'ಟಾಕ್ಸಿಕ್', 'ಪೆದ್ದಿ' ಬಿಟ್ಹಾಕಿ; ಇನ್ನೊಂದು ತಿಂಗಳಲ್ಲಿ ಬರ್ತಿವೆ ಈ 6 ಬಿಗ್ ಬಜೆಟ್ ಚಿತ್ರಗಳು

ಐಪಿಎಲ್ ಫೀವರ್ ಜೋರಾಗಿರುವ ಕಾರಣ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಮೀನಾಮೇಷ ಎಣಿಸುವಂತಾಗಿದೆ. ಬಹಳ ಹಿಂದೆಯೇ ಬರಬೇಕಿದ್ದ ಸಿನಿಮಾಗಳ ರಿಲೀಸ್ ಡೇಟ್ ಪದೇ ಪದೆ ಮುಂದೂಡುವಂತಾಗಿದೆ. ಮೇ 31ಕ್ಕೆ ಐಪಿಎಲ್ ಸರಣಿಗೆ ತೆರೆ ಬೀಳಲಿದೆ. ಆದರೆ ಅದಕ್ಕೂ ಮುನ್ನ 6 ದೊಡ್ಡ ಬಜೆಟ್ ಚಿತ್ರಗಳು ಪ್ರೇಕ್ಷಕರ ಮುಂದೆ ಬರ್ತಿವೆ.

ಹೌದು.. ಬಹಳ ರಿಸ್ಕ್ ತೆಗೆದುಕೊಂಡು ದೊಡ್ಡ ಸಿನಿಮಾಗಳನ್ನು ಐಪಿಎಲ್ ನಡುವೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಮಾರ್ಚ್ 19ಕ್ಕೆ ಬರಬೇಕಿದ್ದ 'ಟಾಕ್ಸಿಕ್' ಜೂನ್ 4ಕ್ಕೆ ಬರುವಂತಾಗಿದೆ. ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ 'ಜನ ನಾಯಗನ್' ಇನ್ನು ಪ್ರೇಕ್ಷಕರ ಮುಂದೆ ಬಂದಿಲ್ಲ. ಈ ವಾರ ತೆರೆಗಪ್ಪಳಿಸಬೇಕಾದ 'ಪೆದ್ದಿ' ಜೂನ್ 25ಕ್ಕೆ ಬರುವಂತಾಗಿದೆ. ಹಾಗಿದ್ದರೆ ಇನ್ನೊಂದು ತಿಂಗಳಲ್ಲಿ ಬರುವ ಬಹುನಿರೀಕ್ಷಿತ ಚಿತ್ರಗಳು ಯಾವುವು ಮುಂದೆ ಓದಿ.

Most Awaited Films Set to Hit Screens Before Toxic and Peddi Amid IPL Rush

1. ಕೆಡಿ: ದಿ ಡೆವಿಲ್

ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಸಿನಿಮಾ ಏಪ್ರಿಲ್ 30ಕ್ಕೆ ತೆರೆಗೆ ಬರ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಗಮನ ಸೆಳೆದಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ.

ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ. 4 ವರ್ಷಗಳ ಹಿಂದೆ ಶುರುವಾಗಿದ್ದ 'ಕೆಡಿ' ಸಿನಿಮಾ ಅಂತೂ ಇಂತೂ ಈ ವಾರ ರಿಲೀಸ್ ಆಗ್ತಿದೆ. 70-80ರ ದಶಕದ ಬೆಂಗಳೂರು ಭೂಗತಲೋಕದ ಕಥೆಯನ್ನು ಪ್ರೇಮ್ ಕಟ್ಟಿಕೊಟ್ಟಿದ್ದಾರೆ.

Most Awaited Films Set to Hit Screens Before Toxic and Peddi Amid IPL Rush

2. ಕಾರ

ವಿಘ್ನೇಶ್ ರಾಜ ನಿರ್ದೇಶನದಲ್ಲಿ ಧನುಷ್ ನಟನೆಯ 'ಕಾರ' ಚಿತ್ರಕ್ಕೂ ಈ ವಾರವೇ ಬಿಡುಗಡೆ ಭಾಗ್ಯ. ತಮಿಳು ಹಾಗೂ ತೆಲುಗಿನಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆಗ್ತಿದೆ. ಮಮಿತಾ ಬೈಜು, ಕೆ.ಎಸ್ ರವಿಕುಮಾರ್, ಜಯರಾಮ್, ಪೃಥ್ವಿರಾಜನ್ ಚಿತ್ರದಲ್ಲಿ ನಟಿಸಿದ್ದಾರೆ. ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಥಿಂಕ್ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣದ ಚಿತ್ರವನ್ನು ರೆಡ್ ಜೈಂಟ್ಸ್ ಮೂವೀಸ್ ಸಂಸ್ಥೆ ತೆರೆಗೆ ತರ್ತಿದೆ.

3. ಜನ ನಾಯಗನ್

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ನಾನಾ ಕಾರಣಗಳಿಂದ ಸುದ್ದಿ ಆಗ್ತಿದೆ. ಸುಗ್ಗಿ ಸಂಭ್ರಮದಲ್ಲೇ ತೆರೆಗೆ ಬರಬೇಕಿದ್ದ ಸಿನಿಮಾ 4 ತಿಂಗಳು ಕಳೆದರೂ ಬಿಡುಗಡೆ ಆಗಿಲ್ಲ. ಸೆನ್ಸಾರ್ ಸಮಸ್ಯೆ, ತಮಿಳುನಾಡು ಚುನಾವಣೆ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಚುನಾವಣೆ ಮುಗಿದಿದೆ. ಸೆನ್ಸಾರ್ ಸಮಸ್ಯೆ ಶೀಘ್ರದಲ್ಲೇ ಬಗೆ ಹರಿಯಲಿದ್ದು ಇನ್ನೆರಡು ವಾರಗಳಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

4. ಕರುಪ್ಪು

ಸೂರ್ಯ ನಟನೆಯ ಸಿನಿಮಾಗಳು ಒಂದೊಂದಾಗಿ ಮುಗ್ಗರಿಸುತ್ತಿವೆ. ಸದ್ಯ 'ಕರುಪ್ಪು' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸೂರ್ಯ ಸಜ್ಜಾಗಿದ್ದಾರೆ. ಆರ್‌. ಜೆ ಬಾಲಾಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತ್ರಿಷಾ ನಾಯಕಿಯಾಗಿ ನಟಿಸಿದ್ದು ಯೋಗಿ ಬಾಬು, ಸುಪ್ರೀತ್ ರೆಡ್ಡಿ, ಮನ್ಸೂರ್ ಅಲಿಖಾನ್ ತಾರಾಗಣದಲ್ಲಿದ್ದಾರೆ. ಮೇ 14ರಂದು ಸಿನಿಮಾ ತೆರೆಗೆ ಬರಲಿದೆ.

5. ಧ್ರುವ ನಚ್ಚಥಿರಂ

ದಶಕದ ಹಿಂದೆ ನಿರ್ಮಾಣವಾಗಿದ್ದ ತಮಿಳಿನ 'ಧ್ರುವ ನಚ್ಚಥಿರಂ' ಇನ್ನು ಬಿಡುಗಡೆ ಆಗಿಲ್ಲ. ಚಿಯಾನ್ ವಿಕ್ರಂ ನಟನೆಯ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆ ಆಗಬಹುದು ಎನ್ನಲಾಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಚಿತ್ರದಲ್ಲಿ ರಿತು ವರ್ಮಾ ನಾಯಕಿಯಾಗಿ ಮಿಂಚಿದ್ದಾರೆ.

6. ಹೈ ಜವಾನಿ ತೋ ಇಷ್ಕ್ ಹೋನಾ ಹೈ

'ಧುರಂಧರ್- 2' ಬಳಿಕ ಬಾಲಿವುಡ್ ಅಂಗಳದಲ್ಲಿ ಕೂಡ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಲಿಲ್ಲ. ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿಲ್ಲ. ಇದ್ದಿದ್ದರಲ್ಲಿ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಕೊಂಚ ನಿರೀಕ್ಷೆ ಮೂಡಿಸಿದೆ. ವರುಣ್ ಧವನ್ ಜೊತೆ ಮೃಣಾಲ್ ಠಾಕೂರ್ ಹಾಗೂ ಪೂಜಾ ಹೆಗ್ಡೆ ನಾಯಕಿಯರಾಗಿ ನಟಿಸಿದ್ದಾರೆ. ಮೇ 22ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

Read more about: kd tollywood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X