ರಾಜ್ ಕುಮಾರ್ ಮೊಮ್ಮಗನ ಮೇಲೆ ಹ್ಯಾರಿಸ್ ಮಗನ ದಬ್ಬಾಳಿಕೆ
ನಟ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಗುರು ರಾಘವೇಂದ್ರ ರಾಜ್ ಕುಮಾರ್ ಅವರ ಮೇಲೆ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ದಬ್ಬಾಳಿಕೆ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾಗಿರುವ ವಿದ್ವತ್ ಹಾಗೂ ಗುರು ರಾಘವೇಂದ್ರ ರಾಜ್ ಕುಮಾರ್ ಬಹಳ ದಿನದ ಸ್ನೇಹಿತರು. ವಿದ್ವತ್ ಮೇಲೆ ಹಲ್ಲೆ ಆಗಿರುವ ವಿಚಾರ ತಿಳಿದ ನಂತರ ಗುರು ರಾಘವೇಂದ್ರ ರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದ್ದರು.
ಅದೇ ಸಂದರ್ಭದಲ್ಲಿ ಮಲ್ಯ ಆಸ್ಪತ್ರೆಗೆ ನುಗ್ಗಿದ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹಾಗೂ ಸ್ನೇಹಿತರು ಗುರು ಮೇಲೆ ಹಲ್ಲೆ ಮಾಡಲು ಪ್ರಯತ್ನ ಪಟ್ಟಿದ್ದಾರಂತೆ. ಈ ವಿಚಾರ ಈಗ ಹೊರಗೆ ಬಂದಿದ್ದು ರಾಜ್ ಕುಮಾರ್ ಕುಟುಂಬದವರ ಕಡೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ವಿದ್ವತ್ ಅವರ ಆರೋಗ್ಯ ವಿಚಾರಿಸಲು ಗುರು ಬಂದಾಗ ಹ್ಯಾರಿಸ್ ಪುತ್ರ ಗುರು ಅವರ ಮೇಲೂ ಹಲ್ಲೆ ಮಾಡಲು ಮುಂದಾಗಿ ಅವರನ್ನ ತಳ್ಳಾಡಿದ್ದಾರೆ ಎನ್ನುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.


Click it and Unblock the Notifications











