»   » ರಹಸ್ಯ ಮದುವೆ ಬಳಿಕ ವಿಡಿಯೋ ಸಂದೇಶ ಕಳುಹಿಸಿದ ಶಾಸಕನ ಪುತ್ರಿ

ರಹಸ್ಯ ಮದುವೆ ಬಳಿಕ ವಿಡಿಯೋ ಸಂದೇಶ ಕಳುಹಿಸಿದ ಶಾಸಕನ ಪುತ್ರಿ

Posted By:
Subscribe to Filmibeat Kannada
ರಹಸ್ಯ ಮದುವೆ ಬಳಿಕ ವಿಡಿಯೋ ಕಳುಹಿಸಿದ ಶಾಸಕನ ಪುತ್ರಿ | Filmibeat Kannada

ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಕಾಣೆಯಾಗಿದ್ದಾಳೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕನ್ನಡದ ನಿರ್ಮಾಪಕ ಸುಂದರ್ ಪಿ ಗೌಡ ಜೊತೆಯಲ್ಲಿ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ರಹಸ್ಯವಾಗಿ ಮದುವೆಯಾಗಿರುವ ಸುದ್ದಿ ಹೊರಬಿದ್ದಿದೆ.

ನಿರ್ಮಾಪಕ ಸುಂದರ್ ಗೌಡ ಜೊತೆಯಲ್ಲಿ ಮದುವೆಯಾಗಿರುವ ಫೋಟೋಗಳು ಈಗ ವೈರಲ್ ಆಗಿದ್ದು, ಅದರ ಬೆನ್ನೆಲ್ಲೆ ವಿಡಿಯೋವೊಂದು ಹೊರಬಿದ್ದಿದೆ. ''ಸುಂದರ್ ಗೌಡ ಅವರ ಜೊತೆ ನಾನು ಸ್ವ-ಇಚ್ಛೆಯಿಂದ ಮದುವೆಯಾಗಿದ್ದೀನಿ. ನಮ್ಮಿಂದ ಬೇರೆ ಯಾರಿಗೂ ತೊಂದರೆಯಾಗಬಾರದು'' ಎಂದು ಸ್ವತಃ ಲಕ್ಷ್ಮಿ ನಾಯ್ಕ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಶಾಸಕರ ಪುತ್ರಿ ಜೊತೆ ಗುಟ್ಟಾಗಿ ಮದುವೆಯಾದ ನಿರ್ಮಾಪಕ ?

ಇದಕ್ಕೂ ಮುಂಚೆ ತಮ್ಮ ಪುತ್ರಿ ಕಾಣೆಯಾಗಿದ್ದಾಳೆಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ಶಾಸಕ ಶಿವಮೂರ್ತಿ ನಾಯ್ಕ್ ದೂರು ನೀಡಿದ್ದರು. ಪುತ್ರಿ ಲಕ್ಷ್ಮೀ ನಾಯ್ಕ್ ಗೆ ವಿವಾಹ ನಿಶ್ಚಯವಾಗಿತ್ತು. ಈ ಮಧ್ಯೆ ಮನೆಯಿಂದ ಕಾಣೆಯಾಗಿದ್ದಾರೆ. ಮಗಳನ್ನ ಹುಡುಕಿಕೊಡಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

MLA Shivamurthy daughter married sundar p gowda

ಲಕ್ಷ್ಮೀನಾಯ್ಕ್ ಮತ್ತು ಸುಂದರ್ ಗೌಡ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಈ ನಡುವೆ ಇವರಿಬ್ಬರ ಪ್ರೀತಿಗೆ ಶಾಸಕರು ವಿರೋಧ ವ್ಯಕ್ತ ಮಾಡಿದ್ದರಿಂದ ನಿನ್ನೆ ಶಾಸಕರ ಪುತ್ರಿ ಸುಂದರ್​ ಗೌಡ ಜೊತೆಗೆ ಮನೆಬಿಟ್ಟು ಬಂದಿದ್ದರು. ಇಂದು ಚಾಮುಂಡಿಬೆಟ್ಟದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

ವಿಡಿಯೋದಲ್ಲಿ ಏನಿದೆ.?

''ನಾನು ಮತ್ತು ಸುಂದರ್ ಗೌಡ್ರು ಇಬ್ಬರು ಇಷ್ಟಪಟ್ಟು, ಇಚ್ಛೆ ಪಟ್ಟು ಮದುವೆ ಆಗಿರೋದು. ನಮ್ಮಿಬ್ಬರಿಂದ ಬೇರೆ ಯಾರಿಗೂ ತೊಂದರೆಯಾಗಬಾರದು. ಹಾನಿಯಾಗಬಾರದು. ಮನಸಾರೆ ಮದುವೆ ಆಗಿದ್ದೀನಿ. ನಾನು ಮೈನರ್ ಅಲ್ಲ, ಮೇಜರ್. ನನ್ನ ಬುದ್ದಿಯನ್ನ ನಾನು ಯೋಚನೆ ಮಾಡಬಹುದು'' ಎಂದು ಸ್ವತಃ ಲಕ್ಷ್ಮಿ ನಾಯ್ಕ್ ಅವರೇ ವಿಡಿಯೋ ಕಳುಹಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ...

English summary
Lakshmi Naik, daughter of Congress mla Shivamurthy Naik, is married to Producer Sundar p Gowda in Mysuru Chamundi hills.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada