For Quick Alerts
  ALLOW NOTIFICATIONS  
  For Daily Alerts

  ಲೋಕಲ್ ಬಾರ್‌ಗೆ ಹೋದ ಧನಂಜಯ್‌ಗೆ ಕ್ರೇಜಿ ಫ್ಯಾನ್ಸ್ ಅಟ್ಯಾಕ್: ಮುಂದೆ ಆಗಿದ್ದೇನು?

  |

  ಡಾಲಿ ಧನಂಜಯ್ ಲೋಕಲ್‌ಗೆ ಲೋಕಲ್. ಕ್ಲಾಸ್‌ಗೆ ಕ್ಲಾಸ್. ಆಯಾ ಸಂದರ್ಭಕ್ಕೆ ತಕ್ಕಂತೆ ಒಗ್ಗಿಕೊಳ್ಳೋ ಏಕೈಕ ನಟ. ಸ್ಟಾರ್ ಹೀರೊ ಒಬ್ಬ ಲೋಕಲ್‌ ಬಾರ್‌ಗೆ ಹೋಗೋಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ, ಡಾಲಿ ಅಂತಹ ಸ್ಟ್ಯಾಂಡರ್ಡ್‌ ಲೈಫ್‌ ಸ್ಟೈಲ್ ಅನ್ನು ಫಾಲೋ ಮಾಡೋದಿಲ್ಲ. ಲೋಕಲ್ ಜೊತೆ ಲೋಕಲ್ ಆಗಿ. ಕ್ಲಾಸ್ ಜನರ ಕ್ಲಾಸ್ ಹೀರೊ ಆಗಿ ಕಾಣಿಸಿಕೊಳ್ಳುತ್ತಾರೆ.

  ಧನಂಜಯ್ ಸದ್ಯ 'ಮಾನ್ಸೂನ್ ರಾಗ' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದೇ ಮೂಡ್‌ನಲ್ಲಿ ಲೋಕಲ್ ಬಾರ್‌ಗೆ ಹೋಗಬೇಕು ಅಂತ ಅನಿಸಿತ್ತು. ಹೊರಗಡೆ ಬಿಡುದಂತೆ ಸುರಿಯುತ್ತಿರೋ ಮಳೆ. ಆ ಮಳೆ ನೋಡಿ 'ಮಾನ್ಸೂನ್ ರಾಗ'ನೇ ನೆನಪಾಗಿ ಬೆಂಗಳೂರಿನಲ್ಲಿರೋ ಲೋಕಲ್ ಬಾರ್‌ಗೆ ನುಗ್ಗಿದ್ದರು.

  'ಹೊಯ್ಸಳ' ಉತ್ಸವಕ್ಕೆ ಮುಹೂರ್ತ ಫಿಕ್ಸ್: ರಾಮನವಮಿಗೆ ಡಾಲಿ ಖಾಕಿ ಖದರ್'ಹೊಯ್ಸಳ' ಉತ್ಸವಕ್ಕೆ ಮುಹೂರ್ತ ಫಿಕ್ಸ್: ರಾಮನವಮಿಗೆ ಡಾಲಿ ಖಾಕಿ ಖದರ್

  ಟೀ ಶರ್ಟ್ ಹಾಗೂ ಶಾರ್ಟ್ ಹಾಕೊಂಡು ದಿಢೀರನೇ ಬಾರಿಗೆ ಎಂಟ್ರಿ ಕೊಟ್ರೆ ನಶೆಯಲ್ಲಿರಿಗೆ ಏನಾಗಬೇಡಾ? ಡಾಲಿ ಎಂಟ್ರಿ ಕೊಟ್ಟ ಕೂಡಲೇ ಕ್ರೇಜಿ ಅಭಿಮಾನಿಗಳ ಆರ್ಭಟ ಹೆಚ್ಚಾಗಿತ್ತು. ಧನಂಜಯ್ ನೋಡಿ ಅಭಿಮಾನಿಗಳು ಮೈ ಮೇಲೆ ಬೀಳೋಕೆ ಶುರುವಿಟ್ಕೊಂಡರು. ಮುಂದೇನಾಯ್ತು? ಅಂತ ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಆಟೋದಲ್ಲಿ ಬಾರ್‌ಗೆ ಬಂದ ಡಾಲಿ

  ಆಟೋದಲ್ಲಿ ಬಾರ್‌ಗೆ ಬಂದ ಡಾಲಿ

  ಡಾಲಿ ಧನಂಜಯ್ ಈಗ ಸ್ಟ್ರಗಲಿಂಗ್ ಸ್ಟಾರ್ ಅಲ್ಲ. ಸ್ಟಾರ್ ಹೀರೊ. ಕನ್ನಡ, ತೆಲುಗು ಸೇರಿದಂತೆ ಬೇರೆ ಭಾಷೆಯಲ್ಲೆಲ್ಲಾ ಬೇಡಿಕೆಯ ನಟ. ಅದರಲ್ಲೂ ಸ್ಯಾಂಡಲ್‌ವುಡ್‌ನಲ್ಲಿ ಕೈ ತುಂಬಾ ಸಿನಿಮಾಗಳಿವೆ. ಹೀಗಾಗಿ ಸ್ಟಾರ್ ಹೀರೊ ಎಲ್ಲೇ ಹೋದರೂ ದುಬಾರಿ ಕಾರಿನಲ್ಲಿಯೇ ಬರುತ್ತಾರೆ ಅನ್ನೋ ಎಲ್ಲರ ನಂಬಿಕೆ. ಆದರೆ. ಡಾಲಿ ಧನಂಜಯ್ ಹಾಗಲ್ಲ. ಲೋಕಲ್ ಬಾರ್‌ಗೆ ಆಟೋದಲ್ಲಿ ಎಂಟ್ರಿ ಕೊಟ್ಟಿದ್ದರು. ಟಿ ಶರ್ಟ್ ಹಾಗೂ ಶಾರ್ಟ್ ಡ್ರೆಸ್‌ನಲ್ಲಿ ಲೋಕಲ್ ಬಾರ್‌ಗೆ ಹೋದಾಗ ಹೇಗಿರುತ್ತೆ? ಅನ್ನೋ ಎಕ್ಸ್‌ಪೆರಿಮೆಂಟ್ ಹೇಗೆ ವರ್ಕ್‌ಔಟ್ ಆಗಿದೆ ನೋಡಿ.

  'ಪುಷ್ಪ' ಅಂದ್ರೆ ಫ್ಲವರ್ ಅಲ್ಲ ಫೈಯರ್: ಪೂರಿ ಎದುರು ಸಿನಿಮಾ ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಸುಕ್ಕು!'ಪುಷ್ಪ' ಅಂದ್ರೆ ಫ್ಲವರ್ ಅಲ್ಲ ಫೈಯರ್: ಪೂರಿ ಎದುರು ಸಿನಿಮಾ ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಸುಕ್ಕು!

  ಬಾರ್‌ ಒಳಗೆ ಎಂಟ್ರಿ ಕೊಡ್ತಿದ್ದಂತೆ ಆಗಿದ್ದೇನು?

  ಬಾರ್‌ ಒಳಗೆ ಎಂಟ್ರಿ ಕೊಡ್ತಿದ್ದಂತೆ ಆಗಿದ್ದೇನು?

  ನಶೆಯೇರಿಸಿಕೊಂಡಿದ್ದವರು ಲೋಕಲ್ ಬಾರಿನಲ್ಲಿ ಡಾಲಿ ಧನಂಜಯ್‌ರನ್ನು ನೋಡಿ ಒಮ್ಮೆ ಶಾಕ್ ಆಗಿದ್ದರು. ನಿರೀಕ್ಷೆ ಮಾಡದೆ ತಮ್ಮಷ್ಟಕ್ಕೆ ತಾವು ಎಣ್ಣೆ ಹಾಕುತ್ತಾ ಕುಳಿತಿದ್ದವರು ಧನಂಜಯ್ ನೋಡುತ್ತಿದ್ದಂತೆ ಫುಲ್ ಥ್ರಿಲ್ ಆಗಿದ್ದರು. ಸೆಲ್ಫಿಗಾಗಿ ಡಾಲಿಯನ್ನು ಮುತ್ತಿಕೊಂಡರು. ಸೆಲ್ಫಿಗಾಗಿ ಕಿತ್ತಾಟ ಎಲ್ಲವೂ ಕಾಮನ್ ಆಗಿತ್ತು. ಆದರೂ ಲೋಕಲ್ ಬಾರ್‌ನಲ್ಲಿ ಅಭಿಮಾನಿಗಳ ಜೊತೆ ಕೂತು ಒಂದಿಷ್ಟು ಸಮಯ ಕಳೆದು ಬಂದಿದ್ದಾರೆ.

  'ಮಾನ್ಯೂನ್ ರಾಗ' ಎಕ್ಸ್‌ಪೆರಿಮೆಂಟ್

  'ಮಾನ್ಯೂನ್ ರಾಗ' ಎಕ್ಸ್‌ಪೆರಿಮೆಂಟ್

  ಡಾಲಿ ಧನಂಜಯ್ 'ಮಾನ್ಸೂನ್ ರಾಗ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲೇ ಧನಂಜಯ್ ಪ್ರಚಾರದಲ್ಲಿಯೂ ಹೊಸ ಎಕ್ಸ್‌ಪೆರಿಮೆಂಟ್ ಮಾಡುತ್ತಿದ್ದಾರೆ. ಲೋಕಲ್ ಬಾರ್‌ಗಳಿಗೆ ಹೋಗಿ ಪ್ರಚಾರ ಮಾಡಿ ಬಂದಿದ್ದಾರೆ. ತಮ್ಮ ಸಿನಿಮಾವನ್ನು ನೋಡುವಂತೆ ಡಾಲಿ ಧನಂಜಯ್ ಮನವಿ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಡಾಲಿ ಮನವಿಗೆ ಸ್ಪಂಧಿಸಿದ್ದು, 'ಮಾನ್ಸೂನ್ ರಾಗ' ನೋಡುವ ಭರವಸೆ ನೀಡಿದ್ದಾರೆ.

  ಡಿಂಪಲ್-ಡಾಲಿ ಕಾಂಬಿನೇಷನ್

  ಡಿಂಪಲ್-ಡಾಲಿ ಕಾಂಬಿನೇಷನ್

  'ಮಾನ್ಸೂನ್ ರಾಗ' ಸಿನಿಮಾ ಇದೇ ಸೆಪ್ಟೆಂಬರ್ 16ಕ್ಕೆ ರಿಲೀಸ್ ಆಗುತ್ತಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‌ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರು ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದಾರೆ. ಸ್ಯಾಂಡಲ್‌ವುಡ್‌ಗೆ ಈ ಸಿನಿಮಾ ಹೊಸ ಅನುಭವ ನೀಡೋದು ಖಚಿತ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಸದ್ಯ ಧನಂಜಯ್ ಬಾರ್‌ಗೆ ಎಂಟ್ರಿ ಕೊಟ್ಟಿದ್ದು ಸಿನಿಮಾ ಪ್ರಚಾರ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.

  English summary
  Monsoon Raaga Star Dhananjay Went To Bar In Bengaluru Where He was Surrounded By Fans, Know More.
  Wednesday, September 7, 2022, 16:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X