»   » ಶಾಸಕರ ಪುತ್ರಿ ಜೊತೆ ಗುಟ್ಟಾಗಿ ಮದುವೆಯಾದ ನಿರ್ಮಾಪಕ ?

ಶಾಸಕರ ಪುತ್ರಿ ಜೊತೆ ಗುಟ್ಟಾಗಿ ಮದುವೆಯಾದ ನಿರ್ಮಾಪಕ ?

Posted By:
Subscribe to Filmibeat Kannada
ಕನ್ನಡ ಸಿನಿಮಾ ನಿರ್ಮಾಪಕ ಸುಂದರ್ ಪಿ ಗೌಡ ಎಂ ಎಲ್ ಎ ಮಗಳು ಲಕ್ಷ್ಮಿ ನಾಯಕ್ ನಾಪತ್ತೆ | Filmibeat Kannada

ಜಾಕ್ಸನ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡು, ನಂತರ ಮಾಸ್ತಿಗುಡಿ ಚಿತ್ರವನ್ನ ನಿರ್ಮಾಣ ಮಾಡಿದ್ದ ಸುಂದರ್ ಪಿ ಗೌಡ ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಜೊತೆಯಲ್ಲಿ ಪರಾರಿ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ನಿನ್ನೆ ರಾತ್ರಿಯಿಂದಲೇ ಪೊಲೀಸರು ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಶಿವಮೂರ್ತಿ ನಾಯಕ್ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ

ಶಿವಮೂರ್ತಿ ನಾಯಕ್ ಅವರ ಪುತ್ರಿ ಲಕ್ಷ್ಮೀ ನಾಯಕ್ ಹಾಗೂ ಸುಂದರ್ ಪಿ ಗೌಡ ಅವರ ಮಧ್ಯೆ ಸಾಕಷ್ಟು ದಿನಗಳಿಂದ ಸ್ನೇಹ ಇತ್ತು. ನಂತರ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನುವ ಸುದ್ದಿ ಸುಂದರ್ ಪಿ ಗೌಡ ಅವರ ಸ್ನೇಹಿತರ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಲಕ್ಷ್ಮೀ ನಾಯಕ್, ಸುಂದರ್ ಅವರ ಜೊತೆಯಲ್ಲಿ ಹೋಗಿರಬಹುದೆಂದು ಶಾಸಕ ಶಿವಮೂರ್ತಿ ನಾಯಕ್ ಅನುಮಾನ ವ್ಯಕ್ತ ಪಡಿಸಿದ್ದಾರೆ.

MLA Shivamurthri Nayak daughter missing with producer Sundar P Gowda.

ಲಕ್ಷ್ಮೀ ನಾಯಕ್ ಅವರಿಗೆ ಈ ಹಿಂದೆಯೇ ಬೇರೆ ಹುಡುಗನ ಜೊತೆಯಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ನಿನ್ನೆ ಸುಂದರ್ ಜೊತೆಯಲ್ಲಿ ಮದುವೆ ಆಗುವುದಾಗಿ ಲಕ್ಷ್ಮೀ ನಾಯಕ್ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿ ಸುಂದರ್ ಮತ್ತು ಲಕ್ಷ್ಮೀ ಅವರ ಮದುವೆ ಆಗಿರುವುದಾಗಿ ಸುದ್ದಿ ಕೇಳಿಬರುತ್ತಿದೆ.

English summary
Mayankonda MLA Shivamurthy Nayak's daughter Lakshmi Nayak missing with Kannada movie producer Sundar P Gowda. Lakshmi Nayak missing complaint has been registered at Yelahanka New Town police station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada