»   » ಫ್ಲ್ಯಾಶ್ ಬ್ಯಾಕ್: ಚಿತ್ರ ನಟಿಯರ ಮೇಲೆ ದುಷ್ಟರ ಅಟ್ಟಹಾಸ

ಫ್ಲ್ಯಾಶ್ ಬ್ಯಾಕ್: ಚಿತ್ರ ನಟಿಯರ ಮೇಲೆ ದುಷ್ಟರ ಅಟ್ಟಹಾಸ

Posted By:
Subscribe to Filmibeat Kannada

ಸದ್ಯ, ಮಲಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣ ಬಾರಿ ಚರ್ಚೆಯಾಗುತ್ತಿದೆ. ಈ ಹಿಂದೆ ಕೂಡ ನಟಿಯರ ಮೇಲೆ ದೌರ್ಜನ್ಯ ಮಾಡಿರುವ ಹಲವು ಘಟನೆಗಳು ನಡೆದಿವೆ.

ಬಾಲಿವುಡ್ ಚಿತ್ರರಂಗ ಸೇರಿದಂತೆ ಕನ್ನಡ, ತಮಿಳು, ತೆಲುಗು ನಟಿಯರ ಮೇಲೂ ದುಷ್ಟರು ಕಣ್ಣು ಹಾಕಿದ್ದರು. ಕೆಲವರು ಕಿರುಕುಳಕ್ಕೆ ಒಳಗಾಗಿದ್ದರೇ, ಮತ್ತೆ ಕೆಲವರು ಅಂತಹ ಘಟನೆಗಳಿಂದ ತಪ್ಪಿಸಿಕೊಂಡಿದ್ದಾರೆ. ಆದ್ರೆ, ಬಹುತೇಕರಿಗೆ ಒಂದಲ್ಲ ಒಂದು ರೀತಿಯ ಈ ರೀತಿಯ ಸಂಕಟ ಎದುರಾಗಿದೆ ಎನ್ನುವುದ್ರಲ್ಲಿ ಮಾತ್ರ ಅನುಮಾನವಿಲ್ಲ.

ಕಾಮುಕ ನಿರ್ದೇಶಕನಿಂದ ಆತ್ಮಹತ್ಯೆಗೆ ಯತ್ನಸಿದ್ದ ನಟಿ

ಕಳೆದ ವರ್ಷ, ತಮಿಳು ಯುವ ನಟಿ ಅತಿರಾ ಸಂತೋಷ್ ಅವರಿಗೆ 'ನೆಡುನಾಲ್ ವಾಡೈ' ಚಿತ್ರದ ನಿರ್ದೇಶಕ ಸೆಲ್ವ ಕಣ್ಣನ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಟಿ ಆತ್ಮಹತ್ಯೆಗೂ ಕೂಡ ಪ್ರಯತ್ನ ಪಟ್ಟಿದ್ದರು. ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.[ಕಾಮುಕ ನಿರ್ದೇಶಕನ ಕಿರುಕುಳದಿಂದ ಬೇಸತ್ತ ನಟಿ ಆತ್ಮಹತ್ಯೆಗೆ ಯತ್ನ]

ನಿರ್ಮಾಪಕರಿಂದ ಕಿರಿಕಿರಿ ಅನುಭವಿಸಿದ್ದ ನಟಿ

ಅಜಯ್ ದೇವಗನ್ ಜೊತೆ 'ಪ್ಲಾಟ್ ಫಾರಂ' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ ಚಿತ್ರರಂಗದಲ್ಲಿ ಹಲವು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ. ಚಿತ್ರದ ನಿರ್ಮಾಪಕರೊಬ್ಬರು ಹೋಟೆಲ್ ಗೆ ಊಟಕ್ಕೆ ಕರೆದು ಅಸಭ್ಯವಾಗಿ ವರ್ತಿಸಿದ್ದರಂತೆ. ಇನ್ನೂ ಹಲವು ಬಾರಿ ಚಿತ್ರದ ನಟರು ಕೂಡ ಅಸಭ್ಯವಾಗಿ ವರ್ತಿಸಿದ್ದಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದರು.['ಲೈಂಗಿಕ ಕಿರಿಕಿರಿ' ಬಗ್ಗೆ ಬಾಲಿವುಡ್ ಬೆಡಗಿಯ ಬಿಚ್ಚು ಮಾತು]

ಕಾಂಗ್ರೆಸ್ ಎಂಪಿಯಿಂದ ನಟಿಗೆ ಲೈಂಗಿಕ ಕಿರುಕುಳ?

2013ರಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದ ಬಹುಭಾಷಾ ತಾರೆ ಶ್ವೇತಾ ಮೆನನ್ ಅವರ ಮೇಲೆ ಕಾಂಗ್ರೆಸ್ ಎಂ.ಪಿ ಒಬ್ಬರು ಲೈಂಗಿಕ ದೌರ್ಜನ್ಯ ಎಸೆಗಿದ್ದರು. ಕಾರ್ಯಕ್ರಮ ಮುಗಿದ ನಂತರ ಉದ್ದೇಶ ಪೂರ್ವಕವಾಗಿ ದೇಹವನ್ನ ಸ್ವರ್ಶಿಸಿದ್ದರು ಎಂದು ಈ ಘಟನೆ ಕುರಿತು ನಟಿ ಜಿಲ್ಲಾಧಿಕಾರಿಗೆ ದೂರು ಕೂಡ ನೀಡಿದ್ದರು.[ಕಾಂಗ್ರೆಸ್ ಎಂಪಿಯಿಂದ ನಟಿಗೆ ಲೈಂಗಿಕ ಕಿರುಕುಳ?]

ರಾಧಿಕಾ ಆಪ್ಟೆಗೂ ಎದುರಾಗಿತ್ತು ಸಂಕಷ್ಟ!

ಬಾಲಿವುಡ್ ಸಿನಿಮಾ ನಿರ್ಮಾಪಕರೊಬ್ಬರು ರಾಧಿಕಾ ಅವರಿಗೆ ಕಾಲ್ ಮಾಡಿ ''ನಾವೊಂದು ಬಾಲಿವುಡ್ ಸಿನಿಮಾ ಮಾಡುತ್ತಿದ್ದೇವೆ, ನಾನು ನಿರ್ದೇಶಕರನ್ನು ಪರಿಚಯ ಮಾಡಿಸುತ್ತೇನೆ, ನಿಮಗೆ ಅವರ ಜೊತೆ ಹಾಸಿಗೆ ಹಂಚಿಕೊಳ್ಳಲು ಏನೂ ಅಭ್ಯಂತರ ಇಲ್ಲ ತಾನೆ'' ಎಂದು ಕೇಳಿದ್ದರಂತೆ. ಇನ್ನೂ ದಕ್ಷಿಣ ಭಾರತದ ನಟನೊಬ್ಬ ಪದೇ ಪದೇ ಫೋನ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ನಟಿ ಬಹಿರಂಗವಾಗಿ ಹೇಳಿಕೊಂಡಿದ್ದರು.['ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ]

ನೇರವಾಗಿ ದಬ್ಬಾಳಿಕೆ ಮಾಡಿದ ನಿರ್ದೇಶಕ

''ತಮಿಳು ನಿರ್ದೇಶಕನೊಬ್ಬ ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ, ಆದರೆ ಒಂದು ರಾತ್ರಿ ನನ್ನ ಜೊತೆ ಕಳೆಯಬೇಕು ಅಂತ ಆ ನಿರ್ದೇಶಕ, ನಟಿ ಸುರ್ವಿನ್ ಚಾವ್ಲಾ ಅವರಿಗೆ ಬೇಡಿಕೆ ಇಟ್ಟಿದ್ದನಂತೆ.[ನಿರ್ದೇಶಕನ ಅಸಹ್ಯತನ ಬಯಲು ಮಾಡಿದ ನಟಿ ಸುರ್ವಿನ್]

'ಹರಿಪ್ರಿಯಾ'ಗೂ ಕಾಡಿದ್ರು ರೋಡ್ ರೋಮಿಯೋ

ನಟಿ ಹರಿಪ್ರಿಯಾ ಅವರು ತಮ್ಮ ಸಹೋದರ ಕೀರ್ತಿ ಅವರ ಜೊತೆ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಪರಿಚಿತ ಯುವಕನೊಬ್ಬ ಹರಿಪ್ರಿಯಾ ಅವರೊಂದಿಗೆ ಫೊಟೋ ತೆಗೆಸಿಕೊಳ್ಳಲು ಬಂದು ಅಸಭ್ಯವಾಗಿ ವರ್ತಿಸಿದ್ದರಂತೆ. ಈ ವೇಳೆ ಹರಿಪ್ರಿಯಾ ಅವರ ಅಣ್ಣ ಸಾರ್ವಜನಿಕ ಸ್ಥಳದಲ್ಲಿಯೇ ಚೆನ್ನಾಗಿ ಗೂಸಾ ನೀಡಿದ್ದರು.[ನಟಿ ಹರಿಪ್ರಿಯಾ ಜೊತೆ ಅಪರಿಚಿತ ಯುವಕನ ಅಸಭ್ಯ ವರ್ತನೆ]

ಆಂಕರ್ ಅನುಶ್ರೀಗೆ ಕೆಟ್ಟ ಅನುಭವ

ಕುಂದಾಪುರದಲ್ಲೊಂದು ಕಾರ್ಯಕ್ರಮಕ್ಕೆ ಹೋಗಿದ್ದ ನಟಿ ಅನುಶ್ರೀ ಅವರಿಗೆ ಅಲ್ಲೊಬ್ಬ ಯುವಕ ಚುಡಾಯಿಸಿದ್ದಾರೆ. ಸಾಲದಕ್ಕೆ ಅನುಚಿತವಾಗಿ ವರ್ತಿಸಿದ್ದಾರೆ. ಸಿಟ್ಟಿಗೆದ್ದ ಅನುಶ್ರೀ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ದೂರು ದಾಖಲಾದ ಕೂಡಲೆ ಪೊಲೀಸರು ಆ ಯುವಕನನ್ನ ಹಿಡಿದು ಏರೋಪ್ಲೇನ್ ಹತ್ತಿಸಿದ್ದರು.[ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?]

ಗೋವಾದಲ್ಲಿ ನಿವೇದಿತಾಗೆ ಸಂಕಷ್ಟ

ಅಂದು ರಾತ್ರಿ 9 ಗಂಟೆಗೆ ಬೀಚ್ ಸೈಡ್ ನಲ್ಲಿ ನಿವೇದಿತಾ ನಡೆದಾಡುತ್ತಿದ್ದರು. ಆಗ ನಿವೇದಿತಾ ಬಳಿ ಹುಡುಗರು ಅನುಚಿತವಾಗಿ ವರ್ತಿಸಿದ್ದಾರೆ. ಕೆಟ್ಟ ಕಾಮೆಂಟ್ಸ್ ಮಾಡುವುದರ ಜೊತೆಗೆ ಫಾಲೋ ಮಾಡಿ ಅಸಭ್ಯ ವರ್ತನೆ ತೋರಿದ್ದಾರೆ. ಹುಡುಗರ ಗುಂಪೇ ಹಿಂದೆ ಬಿದ್ದಿದ್ರಿಂದ, ಪಕ್ಕದಲ್ಲೇ ಇದ್ದ ಹೋಟೆಲ್ ಒಂದರ ಒಳಕ್ಕೆ ನುಗ್ಗಿ, ಅಲ್ಲಿನ ಸರ್ವರ್ ಒಬ್ಬರ ಸಹಾಯ ಪಡೆದು ತಮ್ಮ ಹೋಟೆಲ್ ನತ್ತ ನಿವೇದಿತಾ ಹೆಜ್ಜೆ ಹಾಕಿದ್ರಂತೆ.[ಕಿಡಿಗೇಡಿಗಳಿಂದ ಕನ್ನಡ ನಟಿ ನಿವೇದಿತಾಗೆ ಗೋವಾದಲ್ಲಿ ಕೆಟ್ಟ ಅನುಭವ.!]

English summary
Detailed report on Indian Film Actress who were harassed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada