ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಇಂದು ಸಿಸಿಬಿ ಯು ವಿಚಾರಣೆಗೆ ಹಾಜರಾಗುವಂತೆ ಕರೆದಿತ್ತು. ಅಂತೆಯೇ ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಗೆ ಹಾಜರಾಗಿದ್ದರು. ಆದರೆ ಕಾರಣಾಂತರಗಳಿಂದ ವಿಚಾರಣೆ ನಡೆದಿಲ್ಲ.
Recommended Video
'ಸಿಸಿಬಿ ಅಧಿಕಾರಿಗಳು ಇಂದು ವಿಚಾರಣೆಗೆ ಬರಲು ಹೇಳಿದ್ದರು, ಅಂತೆಯೇ ಬಂದೆ. ಆದರೆ ಅಧಿಕಾರಿ ಬಸಪ್ಪ ಅಂಗಡಿ ಅವರಿಗೆ ಕಲಾಪದ ಡ್ಯೂಟಿ ಹಾಕಿದ್ದ ಕಾರಣ ಅವರು ಅಲ್ಲಿಗೆ ಹೋಗಿದ್ದಾರೆ. ನನ್ನನ್ನು ಬೇರೆಯ ದಿನ ವಿಚಾರಣೆಗೆ ಕರೆಯುತ್ತೇನೆಂದು ಹೇಳಿದ್ದಾರೆ, ಇಂದು ವಿಚಾರಣೆ ನಡೆದಿಲ್ಲ' ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಮಾಧ್ಯಮಗಳೊಟ್ಟಿಗೆ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, 'ನಾನು ಕೆಲವು ತಿಂಗಳಿನಿಂದಲೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಗೆ ಸಹಕಾರ ನೀಡುತ್ತಲೇ ಬಂದಿದ್ದೇನೆ. ನನ್ನ ಸಹಕಾರ ಹೀಗೆಯೇ ಮುಂದುವರೆಯಲಿದೆ' ಎಂದಿದ್ದಾರೆ.

'ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಣ್ಣ ಮೀನುಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ದೊಡ್ಡ ತಿಮಿಂಗಲಗಳನ್ನು ಹಿಡಿಯುವುದು ಇನ್ನೂ ಬಾಕಿ ಇದೆ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಇಂದ್ರಜಿತ್ ಲಂಕೇಶ್.
'ಸಿಸಿಬಿ ಪೊಲೀಸರು ಈಗಾಗಲೇ ಕೋಟ್ಯಂತರ ಮೌಲ್ಯದ ಡ್ರಗ್ಸ್, ಗಾಂಜಾ ವಶಪಡಿಸಿಕೊಂಡಿದ್ದಾರೆ. ಹಲವು ಡ್ರಗ್ ಪೆಡ್ಲರ್‌ಗಳನ್ನು ಸಹ ಬಂಧಿಸಿದ್ದಾರೆ. ನೈಜಿರಿಯನ್ ಪ್ರಜೆಗಳನ್ನು ಸಹ ಕೆಲವರನ್ನು ಬಂಧಿಸಿದ್ದಾರೆ. ಅಲ್ಲಿಗೆ ಈ ಜಾಲ ಎಷ್ಟು ದೊಡ್ಡದ್ದು ಎಂಬುದು ಅರ್ಥವಾಗುತ್ತದೆ' ಎಂದಿದ್ದಾರೆ ಇಂದ್ರಜಿತ್ ಲಂಕೇಶ್.


Click it and Unblock the Notifications











