ಸ್ನಾನದ ವಿಡಿಯೋ ಬಗ್ಗೆ ಹಂಸಿಕಾ ಮೌನ ಮಾತಾದಾಗ
ಇತ್ತೀಚಿನ ದಿನಗಳಲ್ಲಿ ಖ್ಯಾತ ತಾರೆಗಳ ಫೋಟೋಗಳನ್ನು ಮಾರ್ಫಿಂಗ್ ಮಾಡುತ್ತಾ ಅಂತರ್ಜಾಲದಲ್ಲಿ ಬಿಡುಗಡೆ ಮಾಡುವುದು ಅವ್ಯಾಹತವಾಗಿ ನಡೆಯುತ್ತಿರುವುದ ಕೃತ್ಯ. ಈ ಮೂಲಕ ತಾರೆಗಳ ಗೌರವ, ಘನತೆಗೆ ಕೆಲವು ಕಾಣದ ಕೈಗಳು ಮಸಿಬಳಿಯುವ ಪ್ರಯತ್ನ ಮಾಡುತ್ತಿವೆ.
ತೀರಾ ಇತ್ತೀಚೆಗೆ ಈ ರೀತಿಯ ಮಾರ್ಫಿಂಗ್ ಗೆ ಒಳಗಾದವರು ಹನ್ಸಿಕಾ ಮೋತ್ವಾನಿ. ಇನ್ಯಾರದೋ ಸ್ನಾನದ ವಿಡಿಯೋವನ್ನು ಮಾರ್ಫ್ ಮಾಡಿ ಇದು ಹನ್ಸಿಕಾ ಅವರದೇ ಎಂದು ಬಿಂಬಿಸಲಾಗಿತ್ತು. ಈ ವಿಡಿಯೋ ಮೊಬೈಲ್ ಫೋನ್ ಗಳಲ್ಲಿ ಭಾರಿ ಮಟ್ಟದಲ್ಲಿ ಹರಿದಾಡಿತ್ತು. [ಜುಳುಜುಳು ಹರಿದಾಡಿದ ಹಂಸಿಕಾ ಜಳಕದ ವಿಡಿಯೋ!]
ಈ ಬಗ್ಗೆ ಇದೇ ಮೊದಲ ಬಾರಿಗೆ ಹನ್ಸಿಕಾ ಅವರು ಪ್ರತಿಕ್ರಿಯಿಸಿದರು. ಅವರು ಮಾತನಾಡುತ್ತಾ, "ಮಹಿಳೆಯರಿಗೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳನ್ನು ಮಾರ್ಫ್ ಮಾಡುತ್ತಿರುವ ಕೃತ್ಯ ರೇಪ್ ಮಾಡುವುದಕ್ಕಿಂತಲೂ ಹೀನವಾದದ್ದು" ಎಂದಿದ್ದಾರೆ.

ಸದಾ ಮನರಂಜನೆ ನೀಡುಲು ಬಯಸುವ ಮಂದಿ
ಈ ರೀತಿಯ ಘಟನೆಗಳಿಗೆ ಬ್ರೇಕ್ ಹಾಕಬೇಕಾಗಿದೆ. ಸಿನಿಮಾ ತಾರೆಗಳೆಂದರೆ ನಾವೆಲ್ಲಾ ಆಡಂಬರದ ಜೀವನ ನಡೆಸುತ್ತಿರುತ್ತೇವೆ ಎಂದೇ ಎಲ್ಲರೂ ಭಾವಿಸುತ್ತಾರೆ. ನಿಜ ಏನೆಂದರೆ, ನಾವು 365 ದಿನಗಳ ಕಾಲ ಪ್ರೇಕ್ಷಕರಿಗೆ ಸದಾ ಮನರಂಜನೆ ನೀಡಬೇಕೆಂದು ಶ್ರಮಿಸುತ್ತೇವೆ.

ಮಾನಸಿಕವೇದನೆ ನೀಡಿದವರಿಗೆ ದೇವರು ಶಿಕ್ಷೆ ನೀಡಲಿ
ಪರಿಸ್ಥಿತಿ ಹೀಗಿರಬೇಕಾದರೆ, ನಮ್ಮಂತಹ ತಾರೆಗಳನ್ನು ಕ್ಷುಲ್ಲಕವಾಗಿ ಬಿಂಬಿಸುವ ಕೃತ್ಯ ಯಾಕೆ ಮಾಡುತ್ತಿದ್ದಾರೆ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ಮಾರ್ಫಿಂಗ್ ಮೂಲಕ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುವುದು ಅತ್ಯಾಚಾರಕ್ಕಿಂತಲೂ ಹೀನಕೃತ್ಯ. ನಮ್ಮಂತಹವರಿಗೆ ಮಾನಸಿಕವೇದನೆ ನೀಡಿದವರಿಗೆ ದೇವರು ಶಿಕ್ಷೆ ನೀಡಲಿ ಎಂದು ಸಂದರ್ಶನವೊಂದರಲ್ಲಿ ಹನ್ಸಿಕಾ ಹೇಳಿದರು.

ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ಯಾಕೆ ಕೊಡಲಿಲ್ಲ
ಅದೆಲ್ಲಾ ಸರಿ ಈ ಬಗ್ಗೆ ನೀವು ಸೈಬಲ್ ಪೊಲೀಸರಿಗೆ ದೂರು ಕೊಡಬಹುದಾಗಿತ್ತಲ್ಲಾ? ಎಂದು ಕೇಳಿದ್ದಕ್ಕೆ, ಆ ವಿಡಿಯೋದಲ್ಲಿರುವುದು ನಾನಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಡುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ.

ಪುನೀತ್ ಜೊತೆ ಅಭಿನಯಿಸಿದ್ದ ತಾರೆ
ಪವರ್ ಸ್ಟಾರ್ ಪುನೀತ್ ರಾಜ್ ರಾಜ್ ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ "ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ..." ಎಂದು ಕುಣಿದಾಡಿದ ಬೆಡಗಿ ಹಂಸಿಕಾ ಮೋತ್ವಾನಿ. ಅವರ ಹೆಸರಿಗೆ ಮಸಿ ಬಳಿಯುವ ಕೃತ್ಯವನ್ನು ಯಾರೋ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ.

ಮುಕ್ತ ಚರ್ಚೆಗೆ ನಾಂದಿ ಹಾಡಿದ ವಿಡಿಯೋ
ಸರಿಸುಮಾರು ಮೂರು ನಿಮಿಷದ ವಿಡಿಯೋದಲ್ಲಿ ಹಂಸಿಕಾ ಅವರನ್ನು ಹೋಲುವ ಬೆಡಗಿಯನ್ನು ತೋರಿಸಲಾಗಿತ್ತು. ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಈ ವಿಡಿಯೋ ಸಾರ್ವಜನಿಕರಿಗೂ ಮುಕ್ತವಾಗಿ ಲಭಿಸಿ ಅಷ್ಟೇ ಮುಕ್ತ ಚರ್ಚೆಗೂ ನಾಂದಿ ಹಾಡಿತ್ತು.


Click it and Unblock the Notifications











