For Quick Alerts
  ALLOW NOTIFICATIONS  
  For Daily Alerts

  ನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪ

  |

  ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ ವಿರುದ್ಧ ಗುಂಪೊಂದು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದೆ. ಘಟನೆ ನಡೆದ ಸ್ಥಳದಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಸಂಯುಕ್ತಾ ಹೆಗಡೆ, 'ಪಾರ್ಕ್‌ನಲ್ಲಿ ಗೆಳತಿಯರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಕೆಲವು ಯುವಕರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

  Recommended Video

  Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

  ಘಟನೆ ನಡೆಯುತ್ತಿದ್ದಂತೆಯೇ ನಟಿ ಸಂಯುಕ್ತಾ ಹೆಗಡೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವಿಡಿಯೋದಲ್ಲಿ ಕೇಳುತ್ತಿರುವ ಸಂಭಾಷಣೆ, ಸಂಯುಕ್ತಾ ಮೇಲೆ ವಿಡಿಯೋದಲ್ಲಿ ಕೆಲವರು ಮಾಡುತ್ತಿರುವ ಆರೋಪದಂತೆ, ಸಂಯುಕ್ತಾ ಮತ್ತು ಆಕೆಯ ಗೆಳತಿಯರು, ಅಸಭ್ಯವಾಗಿ ಉಡುಪು ಧರಿಸಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದರಂತೆ. ಹಾಗಾಗಿ ಅವರನ್ನು ವಿರೋಧಿಸಿದ್ದಾಗಿ ಹೇಳುತ್ತಿರುವುದು ವಿಡಿಯೋದಿಂದ ಗೊತ್ತಾಗುತ್ತಿದೆ.

  ನಿನ್ನನ್ನು ಹೊಡೆಯದೇ ಇರಲಾಗುತ್ತದೆಯೇ? ಮಹಿಳೆ ಪ್ರಶ್ನೆ

  ನಿನ್ನನ್ನು ಹೊಡೆಯದೇ ಇರಲಾಗುತ್ತದೆಯೇ? ಮಹಿಳೆ ಪ್ರಶ್ನೆ

  ವಿಡಿಯೋದಲ್ಲಿ ಮಹಿಳೆಯೊಬ್ಬರು, 'ನೀನು ಹಾಕುವ ಬಟ್ಟೆಗೆ ನಿನ್ನನ್ನು ಹೊಡೆಯದೇ ಇರಲಾಗುತ್ತದೆಯೇ' ಎಂದು ಪ್ರಶ್ನಿಸಿರುವುದು ಸಹ ದಾಖಲಾಗಿದೆ. ಜೊತೆಗೆ ಸಂಯುಕ್ತಾ ಹೊರನಾಡು ಗೆ ಧಿಕ್ಕಾರ ಎಂದು ಕೆಲವು ಯುವಕರು ಘೋಷಣೆ ಕೂಗುತ್ತಿರುವುದು ಸಹ ದಾಖಲಾಗಿದೆ.

  ತಾವು ಧರಿಸಿದ್ದ ಉಡುಗೆಯನ್ನು ತೋರಿಸಿದ ಸಂಯುಕ್ತಾ ಹೆಗಡೆ

  ತಾವು ಧರಿಸಿದ್ದ ಉಡುಗೆಯನ್ನು ತೋರಿಸಿದ ಸಂಯುಕ್ತಾ ಹೆಗಡೆ

  ತಾವು ತೊಟ್ಟಿರುವ ಉಡುಗೆ ಬಗ್ಗೆ ಗುಂಪು ಆರೋಪ ಮಾಡಿದ್ದಕ್ಕೆ, ತಾವು ತೊಟ್ಟಿದ್ದ ಟೀಶರ್ಟ್‌ ತೆಗೆದು, 'ನಾನು ಸ್ಟೋರ್ಟ್ಸ್ ಮತ್ತು ಪ್ಯಾಂಟ್‌ ಧರಿಸಿ ವ್ಯಾಯಾಮ ಮಾಡುತ್ತಿದ್ದೆ' ಎಂದು ತಾವು ಧರಿಸಿದ್ದ ಉಡುಪನ್ನು ಸಹ ಸಂಯುಕ್ತಾ ಹೆಗಡೆ ತೋರಿಸಿದ್ದಾರೆ ವಿಡಿಯೋದಲ್ಲಿ.

  ಸ್ಥಳದಿಂದ ಹೋಗುವಂತೆ ಹೇಳಿದ ಪೊಲೀಸರು

  ಸ್ಥಳದಿಂದ ಹೋಗುವಂತೆ ಹೇಳಿದ ಪೊಲೀಸರು

  ಸ್ಥಳಕ್ಕೆ ಬಂದ ಪೊಲೀಸರು ಸಂಯುಕ್ತಾ ಅವರನ್ನು ಹೋಗುವಂತೆ ಹೇಳಿದ್ದಾರೆ. ಆದರೆ ಯುವಕರ ನಡೆಯನ್ನು ಖಂಡಿಸಿರುವ ಸಂಯುಕ್ತಾ ಹೊರನಾಡು, ಅವರು ಮಾಡಿದ್ದು ತಪ್ಪು, ನಮ್ಮದೇ ತಪ್ಪು ಎನ್ನುವಂತೆ ಏಕೆ ಮಾತನಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲಾ ಸಂಭಾಷಣೆ ಸಂಯುಕ್ತಾ ಹೊರನಾಡು ಮಾಡಿರುವ ವಿಡಿಯೋದಲ್ಲಿ ದಾಖಲಾಗಿದೆ.

  ನನ್ನ ಮೇಲೆ ಡ್ರಗ್ಸ್ ಆರೋಪ ಮಾಡಿದ್ದಾರೆ: ಸಂಯುಕ್ತಾ

  ನನ್ನ ಮೇಲೆ ಡ್ರಗ್ಸ್ ಆರೋಪ ಮಾಡಿದ್ದಾರೆ: ಸಂಯುಕ್ತಾ

  'ಚಿತ್ರರಂಗದಲ್ಲಿ ಡ್ರಗ್ಸ್‌ ಪ್ರಕರಣ ಸುದ್ದಿಯಾಗುತ್ತಿರುವ ಕಾರಣ ನಾನೂ ಸಹ ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಗೆ ಬಂದ ಕೆಲವು ಯುವಕರು ಆರೋಪ ಮಾಡಿದರು. ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಕೂಗಿದರು' ಎಂದು ಸಂಯುಕ್ತಾ ಹೆಗಡೆ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.

  ಸಂಯುಕ್ತಾ ಹೊರಗೆ ಹೋಗದಂತೆ ಗೇಟಿಗೆ ಬೀಗ ಹಾಕಿದ ಗುಂಪು

  ಸಂಯುಕ್ತಾ ಹೊರಗೆ ಹೋಗದಂತೆ ಗೇಟಿಗೆ ಬೀಗ ಹಾಕಿದ ಗುಂಪು

  ಪಾರ್ಕ್‌ನ ಗೇಟಿಗೆ ಬೀಗ ಹಾಕಿ ಸಂಯುಕ್ತಾ ಹೆಗಡೆ ಹಾಗೂ ಗೆಳೆಯರನ್ನು ಹೊರಗೆ ಹೋಗದಂತೆ ಯುವಕರ ಗುಂಪು ಹಾಗೂ ಮಹಿಳೆಯೊಬ್ಬರು ತಡೆದಿದ್ದಾರೆ. ನಾವು ಹೊರಗೆ ಹೋಗುತ್ತೇವೆ ಬಿಡಿ ಎಂದು ಸಂಯುಕ್ತಾ ಹೆಗಡೆ ಕೇಳಿಕೊಂಡರೂ ಜನರು ಗೇಟು ತೆರೆಯುವುದಿಲ್ಲ. ನಂತರ ಸ್ಥಳಕ್ಕೆ ಕೆಲವು ಮಹಿಳಾ ಪೊಲೀಸರು ಬಂದಿದ್ದಾರೆ.

  ಸಂಯುಕ್ತಾಗೆ ಇಬ್ಬರು ಬೆಂಬಲ ಸಹ ನೀಡಿದ್ದಾರೆ

  ಸಂಯುಕ್ತಾಗೆ ಇಬ್ಬರು ಬೆಂಬಲ ಸಹ ನೀಡಿದ್ದಾರೆ

  ನಂತರ ಸಂಯುಕ್ತಾ ಹೆಗಡೆ ಹಾಗೂ ಆಕೆಯ ಗೆಳೆಯರನ್ನು ಹೊಯ್ಸಳ ಕಾರಿಗೆ ಹತ್ತಿ ಪೊಲೀಸ್ ಸ್ಟೇಶನ್‌ ಗೆ ಬರಬೇಕೆಂದು ಕೇಳಿದ್ದಾರೆ. ಆದರೆ ಸಂಯುಕ್ತಾ ಹೆಗಡೆ, ತಮ್ಮದೇ ಕಾರಿನಲ್ಲಿ ನಾವು ಬರುತ್ತೇವೆ ಎನ್ನುತ್ತಾರೆ. ಈ ನಡುವೆ ಒಬ್ಬ ವೈದ್ಯರು, 'ಈ ಹುಡುಗಿಯರು ವ್ಯಾಯಾಮ ಮಾಡುತ್ತಿದ್ದರು, ಇವರದ್ದೇನು ತಪ್ಪಿಲ್ಲ' ಎನ್ನುತ್ತಾರೆ. ಮತ್ತೊಬ್ಬ ಯುವಕ, ಹುಡುಗಿಯರು ಚಿಕ್ಕ ಬಟ್ಟೆಗಳನ್ನು ಹಾಕಿದ್ದಾರೆಂದು, ನೀವು (ಪೊಲೀಸರು) ಅವರನ್ನು ಬಂಧಿಸುವುದಾದರೆ, ಶಾರ್ಟ್‌ ಹಾಕಿರುವ ಹುಡುಗರನ್ನೂ ಬಂಧಿಸಿ' ಎಂದು ಸಂಯುಕ್ತಾ ಹಾಗೂ ಆಕೆಯ ಗೆಳೆಯರಿಗೆ ಬೆಂಬಲ ಹೇಳಿದರು.

  English summary
  A mob attacks on actress Samyukta Hegde and her friends for alleging that they were wearing short dress. Samyukta accused that a lady hit one of her friend.
  Saturday, September 5, 2020, 17:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X