ಒಂದೇ ಸಿನಿಮಾದಲ್ಲಿ ಕನ್ನಡದ 10ಕ್ಕೂ ಹೆಚ್ಚು ಹಾಸ್ಯ ನಟರು
ಒಂದು ಸಿನಿಮಾದಲ್ಲಿ ಒಬ್ಬರೊ.. ಇಬ್ಬರೊ ಅಥವಾ ಮೂರು ಕಾಮಿಡಿ ನಟರು ಇರಬಹುದೆನೋ. ಆದರೆ, ಈಗ ಒಂದು ಸಿನಿಮಾದ ತುಂಬ ಕಾಮಿಡಿ ನಟರೇ ತುಂಬಿಕೊಂಡಿದ್ದಾರೆ.
ಈ ಹಿಂದೆ 'ಗುರು ಶಿಷ್ಯರು' ಸಿನಿಮಾದಲ್ಲಿ ದ್ವಾರಕೀಶ್ ಸೇರಿದಂತೆ ಸಾಕಷ್ಟು ಹಾಸ್ಯ ಕಲಾವಿದರು ಕಾಣಿಸಿಕೊಂಡಿದ್ದರು. ಈಗ ಅದೇ ರೀತಿಯ ಪ್ರಯತ್ನ ನಡೆದಿದ್ದು, ಒಂದು ಸಿನಿಮಾದಲ್ಲಿ ಕನ್ನಡದ 10ಕ್ಕೂ ಹೆಚ್ಚು ಹಾಸ್ಯ ನಟರು ನಟಿಸಲಿದ್ದಾರೆ.
'ಕಾಪಿ ಕಟ್ಟೆ' ಎನ್ನುವ ಹೊಸ ಸಿನಿಮಾದಲ್ಲಿ ಕನ್ನಡದ ಬಹುತೇಕ ಹಾಸ್ಯ ಕಲಾವಿದರು ಮಿಂಚಲಿದ್ದಾರೆ. ಹೊನ್ನಾವಳಿ ಕೃಷ್ಣ, ಡಿಂಗ್ರಿ ನಾಗರಾಜ್. ಉಮೇಶ್, ಮಿಮಿಕ್ರಿ ದಯಾನಂದ್, ರೇಖಾ ದಾಸ್ ಟೆನ್ನಿಸ್ ಕೃಷ್ಣ, ಬಿರಾದರ್, ಬ್ಯಾಂಕ್ ಜನಾರ್ಧನ್, ರಾಜಗೋಪಾಲ್, ಶಂಕರ್ ಭಟ್, ಮೈಕಲ್ ಮಧು ಹೀಗೆ ಸಾಕಷ್ಟು ಕಲಾವಿದರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಒಬ್ಬ ಮನಷ್ಯನ ಬದುಕು ವಯಸ್ಸಾದ ಮೇಲೆ ಯಾವ ರೀತಿ ಬದಲಾಗುತ್ತದೆ. ಕುಟುಂಬದಲ್ಲಿ ಆಗುವ ವಿಷಯಗಳು ಹೇಗೆ ಇರುತ್ತದೆ ಎನ್ನುವುದರ ಮೇಲೆ ಸಿನಿಮಾದ ಕಥೆ ಇದೆಯಂತೆ. ಸಿನಿಮಾ ಕಥೆಗೆ ಇಷ್ಟೊಂದು ಕಲಾವಿದರ ಅಗತ್ಯ ಇತಂತ್ತೆ.
ಅಂದಹಾಗೆ, ಇಷ್ಟು ನಟರನ್ನು ಒಟ್ಟಿಗೆ ಸೇರಿಸುವ ಪ್ಲಾನ್ ಮಾಡಿರುವುದು ನಿರ್ದೇಶಕ ಕಪಿಲ್. 'ಗುರು ಶಿಷ್ಯರು' ಸಿನಿಮಾ ಬಂದು 38 ವರ್ಷಗಳಾಗಿದ್ದು, ಆ ಬಳಿಕ ಮತ್ತೆ ಈ ರೀತಿಯ ಪ್ರಯತ್ನ ನಡೆದಿದೆ.


Click it and Unblock the Notifications











