10 ವರ್ಷದ ಹಿಂದೆ ಇದ್ದ ಯಶ್ ಬೇರೆ, ಈಗಿರೋ ಯಶ್ ಬೇರೆ.!
Recommended Video

'ಕೆಜಿಎಫ್' ಚಿತ್ರದ ಮೂಲಕ 'ನ್ಯಾಷನಲ್ ಸ್ಟಾರ್' ಆಗಿ ಗುರುತಿಸಿಕೊಳ್ಳುತ್ತಿರುವ ಕನ್ನಡ ನಟ ಯಶ್ ಇಂಡಸ್ಟ್ರಿಗೆ ಬಂದು ಆಲ್ ಮೋಸ್ಟ್ 10 ವರ್ಷ ಆಗಿದೆ. 2007ರಲ್ಲಿ 'ಜಂಭದ ಹುಡುಗಿ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದರು. ಆದ್ರೆ, ಯಶ್ ಗೆ ಒಂದು ಬ್ರೇಕ್ ನೀಡಿದ್ದು ಎರಡನೇ ಸಿನಿಮಾ 'ಮೊಗ್ಗಿನ ಮನಸ್ಸು'.
ಶಶಾಂಕ್ ನಿರ್ದೇಶನದ ಚೊಚ್ಚಲ ಸಿನಿಮಾ 'ಮೊಗ್ಗಿನ ಮನಸ್ಸು'. ಈ ಚಿತ್ರದಲ್ಲಿ ರಾಧಿಕಾ ಪಂಡಿತ್, ಶುಭಪೂಂಜಾ, ಯಶ್, 'ರಾಜಾಹುಲಿ' ಖ್ಯಾತಿಯ ಹರ್ಷ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.
ಈ ಸಿನಿಮಾ ಬಂದು ಈಗ 10 ವರ್ಷ ಆಗಿದೆ. ಈ ಹತ್ತು ವರ್ಷದಲ್ಲಿ ನಟ ಯಶ್ ತುಂಬಾ ಬದಲಾಗಿದ್ದಾರೆ. ಸಾಧಾರಣ ಯಶ್ ಆಗಿದ್ದ ಹುಡುಗ ಈಗ 'ರಾಕಿಂಗ್ ಸ್ಟಾರ್' ಆಗಿದ್ದಾರೆ. ಹತ್ತು ವರ್ಷದಲ್ಲಿ ಮಾಡಿದ ಸಾಧನೆ ಒಂದು ಕಡೆಯಾದ್ರೆ, ಒಂದೇ ಚಿತ್ರದ ಮೂಲಕ ಹತ್ತು ವರ್ಷಕ್ಕೆ ಆಗುವಷ್ಟು ಇಮೇಜ್ ಪಡೆಯಲು ಯಶ್ ಸಜ್ಜಾಗಿದ್ದಾರೆ. ಮುಂದೆ ಓದಿ....

ಸಾಧಾರಣ ಯಶ್ ಆಗಿದ್ದರು
'ಮೊಗ್ಗಿನ ಮನಸ್ಸು' ನಂತರ ರಾಕಿ, ಗೋಕುಲ, ಮೊದಲ ಸಲಾ, ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮಾ, ಗೂಗ್ಲಿ ಅಂತಹ ಸಿನಿಮಾಗಳಲ್ಲಿ ಅಭಿನಯಿಸಿ ಒಂದೊಳ್ಳೆ ನಟ ಎನಿಸಿಕೊಂಡಿದ್ದರು. ಸಿನಿಮಾಗಳು ಸಕ್ಸಸ್ ಆದರೂ, ಟಾಪ್ ನಟರ ಸಾಲಿನಲ್ಲಿ ಯಶ್ ಪೈಪೋಟಿ ಮಾಡುವುದು ಕಷ್ಟವಾಗಿತ್ತು.

ಘರ್ಜಿಸಿದ 'ರಾಜಾಹುಲಿ'
ಲವರ್ ಬಾಯ್ ಇಮೇಜ್ ನಲ್ಲಿದ್ದ ಯಶ್, 2013ರಲ್ಲಿ 'ರಾಜಾಹುಲಿ' ಎಂಬ ಸಿನಿಮಾ ಮಾಡಿದ್ರು. ಈ ಚಿತ್ರದ ನಂತರ ಯಶ್ ಹವಾ ಮತ್ತಷ್ಟು ಬದಲಾಯ್ತು. ಲವರ್ ಬಾಯ್ ಇಮೇಜ್ ಇಂದ ಮಾಸ್ ಕಡೆ ಹೆಜ್ಜೆ ಇಟ್ಟರು. ಸ್ಯಾಂಡಲ್ ವುಡ್ ನಲ್ಲಿ ಯಶ್ ಅಬ್ಬರ ಇಲ್ಲಿಂದ ಇನ್ನೊಂದು ಹಂತಕ್ಕೆ ಬದಲಾಯ್ತು.

ಮಾಸ್ ಇಮೇಜ್ ಕೊಟ್ಟ 'ರಾಮಾಚಾರಿ'
ಅದರ ಪರಿಣಾಮ ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೈಟ್ ಫಾರ್ವಾಡ್ ಅಂತಹ ಮಾಸ್ ಹಿಟ್ ಸಿನಿಮಾಗಳನ್ನ ಮಾಡಿದ್ರು. ಅದರಲ್ಲೂ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಬಹುದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಕಲೆಕ್ಷನ್ ನಲ್ಲೂ ಈ ಸಿನಿಮಾ ದಾಖಲೆ ಬರೆದಿತ್ತು.

ಇನ್ನೊಂದು ಹಂತಕ್ಕೆ ಹೋದ ಯಶ್
ಈ ಹತ್ತು ವರ್ಷದಲ್ಲಿ ಯಶ್ ಮಾಡಿದ ಸಾಧನೆ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮತವಾಗಿತ್ತು. ಆದ್ರೀಗ, ಕೆಜಿಎಫ್ ಎಂಬ ಒಂದು ಸಿನಿಮಾ ಯಶ್ ಅವರನ್ನ ಹೊರರಾಜ್ಯಕ್ಕೂ ಕರೆದುಕೊಂಡು ಹೋಗಿ, ಅತಿ ಎತ್ತರದಲ್ಲಿ ನಿಲ್ಲಿಸಿದೆ. ಈ ಹತ್ತು ವರ್ಷದಲ್ಲಿ ಮಾಡಿದ ಸಾಧನೆಗಿಂತ ಈ ಒಂದು ಚಿತ್ರದಲ್ಲಿ ಮಾಡುತ್ತಿರುವ ಸಾಧನೆ ದೊಡ್ಡದೆನಿಸಿದೆ.


Click it and Unblock the Notifications