ಕಾರಂತರ 'ಮೂಕಜ್ಜಿಯ' ಬರುವಿಕೆಗೆ ದಿನಾಂಕ ನಿಗದಿ
'ಮೂಕಜ್ಜಿಯ ಕನಸುಗಳು' ಸಿನಿಮಾ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಸಿನಿಮಾ ನವೆಂಬರ್ 15ಕ್ಕೆ ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ್ ಕಾರಂತ ಅವರ ಕೃತಿ ಸಿನಿಮಾ ರೂಪ ಪಡೆದಿದೆ. ಎಂಟು ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದ ನಿರ್ದೇಶಕ ಪಿ ಶೇಷಾದ್ರಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮೂಕಜ್ಜಿಯ ಪಾತ್ರದಲ್ಲಿ ಖ್ಯಾತ ಹಿರಿಯ ಕಲಾವಿದೆ ಬಿ ಜಯಶ್ರೀ ಕಾಣಿಸಿಕೊಂಡಿದ್ದಾರೆ.
ಕಳೆದ ನವೆಂಬರ್ ನಲ್ಲಿ ಶುರು ಆದ ಸಿನಿಮಾ ಈ ವರ್ಷ ಬಿಡುಗಡೆ ಆಗುತ್ತಿದೆ. ಕಳೆದ ಬಾರಿಯ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಆಗಿದ್ದು, ಅನೇಕರು ಚಿತ್ರವನ್ನು ವೀಕ್ಷಿಸಿದ್ದರು. ಸಿನಿಮಾ ಒಳ್ಳೆಯ ವಿಮರ್ಶೆಗಳು ಬಂದಿತ್ತು. ಇಂದು (ನವೆಂಬರ್ 8) ಸಿನಿಮಾದ ಪ್ರದರ್ಶನ ಕೊಲ್ಕತ್ತಾ ಫಿಲ್ಮ್ ಫೆಸ್ಟಿವಲ್ ನಲ್ಲಿ ನಡೆದಿದೆ.

ಮತ್ತೊಂದು ಕಡೆ ಅದೇ ದಿನ ಕನ್ನಡದ ಆರು ಸಿನಿಮಾಗಳು ಬಿಡುಗಡೆ ಆಗುತ್ತಿವೆ. 'ಕಾಳಿದಾಸ ಕನ್ನಡ ಮೇಷ್ಟ್ರು', 'ರಿಲ್ಯಾಕ್ಸ್ ಸತ್ಯ', 'ಕನ್ನಡ್ ಗೊತ್ತಿಲ್ಲ', 'ನಮ್ ಗಣಿ ಬಿ ಕಾಮ್ ಪಾಸ್', 'ಮನೆ ಮಾರಾಟಕ್ಕಿದೆ' ಹಾಗೂ 'ಆಯುಷ್ಮಾನ್ ಭವ' ಚಿತ್ರಗಳು ನವೆಂಬರ್ 15ಕ್ಕೆ ತೆರೆಗೆ ಬರುತ್ತಿದೆ.
ಈಗಾಗಲೇ ನಾಟಕ ರೂಪ ಕಂಡು ಅನೇಕ ಪ್ರದರ್ಶನ ಕಂಡಿರುವ ಈ ಕೃತಿ ಈಗ ಸಿನಿಮಾ ರೂಪದಲ್ಲಿ ಪರದೆ ಮೇಲೆ ಬರುತ್ತದೆ.


Click it and Unblock the Notifications











