For Quick Alerts
  ALLOW NOTIFICATIONS  
  For Daily Alerts

  ಸರಳವಾಗಿ ಸೆಟ್ಟೇರಿದ ಶಿವಣ್ಣ ಮುಂದಿನ ಚಿತ್ರ 'ಘೋಸ್ಟ್'; ತಂಡ ಸೇರಿದ ಮಲಯಾಳಂ ಖ್ಯಾತ ನಟ

  |

  ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಶಿವ ರಾಜ್ ಕುಮಾರ್ 125 ಚಿತ್ರ ಪೂರೈಸುವ ಹೊಸ್ತಿಲಲ್ಲಿದ್ದಾರೆ. ನಿರ್ದೇಶಕ ಎ ಹರ್ಷ ಜೊತೆ ನಾಲ್ಕನೇ ಬಾರಿಗೆ ಕೈಜೋಡಿಸಿರುವ ಶಿವಣ್ಣ ಅಭಿನಯದ 'ವೇದಾ' ಸಿನಿ ವೃತ್ತಿ ಬದುಕಿನ 125ನೇ ಸಿನಿಮಾವಾಗಲಿದೆ.

  'ಬೈರಾಗಿ' ಕೊನೆಯದಾಗಿ ತೆರೆಗಪ್ಪಳಿಸಿರುವ ಶಿವರಾಜ್ ಕುಮಾರ್ ಅಭಿನಯದ ಚಿತ್ರವಾಗಿದ್ದು, ವೇದಾ ಚಿತ್ರಕ್ಕೂ ಮುನ್ನ 'ನೀ ಸಿಗೋವರೆಗೂ' ಚಿತ್ರ ಶಿವಣ್ಣ ಅಭಿನಯದ 124ನೇ ಚಿತ್ರವಾಗಲಿದೆ. ಈ ಚಿತ್ರಗಳು ಮಾತ್ರವಲ್ಲದೆ ಶಿವರಾಜ್ ಕುಮಾರ್ ನಾಯಕನಾಗಿ ಅಭಿನಯಿಸಲಿರುವ ಸಾಲು ಸಾಲು ಚಿತ್ರಗಳು ತಯಾರಾಗುತ್ತಿದ್ದು, ಸದ್ಯ ಶಿವಣ್ಣನ ಕೈನಲ್ಲಿ ಸುಮಾರು ಏಳೆಂಟು ಸಿನಿಮಾಗಳಿವೆ.

  ಈ ಪೈಕಿ ಬೀರಬಲ್ ಹಾಗೂ ಓಲ್ಡ್ ಮಾಂಕ್ ಚಿತ್ರಗಳ ಖ್ಯಾತಿಯ ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರ ಕೂಡ ಒಂದು. ಇದು ಶಿವಣ್ಣ ಸಿನಿ ವೃತ್ತಿ ಬದುಕಿನ 127ನೇ ಚಿತ್ರವಾಗಲಿದ್ದು, ಸಾಲು ಸಾಲು ಹಿಟ್ ನೀಡಿರುವ ಶ್ರೀನಿ ನಿರ್ದೇಶನದ ಈ ಚಿತ್ರದ ಮೇಲೆ ಸಾಮಾನ್ಯವಾಗಿ ನಿರೀಕ್ಷೆ ಇದೆ. ನಿರ್ದೇಶಕ ಶ್ರೀನಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಚಿತ್ರದ ಕುರಿತು ಈಗಾಗಲೇ ಕೆಲವೊಂದಷ್ಟು ಪೋಸ್ಟ್ ಹಂಚಿಕೊಂಡಿದ್ದು, ಶಿವಣ್ಣ ಅಭಿಮಾನಿಗಳಲ್ಲಿ ಚಿತ್ರದ ಮೇಲೆ ನಿರೀಕ್ಷೆ ಇದೆ.

  ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡುತ್ತಿದ್ದು, ಚಿತ್ರದ ಮುಹೂರ್ತ ಪೂಜೆ ಕಾರ್ಯಕ್ರಮ ವಿಜಯದಶಮಿಯ ವಿಶೇಷ ದಿನದಂದು ನೆರವೇರಿದೆ. ಹೀಗೆ ಸರಳವಾಗಿ ಜರುಗಿದ ಈ ಮುಹೂರ್ತ ಪೂಜೆಯ ಚಿತ್ರಗಳನ್ನು ನಿರ್ದೇಶಕ ಶ್ರೀನಿ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರ ಬೆನ್ನಲ್ಲೇ ಮಲಯಾಳಂನ ಖ್ಯಾತ ನಟ ಜಯರಾಮ್ ಘೋಸ್ಟ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

  ಮಲಯಾಳಂ ಚಿತ್ರಗಳನ್ನು ಹೊರತುಪಡಿಸಿ ಈಗಾಗಲೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯರಾಂ ಘೋಸ್ಟ್ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ. ಈ ವಿಷಯವಾಗಿ ಶ್ರೀನಿ ಚಿಕ್ಕ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಜಯರಾಂ ಅವರಿಗೆ ಚಂದನವನಕ್ಕೆ ಸ್ವಾಗತವನ್ನು ಕೋರಿದ್ದಾರೆ.

  English summary
  Mollywood actor Jayaram entering sandalwood through Shiva Rajkumar's Ghost
  Friday, October 7, 2022, 9:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X