twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನ ತುಂಬ ತೆಲುಗು 'ಜಾನು': ಕನ್ನಡದ 'ಲವ್ ಮಾಕ್ ಟೈಲ್'ಗೆ ಚಿತ್ರಮಂದಿರಗಳೇ ಇಲ್ಲ!

    |

    'ಲವ್ ಮಾಕ್ ಟೈಲ್' ಮತ್ತು 'ಜಾನು' ಎರಡು ಲವ್ ಸ್ಟೋರಿ ಸಿನಿಮಾಗಳೆ.. ಆದರೆ ಒಂದು ಕನ್ನಡ ಸಿನಿಮಾ.. ಮತ್ತೊಂದು ತೆಲುಗು ಸಿನಿಮಾ.. ಒಂದು ರಿಮೇಕ್ ಸಿನಿಮಾ.. ಮತ್ತೊಂದು ಸ್ವಮೇಕ್ ಸಿನಿಮಾ. ಈ ಎರಡು ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ತೆಲುಗು ಸಿನಿಮಾಗೆನೇ ಹೆಚ್ಚು ಚಿತ್ರಮಂದಿರಗಳು ಸಿಕ್ಕಿವೆ.

    'ಲವ್ ಮಾಕ್ ಟೈಲ್' ಸಿನಿಮಾಗೆ ಎಲ್ಲ ಕಡೆ ಒಳ್ಳೆಯ ಮಾತು ಕೇಳಿ ಬರುತ್ತಿದ್ದರೂ, ಜನ ಇಷ್ಟಪಟ್ಟಿದರೂ ಚಿತ್ರಮಂದಿರ ಸಿಗುತ್ತಿಲ್ಲ. ಕಳೆದ ವಾರ ಬಿಡುಗಡೆಯಾದ ಸಿನಿಮಾಗೆ ಈಗ ಕೇವಲ ಒಂದೇ ಒಂದು ಚಿತ್ರಮಂದಿರ ಮಾತ್ರ ಉಳಿದುಕೊಂಡಿದೆ ಈ ಬಗ್ಗೆ ನಿನ್ನೆ (ಫೆಬ್ರವರಿ 7) ನಟ ಡಾರ್ಲಿಂಗ್ ಕೃಷ್ಣ ಬೇಸರ ವ್ಯಕ್ತಪಡಿಸಿದ್ದರು.

    ಕನ್ನಡ ಸಿನಿಮಾ ಮಾಡೋದೆ ತಪ್ಪಾ?: ಕೃಷ್ಣ, ರಘು ದೀಕ್ಷಿತ್ ಬೇಸರ!ಕನ್ನಡ ಸಿನಿಮಾ ಮಾಡೋದೆ ತಪ್ಪಾ?: ಕೃಷ್ಣ, ರಘು ದೀಕ್ಷಿತ್ ಬೇಸರ!

    ಬೆಂಗಳೂರಿನಲ್ಲಿ ಪರಭಾಷೆಯ ಸಿನಿಮಾಗಳ ಪೈಪೋಟಿ, ಆ ಸಿನಿಮಾಗಳ ಅಬ್ಬರ ಜೋರಾಗಿಯೇ ಇರುತ್ತದೆ. ಅದು ಅನೇಕ ಬಾರಿ ಕನ್ನಡ ಚಿತ್ರಗಳಿಗೆ ತೊಂದರೆ ನೀಡಿದೆ. ಆದರೆ, ಒಂದು ಒಳ್ಳೆಯ ಕನ್ನಡ ಸಿನಿಮಾಗೆ ಚಿತ್ರಮಂದಿರ ಸಿಗದೆ, ಒಂದು ತೆಲುಗು ರಿಮೇಕ್ ಚಿತ್ರಕ್ಕೆ ಪ್ರಾಶಸ್ತ್ಯ ನೀಡುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

    45ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಜಾನು'

    45ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಜಾನು'

    ಬೆಂಗಳೂರಿನಲ್ಲಿ 'ಜಾನು' ಸಿನಿಮಾ 45ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೆಚ್ಚಿನ ಸಂಖ್ಯೆಯ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ ಗಳಲ್ಲಿ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ನೀಡಿದ್ದಾರೆ. 'ಜಾನು' ತೆಲುಗು ಸಿನಿಮಾ. ಅದು ತಮಿಳಿನ ರಿಮೇಕ್ ಆಗಿದ್ದರೂ ಹೆಚ್ಚಿನ ಚಿತ್ರಮಂದಿರ ಕೊಟ್ಟಿದ್ದಾರೆ. ನಿನ್ನೆ (ಫೆಬ್ರವರಿ 7) ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿದೆ.

    'ಲವ್ ಮಾಕ್ ಟೈಲ್'ಗೆ ಒಂದೇ ಥಿಯೇಟರ್

    'ಲವ್ ಮಾಕ್ ಟೈಲ್'ಗೆ ಒಂದೇ ಥಿಯೇಟರ್

    'ಲವ್ ಮಾಕ್ ಟೈಲ್' ಸಿನಿಮಾ ಒಂದು ಒಳ್ಳೆಯ ಪ್ರೇಮಕಥೆ ಹೊಂದಿದೆ. ಡಾರ್ಲಿಂಗ್ ಕೃಷ್ಣ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಜನ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಒಳ್ಳೆಯ ವಿಮರ್ಶೆಗಳು ಬಂದಿವೆ. ಆದರೂ, ಬೆಂಗಳೂರಿನಲ್ಲಿ ಸಿನಿಮಾಗೆ ಒಂದೇ ಚಿತ್ರಮಂದಿರ ನೀಡಿದ್ದಾರೆ. 150 ಚಿತ್ರಮಂದಿರಗಳಲ್ಲಿ ಇದ್ದ ಸಿನಿಮಾ, ಒಂದೇ ವಾರಕ್ಕೆ ಎತ್ತಂಗಡಿಯಾಗಿದೆ.

    Love Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆLove Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆ

    ಭೂಮಿಕಾ, ನವರಂಗ್ ನಲ್ಲಿಯೂ 'ಜಾನು' ಜಾಗರಣೆ

    ಭೂಮಿಕಾ, ನವರಂಗ್ ನಲ್ಲಿಯೂ 'ಜಾನು' ಜಾಗರಣೆ

    ಕನ್ನಡ ಸಿನಿಮಾಗಳಿಗೆ ಗಾಂಧಿನಗರದಲ್ಲಿಯೂ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದರೆ ಅದಕ್ಕಿಂತ ಬೇಸರದ ಸಂಗತಿ ಇನ್ನೆನಿದೆ. 'ಜಾನು' ಸಿನಿಮಾ ಗಾಂಧಿನಗರದ ಭೂಮಿಕಾ ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿದೆ. ಆದರೆ, 'ಲವ್ ಮಾಕ್ ಟೈಲ್' ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿಯೂ ಇಲ್ಲ. ಇನ್ನು ಕನ್ನಡ ಚಿತ್ರಗಳನ್ನೆ ಹೆಚ್ಚಾಗಿ ಪ್ರದರ್ಶನ ಮಾಡುವ ನವರಂಗ್ ನಲ್ಲಿಯೂ 'ಜಾನು' ಜಾಗರಣೆ ನಡೆಯುತ್ತಿದೆ.

    ಒಳ್ಳೆಯ ಸಿನಿಮಾಗಳ ಕಥೆ ಏನಾಗುತ್ತದೆ

    ಒಳ್ಳೆಯ ಸಿನಿಮಾಗಳ ಕಥೆ ಏನಾಗುತ್ತದೆ

    ಜನವರಿಯ ಕೊನೆಯಲ್ಲಿ ಹಾಗೂ ಫೆಬ್ರವರಿಯ ಮೊದಲ ವಾರ ಬಿಡುಗಡೆಯಾದ ಸಿನಿಮಾಗಳಲ್ಲಿ ಕೆಲವು ಕನ್ನಡ ಚಿತ್ರಗಳಿಗೆ ಒಳ್ಳೆಯ ಮಾತು ಕೇಳಿ ಬಂದಿದೆ. 'ನಾನು ಮತ್ತು ಗುಂಡ', 'ಕಾಣದಂತೆ ಮಾಯವಾದನು', 'ಜಂಟಲ್ ಮ್ಯಾನ್, 'ದಿಯಾ' ಚಿತ್ರಗಳು ಚೆನ್ನಾಗಿವೆ. ಆದರೆ, 'ಜಾನು' ಸಿನಿಮಾದಿಂದ ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದೆ.

    English summary
    More than 45 show gave for Jaanu telugu movie in bengaluru but only one show for love mocktail kannada movie.
    Saturday, February 8, 2020, 16:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X