twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೈಹಾಕಿದ ಚಿತ್ರರಂಗ, ಯಾರ ಒಲವು ಯಾವ ಕಡೆ?

    |

    Recommended Video

    Dr Vishnuvardhan Memorial Controversy :ವಿಷ್ಣು ಸ್ಮಾರಕ ನಿರ್ಮಾಣ ಬೆಂಗಳೂರಿನಲ್ಲಾಗುತ್ತಾ? ಮೈಸೂರಿನಲ್ಲಾಗುತ್ತಾ?

    ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕನ್ನಡ ಚಿತ್ರರಂಗ ಒಂದಾಗಬೇಕು. ಇಡೀ ಸಿನಿಮಾರಂಗ ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ರೆ ಖಂಡಿತಾ ಸ್ಮಾರಕ ಬೇಗ ಆಗುತ್ತೆ ಎಂಬ ಅಭಿಪ್ರಾಯ ಸಾಮಾನ್ಯ ಜನರದ್ದು.

    ಬಟ್, ಒಟ್ಟಾಗಿ ಯಾರೂ ಬರದೇ ಹೋದರು ವೈಯಕ್ತಿವಾಗಿ ಅಥವಾ ಕೆಲವು ಆಪ್ತ ಬಳಗದೊಂದಿಗೆ ಸೇರಿ ಚಿತ್ರರಂಗದ ಕೆಲವು ನಾಯಕರು, ವಿಷ್ಣು ಸ್ಮಾರಕ ನಿರ್ಮಾಣ ಕೆಲಸ ಆರಂಭಿಸಲು ಪ್ರಯತ್ನ ಪಡ್ತಿರುದಂತೂ ನಿಜ. ಸುದೀಪ್, ಯಶ್, ದರ್ಶನ್, ಜಗ್ಗೇಶ್, ಶಿವಣ್ಣ ಎಲ್ಲರೂ ಬಯಕೆಯೂ ಸ್ಮಾರಕ ಬೇಗ ಆಗಲಿ ಎಂಬುದೇ ಆಗಿದೆ.

    ಅಂಬಿ ಅಂತ್ಯಕ್ರಿಯೆಯಲ್ಲಿ ವಿಷ್ಣು ಕುಟುಂಬಕ್ಕೆ ಅವಮಾನ, ವಿಷ್ಣು ಪುತ್ರಿ ಕಣ್ಣೀರು.! ಅಂಬಿ ಅಂತ್ಯಕ್ರಿಯೆಯಲ್ಲಿ ವಿಷ್ಣು ಕುಟುಂಬಕ್ಕೆ ಅವಮಾನ, ವಿಷ್ಣು ಪುತ್ರಿ ಕಣ್ಣೀರು.!

    ಇದೀಗ, ನಿರ್ಮಾಪಕ ಮುನಿರತ್ನ ಮತ್ತು ಕೆ ಮಂಜು ಇಬ್ಬರು ಭಾರತಿ ವಿಷ್ಣುವರ್ಧನ್ ಕುಟುಂಬವನ್ನ ಬೇಡಿ, ಚರ್ಚೆ ನಡೆಸಿದ್ದಾರೆ. ಸರ್ಕಾರದೊಂದಿಗೆ ಈ ಬಗ್ಗೆ ಮಾತನಾಡಿ ಆದಷ್ಟೂ ಬೇಗ ಸ್ಮಾರಕ ಆಗುವ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಶಾಸಕರಾಗಿರುವ ಮುನಿರತ್ನ ಹೇಳಿದ್ದಾರೆ. ಆದ್ರೆ, ಇದರೊಳಗೂ ಗೊಂದಲವಿದೆ. ಚಿತ್ರರಂಗದಲ್ಲಿ ಯಾರ ಒಲವು ಹೇಗಿದೆ ಎಂದು ತಿಳಿಯಲು ಮುಂದೆ ಓದಿ....

    ವಿಷ್ಣು ಫ್ಯಾಮಿಲಿ ಮಾತಿಗೆ ಬೆಲೆ ಕೊಡಬೇಕು

    ವಿಷ್ಣು ಫ್ಯಾಮಿಲಿ ಮಾತಿಗೆ ಬೆಲೆ ಕೊಡಬೇಕು

    ಹಾಗ್ನೋಡಿದ್ರೆ, ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಮಾಡಬೇಕು ಎಂದು ಭಾರತಿ ಪಟ್ಟು ಹಿಡಿದಿದ್ದಾರೆ. ಇದನ್ನ ವಿರೋಧಿಸುವ ಧೈರ್ಯ ಚಿತ್ರರಂಗದಲ್ಲಿ ಯಾರಿಗೂ ಇಲ್ಲ. ಯಾಕಂದ್ರೆ, ಆರು ವರ್ಷ ಅಭಿಮಾನ್ ಸ್ಟುಡಿಯೋದಲ್ಲಿ ಆಗುತ್ತೆ ಅಂತ ಭಾರತಿ ಕಾದಿದ್ದರು. ಬಟ್, ಆಗಿರಲಿಲ್ಲ. ಈಗ ವಿರೋಧ ಮಾಡಿದ್ರೆ, ಇಷ್ಟು ದಿನ ಏನು ಮಾಡುತ್ತಿದ್ರಿ ಎಂಬ ಪ್ರಶ್ನೆ ಎದುರಾಗಬಹುದು.? ಹಾಗಾಗಿ, ಅವರ ಬೇಡಿಕೆಗೆ ವಿರೋಧ ಕಷ್ಟ.

    'ನಮ್ಮ ತಂದೆಗೆ ಅನ್ಯಾಯವಾಗ್ತಿದೆ': ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ'ನಮ್ಮ ತಂದೆಗೆ ಅನ್ಯಾಯವಾಗ್ತಿದೆ': ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ

    ಪುಣ್ಯಭೂಮಿ ಬೆಂಗಳೂರಿನಲ್ಲೇ ಆಗಲಿ

    ಪುಣ್ಯಭೂಮಿ ಬೆಂಗಳೂರಿನಲ್ಲೇ ಆಗಲಿ

    ಸ್ಮಾರಕ ಎಲ್ಲಿ ಬೇಕಾದರೂ ಮಾಡಿಕೊಳ್ಳಲಿ. ಆದ್ರೆ, ವಿಷ್ಣು ಪುಣ್ಯಭೂಮಿ ಅಂತ ಅಭಿಮಾನ್ ಸ್ಟುಡಿಯೋದಲ್ಲಿ ಆಗಲಿ. ಹೀಗಂತ ಸ್ವತಃ ಕಿಚ್ಚ ಸುದೀಪ್ ಅವರೇ ಸರ್ಕಾರಕ್ಕೆ ಮನವಿ ಮಾಡಿದ್ದರು. ಈಗಲೂ ಅವರದ್ದು ಅದೇ ಆಸೆ. ಸ್ಮಾರಕ ಭಾರತಿ ಅವರ ಇಚ್ಛೆಯಂತೆ ಮೈಸೂರಿನಲ್ಲಿ ಆಗಲಿ, ಪುಣ್ಯಭೂಮಿ ಮಾತ್ರ ಬೆಂಗಳೂರಿನಲ್ಲಿ ಆಗಲಿ ಎನ್ನುತ್ತಿದ್ದಾರೆ.

    ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

    ನಿಯೋಗ ಸಿದ್ಧವಾಗಿದೆಯಂತೆ

    ನಿಯೋಗ ಸಿದ್ಧವಾಗಿದೆಯಂತೆ

    ಇನ್ನು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲು ಚಿತ್ರರಂಗದಿಂದ ನಿಯೋಗವೊಂದು ಸಜ್ಜಾಗಿದೆಯಂತೆ. ಸುದೀಪ್, ನಿರ್ದೇಶಕ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್, ನಿರ್ದೇಶಕ ರವಿಶ್ರೀವತ್ಸ, ವಿಷ್ಣು ಸೇನಾ ಸಮಿತಿ ಸೇರಿದಂತೆ ಹಲವರು ಈ ನಿಯೋಗದಲ್ಲಿದ್ದಾರೆ ಎನ್ನಲಾಗಿದೆ.

    ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ

    ಮುನಿರತ್ನ ಏನಂತಾರೆ.?

    ಮುನಿರತ್ನ ಏನಂತಾರೆ.?

    ಸದ್ಯ, ಭಾರತಿ ವಿಷ್ಣುವರ್ಧನ್ ಅವರ ಮನವಿ ಸ್ವೀಕರಿಸಿರುವ ಮುನಿರತ್ನ, ಈ ಬಗ್ಗೆ ಸರ್ಕಾರದ ಜೊತೆ ಮಾತನಾಡುತ್ತೇನೆ. ಕುಟುಂಬದವರಿಗೆ ಮೈಸೂರಿನಲ್ಲಿ ಆಗಬೇಕು ಎಂಬ ಆಸೆ ಮತ್ತು ಬೇಡಿಕೆ. ಅದರ ಅನುಸಾರ ಸಿಎಂ ಜೊತೆ ಚರ್ಚೆ ಮಾಡ್ತೀನಿ ಎಂದಿದ್ದಾರೆ. ಆದ್ರೆ, ಸ್ಮಾರಕ ಎಲ್ಲಿ ಆಗಬೇಕು ಎಂಬ ವೈಯಕ್ತಿಕ ನಿರ್ಧಾರ ತಿಳಿಸಿಲ್ಲ.

    ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!

    ಅನೇಕರಿಗೆ ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕು

    ಅನೇಕರಿಗೆ ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕು

    ಚಿತ್ರರಂಗದಲ್ಲಿರುವವರಿಗೂ ವಿಷ್ಣು ಸ್ಮಾರಕ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು ಎಂಬ ಆಸೆ. ಹಾಗಾಗಿ, ಯಾರು ಕೂಡ ಮುಂದಾಳತ್ವ ವಹಿಸಿ, ಕುಟುಂಬದ ಕೆಂಗಣ್ಣಿಗೆ ಗುರಿಯಾಗಲು ಸಿದ್ದವಿಲ್ಲ. ಇನ್ನು ಮೈಸೂರಿನಲ್ಲಿ ಮಾಡಲಿ ಎಂದು ಹೇಳಿ ಅಭಿಮಾನಿಗಳ ಕೋಪಕ್ಕೂ ಕಾರಣವಾಗಲು ಇಷ್ಟವಿಲ್ಲದೇ ತಟಸ್ಥವಾಗಿ ನಿಂತಿದ್ದಾರೆ.

    ವಿಷ್ಣು ಸ್ನೇಹಕ್ಕಾಗಿ ಅಂಬಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬದಲಾಯ್ತಾ.?ವಿಷ್ಣು ಸ್ನೇಹಕ್ಕಾಗಿ ಅಂಬಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬದಲಾಯ್ತಾ.?

    ಕುಟುಂಬಕ್ಕೆ ಬೇಸರ ತಂದಿದೆ

    ಕುಟುಂಬಕ್ಕೆ ಬೇಸರ ತಂದಿದೆ

    ಇನ್ನು ಭಾರತಿ ವಿಷ್ಣುವರ್ಧನ್ ಅವರಿಗೂ ಸ್ಮಾರಕ ವಿಚಾರ ಬಹಳ ನೋವು ಉಂಟು ಮಾಡಿದೆ. ಅಭಿಮಾನ್ ಸ್ಟುಡಿಯೋದಲ್ಲೇ ಆಗಲಿ ಎಂದು ಸುಮಾರು ಕಾದರು. ಆದ್ರೆ, ಯಾರೊಬ್ಬರು ಈ ಸಮಸ್ಯೆಯನ್ನ ಬಗೆಹರಿಸಲು ಮುಂದಾಗಲಿಲ್ಲ. ಅದಕ್ಕಾಗಿಯೇ ಯಾರ ಸಹವಾಸವೂ ಬೇಡ ಎಂದು ತೀರ್ಮಾನಿಸಿ, ವಿಷ್ಣು ಅವರ ಹುಟ್ಟು ಮೈಸೂರು, ಸಾವು ಮೈಸೂರು ಸ್ಮಾರಕನೂ ಮೈಸೂರು ಆಗಲಿ ಎನ್ನುತ್ತಿದ್ದಾರೆ.

    ಡಾ.ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ನೀಡಿದ 4 ಸಲಹೆಗಳುಡಾ.ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ನೀಡಿದ 4 ಸಲಹೆಗಳು

    English summary
    Producer association president, mla munirathna has visit to bharathi vishnuvardhan home and discuss about dr vishnuvardhan memorial.
    Thursday, November 29, 2018, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X