ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರ

By Rajendra

Model gang raped
ಮಾಡೆಲಿಂಗ್ ಹಾಗೂ ಕಿರುತೆರೆಗೆ ಅಡಿಯಿಡಬೇಕೆಂದು ಕನಸು ಹೊತ್ತಿದ್ದ ಯುವತಿಯೊಬ್ಬಳು ವೇಶ್ಯಾಜಾಲದಲ್ಲಿ ಸಿಲುಕಿ, ಬಳಿಕ ಅಲ್ಲಿಂದ ಪಾರಾಗಲು ಯತ್ನಿಸಿ ಸಾಮೂಹಿಕ ಅತ್ಯಾಚಾರದಲ್ಲಿ ಅಂತ್ಯವಾದ ಘಟನೆ ಗಾಂಧಿ ಹುಟ್ಟಿದ ರಾಜ್ಯ ಗುಜರಾತ್‌ನಲ್ಲಿ ನಡೆದಿದೆ.

ಇಪ್ಪತ್ತರ ಹರೆಯದ ಈ ಯುವತಿ ಗುಜರಾತ್‌ನ ಅಮ್ರೇಲಿ ಜಿಲ್ಲೆಯವರು. ಶುಕ್ರವಾರ (ಜು.15) ರಾತ್ರಿ ಅಹಮದಾಬಾದ್‌ನಲ್ಲಿ ಇಬ್ಬರು ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸೋಲಾ ಪ್ರದೇಶದಲ್ಲಿ ಈಕೆ ವೇಶ್ಯಾಜಾಲದಿಂದ ಎಸ್ಕೇಪ್ ಆಗಬೇಕಾದರೆ ಈಕೆಯ ಮೇಲೆ ಅತ್ಯಾಚಾರ ನಡೆದಿದೆ.

ರೈಲ್ವೆ ಕ್ರಾಸಿಂಗ್‌ನಲ್ಲಿ ಈಕೆಯನ್ನು ಕಿಡ್ನಾಪ್ ಮಾಡಿ ಬಳಿಕ ಅಪಾರ್ಟ್‌ಮೆಂಟ್ ಒಂದರಲ್ಲಿ ಈಕೆಯನ್ನು ಬಂಧಿಸಿಟ್ಟಿದ್ದರು. ಮಹಿಳಾ ಪಿಂಪ್ ಒಬ್ಬಳು ತಮ್ಮನ್ನು ಮನಬಂದಂತೆ ಥಳಿಸಿದಳು ಎಂದು ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರೆ ಉಳಿದಿಬ್ಬರು ಅವರಿಗೆ ಸಹಾಯ ಮಾಡಿದ್ದಾರೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾಗಿರುವವರು ದಲಿತ ಯುವತಿಯಾಗಿರುವ ಕಾರಣ ಪೊಲೀಸರು ದಲಿತ ಜಾತಿ ನಿಂದನೆ ಕಾನೂನ ಅಡಿ ಕೇಸು ದಾಖಲಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿಯ ವಿವರಗಳನ್ನು ಗೌಪ್ಯವಾಗಿಟ್ಟಿದ್ದು, ಆಕೆ ಅಮ್ರೇಲಿ ಜಿಲ್ಲೆಯ ದಾಮ್‍ನಗರ್ ವಾಸಿಯೆಂದು ಪೊಲೀಸರು ವಿವರ ನೀಡಿದ್ದಾರೆ. (ಪಿಟಿಐ)

More from Filmibeat

English summary
A 20 year-old aspiring model from Damnagar village near Amreli district was allegedly gang raped here by two persons, police said today. The girl in her complaint has alleged that she was beaten by Kajal and her two male friends, before being raped.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X