For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೆ ಸಜ್ಜಾಗಿದೆ ಪ್ರಥಮ್ 'ಎಂಎಲ್ಎ'

  By Pavithra
  |

  ಆರಂಭದಿಂದಲೂ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದ ಪ್ರಥಮ್ ಅಭಿನಯದ 'ಎಂಎಲ್ಎ' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿ ತೆರೆಗೆ ಬರಲು ಸಿದ್ದವಾಗಿದೆ. ಇತ್ತಿಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಆಡಿಯೋ ಬಿಡುಗಡೆ ಮಾಡಿಸಿದ್ದ ನಿರ್ಮಾಪಕರು ಚಿತ್ರವನ್ನ ತೆರೆಗೆ ತರುವ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ.

  ಮೌರ್ಯ ಆಕ್ಷನ್ ಕಟ್ ಹೇಳಿರುವ 'ಎಂಎಲ್ಎ' ಸಿನಿಮಾದ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ನಡೆಸಿದ್ದು ಅಲ್ಲಿಯವರೇ ಆದ ವೆಂಕಟೇಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  ಹೊಸ ಸರ್ಕಾರಕ್ಕೆ ಲಾರ್ಡ್ ಪ್ರಥಮ್ ಮನವಿಹೊಸ ಸರ್ಕಾರಕ್ಕೆ ಲಾರ್ಡ್ ಪ್ರಥಮ್ ಮನವಿ

  ಈಗಾಗಲೇ ಹಾಡುಗಳನ್ನ ಮೆಚ್ಚಿಕೊಂಡಿರುವ ಸಿನಿಮಾ ಪ್ರೇಕ್ಷಕರು ಚಿತ್ರವನ್ನು ಇಷ್ಟ ಪಡುತ್ತಾರೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಪ್ರಥಮ್ ನಾಯಕನಾಗಿರುವ ಚಿತ್ರದಲ್ಲಿ ಸೋನಾಲ್ ಮಾಂಟೇರಿಯೋ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತ್ತರರು ಅಭಿನಯಿಸಿದ್ದಾರೆ.

  ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿರುವ ಸಿನಿಮಾತಂಡ ಜೂನ್ ಎರಡನೇ ವಾರದಲ್ಲಿ ತೆರೆಗೆ ತರುವ ಪ್ರಯತ್ನದಲಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಎಂಎಲ್ಎ ಚಿತ್ರ ಬಾಕ್ಸ್ ಆಫೀಸ್ ನಲ್ಲಿಯೂ ಸೌಂಡ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕು.

  English summary
  The Hindi dubbing rights of Kannada MLA film has been sold for good amount. Pratam acting as a hero in film Mourya directed the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X