ಮೊಬೈಲ್ ಹ್ಯಾಕ್, ನಟಿ ರಾಧಿಕಾ ಪಂಡಿತ್ ರಿಯಾಕ್ಷನ್

By Rajendra

ನಟಿ ರಾಧಿಕಾ ಪಂಡಿತ್ ಅವರ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ರಾಧಿಕಾ ಪಂಡಿತ್ ಅವರು ಪ್ರತಿಕ್ರಿಯಿಸಿದ್ದು, ಹ್ಯಾಕ್ ಮಾಡಿದವರ ಪ್ರಚಂಡ ಬುದ್ಧಿವಂತಿಕೆಗೆ ಬೆರಗಾಗಿದ್ದಾರೆ. ಆದರೆ ತಾನು ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ ಎಲ್ಲವೂ ಕಂಟ್ರೋಲ್ ನಲ್ಲಿದೆ. ತಲೆಕೆಡಿಸಿಕೊಳ್ಳುವಂತಹದ್ದು ಏನೂ ಇಲ್ಲ. 'ದಿಲ್ ವಾಲಾ' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ರಾಧಿಕಾ ಪಂಡಿತ್ ತಿಳಿಸಿದ್ದರು. ಕಳೆದ ಮೂರು ದಿನಗಳಿಂದ ತಮ್ಮ ಮೊಬೈಲ್ ಹ್ಯಾಕ್ ಆಗಿತ್ತು. ಅದರಲ್ಲಿನ ಮುಖ್ಯ ಸಂಖ್ಯೆಗಳಿಗೆ ಮೆಸೇಜ್ ಕಳುಹಿಸಿದ್ದಾರೆ ಹ್ಯಾಕರ್ಸ್.

ತಮ್ಮ ಮೊಬೈಲ್ ನಿಂದ ನಟಿ ರಮ್ಯಾ ಅವರಿಗೂ ಮೆಸೇಜ್ ಹೋಗಿದೆ. ಒಂದು ಸಿನಿಮಾ ಪತ್ರಿಕೆಗೂ ಹೋಗಿದ್ದು, ನನ್ನ ಪರವಾಗಿ ಹಣಕಾಸು ನೆರವನ್ನೂ ಕೇಳಿದ್ದಾರೆ. ತನ್ನ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ತಮಗೆ ಆರಂಭದಲ್ಲಿ ಗೊತ್ತೇ ಆಗಲಿಲ್ಲ ಎಂದಿದ್ದಾರೆ.

ಇಷ್ಟಕ್ಕೂ ಮೊಬೈಲ್ ಹೇಗೆ ಹ್ಯಾಕ್ ಆಗುತ್ತದೆ ಎಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಬ್ಲೂಟೂತ್ ಹಾಗೂ ವೈಫೈ ಆನ್ ಮಾಡಿಕೊಂಡೇ ಇರುವುದರಿಂದ ಈ ರೀತಿಯಾಗುವ ಸಾಧ್ಯತೆಗಳಿವೆ. ಸ್ಮಾರ್ಟ್ ಫೋನ್ ಗಳಲ್ಲಿ ಸೂಕ್ತವಾದ ಆಂಟಿ ವೈರಸ್ ಇನ್ಸ್ ಟಾಲ್ ಮಾಡಿಕೊಳ್ಳುವುದರಿಂದ ಹ್ಯಾಕ್ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹರಿಸಿಕೊಳ್ಳಬಹುದು.

ಈಗಾಗಲೇ ರಾಧಿಕಾ ಪಂಡಿತ್ ಅವರ ಮೊಬೈಲ್ ಹ್ಯಾಕ್ ಆಗಿರುವ ಕಾರಣ ಅವರ IMEI ಸಂಖ್ಯೆಯನ್ನೂ ಹ್ಯಾಕರ್ಸ್ ಮತ್ತೆ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಅವರು ಹೊಸ ಸೆಟ್ ಕೊಂಡುಕೊಳ್ಳುವುದೇ ಸೂಕ್ತ ಎಂಬುದು ತಜ್ಞರ ಎಚ್ಚರಿಕೆಯ ಮಾತು. (ಒನ್ಇಂಡಿಯಾ ಕನ್ನಡ)

More from Filmibeat

English summary
Actress Radhika Pandit mobile hacks and replies as U guys are right.. My phone was HACKED what can we call such masterminds? Never mind.. Its all under control now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X