'ಒಲವೇ ಜೀವನ ಸಾಕ್ಷಾತ್ಕಾರ': ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿರುವ ಲವ್‌ಸ್ಟೋರಿ ಚಿತ್ರಗಳು

ಜಗತ್ತಿನಾದ್ಯಂತ ಪ್ರೇಮಿಗಳ ದಿನ ಸಂಭ್ರಮ ಜೋರಾಗಿದೆ. ಪ್ರೇಮಿಗಳ ಪಾಲಿಗಂತೂ ಈ ದಿನ ಬಹಳ ವಿಶೇಷ. ಪ್ರೀತಿಲಿ ಬಿದ್ದವರು ಈ ದಿನವನ್ನು ಗಿಫ್ಟ್, ಸರ್‌ಪ್ರೈಸ್, ಪಾರ್ಟಿ ಅಂತೆಲ್ಲಾ ಸೆಲೆಬ್ರೇಟ್ ಮಾಡ್ತಾರೆ. ಸಿನಿಮಾಗಳಲ್ಲೂ ಪ್ರೀತಿಯ ಆರಾಧನೆ ನಡೆಯುತ್ತಲೇ ಬರ್ತಿದೆ. ಅಣ್ಣಾವ್ರ ಕಾಲದಿಂದಲೂ ಕನ್ನಡ ಸಿನಿಮಾಗಳಲ್ಲಿ ಲವ್‌ಸ್ಟೋರಿಗಳ ಭರಾಟೆ ಜೋರಾಗಿದೆ.

ಎಷ್ಟೇ ಆಕ್ಷನ್ ಸಿನಿಮಾಗಳು ಬಂದ್ರು, ಲವ್ ಸ್ಟೋರಿ ಸಿನಿಮಾಗಳಿಗೆ ಬೇಡಿಕೆ ಇದ್ದೇ ಇರುತ್ತದೆ. 'ಮುಂಗಾರು ಮಳೆ' ರೀತಿಯ ಲವ್ ಸ್ಟೋರಿ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. 'ಎರಡು ಕನಸು', 'ಬಂಧನ', 'ಅಮೃತವರ್ಷಿಣಿ', 'ಪ್ರೇಮಲೋಕ', 'ಗೀತಾ', 'ನಮ್ಮೂರ ಮಂದಾರ ಹೂವೆ', 'ಜನುಮದ ಜೋಡಿ', 'ಬೆಳದಿಂಗಳ ಬಾಲೆ', 'ಲವ್‌ ಮಾಕ್ಟೇಲ್', 'ದಿಯಾ' ಹೀಗೆ ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದಂತಹ ಸಾಕಷ್ಟು ಲವ್ ಸ್ಟೋರಿ ಸಿನಿಮಾಗಳಿವೆ. ಈ ವರ್ಷ ಕೂಡ ಒಂದಷ್ಟು ಲವ್ ಸ್ಟೋರಿ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ.

ಈ ವರ್ಷ ಪ್ಯಾನ್‌ ಇಂಡಿಯಾ ಸಿನಿಮಾಗಳ ಆರ್ಭಟ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ಅದರ ನಡುವೆಯೂ ಕೆಲ ಲವ್ ಸ್ಟೋರಿ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಅದರಲ್ಲಿ ಕೆಲವು ಈಗ ಬಿಡುಗಡೆಗೆ ಸಿದ್ಧವಾಗಿವೆ.

ಕೃಷ್ಣ- ಮಿಲನಾ 'ಲವ್‌ಬರ್ಡ್ಸ್'

ಕೃಷ್ಣ- ಮಿಲನಾ 'ಲವ್‌ಬರ್ಡ್ಸ್'

ಪ್ರೀತಿಸಿ ಮದುವೆಯಾದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ 'ಲವ್ ಬರ್ಡ್ಸ್' ಆಗಿ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಪಿ. ಸಿ ಶೇಖರ್ ನಿರ್ದೇಶನದ ಈ ಚಿತ್ರವನ್ನು 'ಕಡ್ಡಿಪುಡಿ' ಚಂದ್ರು ನಿರ್ಮಿಸಿದ್ದಾರೆ. 'ಲವ್ ಬರ್ಡ್ಸ್' ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮದುವೆ ನಂತರ ಆಧುನಿಕ ಯುಗದ ಜೋಡಿಗಳ ನಡುವಿನ ಕಥೆ ಸಿನಿಮಾದಲ್ಲಿದೆ. ಮದುವೆಗೆ ಮುಂಚೆ ಎಲ್ಲವೂ ಚೆನ್ನಾಗಿಯೇ ಇರುತ್ತೆ. ಮದುವೆ ನಂತರ ಸಣ್ಣ ಸಣ್ಣ ವಿಚಾರಕ್ಕೂ ಜಗಳ, ರಂಪ ಯಾಕೆ? ಅದು ಮುಂದೆ ಡಿವೋರ್ಸ್‌ವರೆಗೂ ಕೊಂಡೊಯ್ಯುವ ಕಥೆ ಈ ಸಿನಿಮಾದಲ್ಲಿದೆ.

'ಬಾನ ದಾರಿಯಲ್ಲಿ' ಗಣಿ ಪಯಣ

'ಬಾನ ದಾರಿಯಲ್ಲಿ' ಗಣಿ ಪಯಣ

ಸ್ಯಾಂಡಲ್‌ವುಡ್‌ನಲ್ಲಿ ರೊಮ್ಯಾಂಟಿಕ್ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಗೋಲ್ಡನ್ ಸ್ಟಾರ್ ಗಣೇಶ್. 'ಮುಂಗಾರು ಮಳೆ' ಸಿನಿಮಾದಲ್ಲಿ ಜೊತೆಯಾದ ಗಣಿ- ಪ್ರೀತಂ ಗುಬ್ಬಿ ಮುಂದೆ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ 'ಬಾನ ದಾರಿಯಲ್ಲಿ' ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ. ಚಿತ್ರದ ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಪ್ರೀತಂ ನಿರ್ದೇಶನ ಆಗಿರುವುದರಿಂದ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ.

ಶಶಾಂಕ್ 'ಕೌಸಲ್ಯಾ ಸುಪ್ರಜಾ ರಾಮ'

ಶಶಾಂಕ್ 'ಕೌಸಲ್ಯಾ ಸುಪ್ರಜಾ ರಾಮ'

ಲವ್‌ಸ್ಟೋರಿ ಸಿನಿಮಾಗಳ ಮಾಸ್ಟರ್ ನಿರ್ದೇಶಕ ಶಶಾಂಕ್. ಕೃಷ್ಣನ್‌ ಲವ್‌ಸ್ಟೋರಿ, ಕೃಷ್ಣಲೀಲಾ ಸೇರಿದಂತೆ ಕೆಲ ಹಿಟ್ ಸಿನಿಮಾಗಳನ್ನು ಶಶಾಂಕ್ ಕೊಟ್ಟಿದ್ದಾರೆ. ಕಳೆದ ವರ್ಷ ಶಶಾಂಕ್ ನಿರ್ಮಾಣ 'ಲವ್‌ 360' ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಈ ಬಾರಿ ಶಶಾಂಕ್ ಜೊತೆ ಡಾರ್ಲಿಂಗ್ ಕೃಷ್ಣ ಕೈ ಜೋಡಿಸಿದ್ದಾರೆ. 'ಕೌಸಲ್ಯಾ ಸುಪ್ರಜಾ ರಾಮ' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಈ ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. 'ಗರುಡಗಮನ ವೃಷಭವಾಹನ' ನಂತರ ಇನ್ನು ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಕೂಡ ಭರವಸೆ ಮೂಡಿಸಿದೆ.

ರಕ್ಷಿತ್ 'ಸಪ್ತಸಾಗರದಾಚೆ ಎಲ್ಲೋ'

ರಕ್ಷಿತ್ 'ಸಪ್ತಸಾಗರದಾಚೆ ಎಲ್ಲೋ'

ಕಳೆದ ಎರಡು ವರ್ಷಗಳಿಂದ ಕನ್ನಡ ಸಿನಿರಸಿಕರು ಕಾಯುತ್ತಿರುವ ಸಿನಿಮಾ 'ಸಪ್ತಸಾಗರದಾಚೆ ಎಲ್ಲೋ'. ರಕ್ಷಿತ್‌ ಶೆಟ್ಟಿ ಹಾಗೂ ಹೇಮಂತ್ ರಾವ್ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನಂತರ ಈ ಚಿತ್ರಕ್ಕಾಗಿ ಮತ್ತೆ ಜೊತೆಯಾಗಿದ್ದಾರೆ. ಇನ್ನು ಈಗಾಗಲೇ ಸಣ್ಣದೊಂದು ಟೀಸರ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡು ಇಳಿಸಿಕೊಂಡು ಬಹಳ ಕಸರತ್ತು ನಡೆಸ್ತಿದ್ದಾರೆ. ಪೋಸ್ಟರ್‌ಗಳಲ್ಲಿ ಸಿಂಪಲ್ ಸ್ಟಾರ್ ಲುಕ್ ಗಮನ ಸೆಳೀತಿದೆ. ಈ ವರ್ಷದ ಬಹುನಿರೀಕ್ಷಿತ ಲವ್ ಸ್ಟೋರಿ ಸಿನಿಮಾಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಮೊದಲ ಸ್ಥಾನದಲ್ಲಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸ್ತಿದ್ದಾರೆ.

More from Filmibeat

English summary
Love birds To Sapta Sagaradaache Yello Here we have listed the most awaited Romantic Kannada movies of 2023. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X