ದರ್ಶನ್ ಚಿತ್ರಕ್ಕೆ 'ಬಾಹುಬಲಿ' ಸಂಗೀತ ನಿರ್ದೇಶಕ ಸಾಥ್

Recommended Video

ದರ್ಶನ್ ಗೆ ಸಾಥ್ ನೀಡಿದ ಬಾಹುಬಲಿ ಸಂಗೀತ ನಿರ್ದೇಶಕ..? | FILMIBEAT KANNADA

ಎಂಎಂ ಕೀರವಾಣಿ....ತೆಲುಗು ಚಿತ್ರರಂಗದ ಬಹುದೊಡ್ಡ ಹೆಸರು. ಯಶಸ್ವಿ ನಿರ್ದೇಶಕ ರಾಜಮೌಳಿ ಅವರ ಬಹುತೇಕ ಎಲ್ಲ ಚಿತ್ರಕ್ಕೂ ಇವರೇ ಸಂಗೀತ ನೀಡಿರುವುದು. ತೆಲುಗು, ಹಿಂದಿ, ತಮಿಳು ಹಾಗೂ ಕನ್ನಡ ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇಂತಹ ದಿಗ್ಗಜ ಸಂಗೀತ ನಿರ್ದೇಶಕ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರದ ಟೈಟಲ್ ಹಾಡನ್ನ ಕೀರವಾಣಿ ಹಾಡಿದ್ದಾರೆ.

ಸಾಹೋರೇ ಸಾಹೋ....ಗೀತೆಗೆ ಬಾಹುಬಲಿ ಸಂಗೀತ ನಿರ್ದೇಶಕ ಧ್ವನಿಗೂಡಿಸಿದ್ದಾರೆ. ಅಂದ್ಹಾಗೆ, ಕೀರವಾಣಿ ಹಾಡಿರೋದು ಕನ್ನಡ ಹಾಡಲ್ಲ, ತೆಲುಗು ವರ್ಷನ್ ಹಾಡು. ಸಾಮಾನ್ಯವಾಗಿ ಡಬ್ ಮಾಡಿದ ಹಾಡುಗಳು ಕೇಳಲು ಅಷ್ಟಾಗಿ ಚೆನ್ನಾಗಿರಲಿಲ್ಲ. ಆದರೆ, ಕೀರವಾಣಿ ದನಿಯಲ್ಲಿ ಬಂದಿರುವ ಈ ಹಾಡು ಮೂಲ ತೆಲುಗು ಹಾಡೇ ಇರಬಹುದು ಎನ್ನುವಷ್ಟು ಚೆನ್ನಾಗಿ ಬಂದಿದೆ.

Mm Keeravani Sings Kurukshetra Song

ಕನ್ನಡದಲ್ಲಿ ಡಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ತೆಲುಗಿನಲ್ಲಿ ವೆನ್ನಿಲಕಾಂತಿ ಸಾಹಿತ್ಯ ಬರೆದಿದ್ದಾರೆ. ಸದ್ಯ ತೆಲುಗಿನಲ್ಲಿ ಟ್ರೈಲರ್ ಬಂದಿತ್ತು. ಈಗ ಟೈಟಲ್ ಹಾಡು ಬಂದಿದೆ. ಈ ಹಾಡು ಕೇಳಿದ ತೆಲುಗು ಪ್ರೇಕ್ಷಕರು ನಮ್ಮದೇ ಸಿನಿಮಾ ಎಂದು ಬರಮಾಡಿಕೊಳ್ಳುತ್ತಿದ್ದಾರೆ.

ಅಳಿಮಯ್ಯ, ಭೈರವಿ, ಸ್ವಾತಿ, ಅಪ್ಪಾಜಿ, ಕರ್ನಾಟಕ ಸುಪುತ್ರ, ದೀಪಾವಳಿ, ಸುಂದರಕಾಂಡ, ಜಮೀನ್ದಾರು, ವೀರಮದಕರಿ ಅಂತಹ ಕನ್ನಡ ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ ಕೀರವಾಣಿ.

More from Filmibeat

English summary
Baahubali Music director mm keeravani has sung a title song of darshan kurukshetra telegu version.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X