Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಹಸ್ಯ ಮದುವೆ ಬಳಿಕ ವಿಡಿಯೋ ಸಂದೇಶ ಕಳುಹಿಸಿದ ಶಾಸಕನ ಪುತ್ರಿ
Recommended Video
ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಕಾಣೆಯಾಗಿದ್ದಾಳೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕನ್ನಡದ ನಿರ್ಮಾಪಕ ಸುಂದರ್ ಪಿ ಗೌಡ ಜೊತೆಯಲ್ಲಿ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ರಹಸ್ಯವಾಗಿ ಮದುವೆಯಾಗಿರುವ ಸುದ್ದಿ ಹೊರಬಿದ್ದಿದೆ.
ನಿರ್ಮಾಪಕ ಸುಂದರ್ ಗೌಡ ಜೊತೆಯಲ್ಲಿ ಮದುವೆಯಾಗಿರುವ ಫೋಟೋಗಳು ಈಗ ವೈರಲ್ ಆಗಿದ್ದು, ಅದರ ಬೆನ್ನೆಲ್ಲೆ ವಿಡಿಯೋವೊಂದು ಹೊರಬಿದ್ದಿದೆ. ''ಸುಂದರ್ ಗೌಡ ಅವರ ಜೊತೆ ನಾನು ಸ್ವ-ಇಚ್ಛೆಯಿಂದ ಮದುವೆಯಾಗಿದ್ದೀನಿ. ನಮ್ಮಿಂದ ಬೇರೆ ಯಾರಿಗೂ ತೊಂದರೆಯಾಗಬಾರದು'' ಎಂದು ಸ್ವತಃ ಲಕ್ಷ್ಮಿ ನಾಯ್ಕ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ.
ಶಾಸಕರ ಪುತ್ರಿ ಜೊತೆ ಗುಟ್ಟಾಗಿ ಮದುವೆಯಾದ ನಿರ್ಮಾಪಕ ?
ಇದಕ್ಕೂ ಮುಂಚೆ ತಮ್ಮ ಪುತ್ರಿ ಕಾಣೆಯಾಗಿದ್ದಾಳೆಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ಶಾಸಕ ಶಿವಮೂರ್ತಿ ನಾಯ್ಕ್ ದೂರು ನೀಡಿದ್ದರು. ಪುತ್ರಿ ಲಕ್ಷ್ಮೀ ನಾಯ್ಕ್ ಗೆ ವಿವಾಹ ನಿಶ್ಚಯವಾಗಿತ್ತು. ಈ ಮಧ್ಯೆ ಮನೆಯಿಂದ ಕಾಣೆಯಾಗಿದ್ದಾರೆ. ಮಗಳನ್ನ ಹುಡುಕಿಕೊಡಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಲಕ್ಷ್ಮೀನಾಯ್ಕ್ ಮತ್ತು ಸುಂದರ್ ಗೌಡ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದ್ದು, ಈ ನಡುವೆ ಇವರಿಬ್ಬರ ಪ್ರೀತಿಗೆ ಶಾಸಕರು ವಿರೋಧ ವ್ಯಕ್ತ ಮಾಡಿದ್ದರಿಂದ ನಿನ್ನೆ ಶಾಸಕರ ಪುತ್ರಿ ಸುಂದರ್ ಗೌಡ ಜೊತೆಗೆ ಮನೆಬಿಟ್ಟು ಬಂದಿದ್ದರು. ಇಂದು ಚಾಮುಂಡಿಬೆಟ್ಟದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
ವಿಡಿಯೋದಲ್ಲಿ ಏನಿದೆ.?
''ನಾನು ಮತ್ತು ಸುಂದರ್ ಗೌಡ್ರು ಇಬ್ಬರು ಇಷ್ಟಪಟ್ಟು, ಇಚ್ಛೆ ಪಟ್ಟು ಮದುವೆ ಆಗಿರೋದು. ನಮ್ಮಿಬ್ಬರಿಂದ ಬೇರೆ ಯಾರಿಗೂ ತೊಂದರೆಯಾಗಬಾರದು. ಹಾನಿಯಾಗಬಾರದು. ಮನಸಾರೆ ಮದುವೆ ಆಗಿದ್ದೀನಿ. ನಾನು ಮೈನರ್ ಅಲ್ಲ, ಮೇಜರ್. ನನ್ನ ಬುದ್ದಿಯನ್ನ ನಾನು ಯೋಚನೆ ಮಾಡಬಹುದು'' ಎಂದು ಸ್ವತಃ ಲಕ್ಷ್ಮಿ ನಾಯ್ಕ್ ಅವರೇ ವಿಡಿಯೋ ಕಳುಹಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ...