೂಸ್ ಮಾದ ಯೋಗಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಸದ್ಯದಲ್ಲೇ ಬಿಡುಗಡೆ

  ಸದ್ಯದಲ್ಲೇ ಬಿಡುಗಡೆ

  ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ.

  English summary
  Kannada actor loose mada yogesh starrer lambodara movie trailer has released. but, yogesh get Negative Comment on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X