»   » ಸ್ಯಾಂಡಲ್ ವುಡ್ ನ ನಿಜವಾದ ಬೇಡಿಕೆಯ ನಟರಿವರು

ಸ್ಯಾಂಡಲ್ ವುಡ್ ನ ನಿಜವಾದ ಬೇಡಿಕೆಯ ನಟರಿವರು

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳು ಅನ್ನಿಸಿಕೊಂಡವರ ಕಾಲ ಮುಗಿದೇ ಹೋಯ್ತು ಅಂತಿದ್ದಾರೆ, ಚಿತ್ರ ವಿಮರ್ಶಕರು. ಸಿನಿಮಾಗಳು ಶುರುವಾಗಿ ಮುಗಿದು ನೂರು ದಿನ ಪೂರೈಸುತ್ತಿದ್ದಿದ್ದು ಹಳೇ ಕಾಲ.

200-300 ಥಿಯೇಟರ್ ಗಳಲ್ಲಿ ರಿಲೀಸಾಗಿ ಎರಡು ವಾರದಲ್ಲಿ ಕಾಸು ಬಾಚಿಕೊಂಡು ಥಿಯೇಟರ್ ಖಾಲಿ ಮಾಡೋದು ಈ ಕಾಲ. ಆದ್ರೆ ಸಿನಿಮಾ ಶುರುವಾಗೋಕೂ ಮೊದ್ಲು ನಿರ್ಮಾಪಕರು ಲೆಕ್ಕಾಚಾರ ಹಾಕೋದು ಸ್ಯಾಟಲೈಟ್ ರೈಟ್ಸ್ ಮೇಲೆ.

ಈಗ ರಾಜ್ಯದ ಮುಖ್ಯ ಮನರಂಜನಾ ವಾಹಿನಿಗಳು ಸಿನಿಮಾ ಕೊಳ್ಳೋದನ್ನ ನಿಲ್ಲಿಸಿಬಿಟ್ಟಿವೆ. ಹಾಗಾಗಿ ಸ್ಟಾರ್ ನಟರನ್ನೇ ಕೇಳೋರಿಲ್ಲದಂತಾಗಿದೆ. ಚಾನಲ್ ಮಂದಿ ಕೂಡ ಕೇಳಿದಷ್ಟು ಕಾಸು ಕೊಡೋಕೆ ರೆಡಿ ಇರೋದು ನಾಲ್ಕು ಮಂದಿ ಹೀರೋಗಳಿಗೆ ಮಾತ್ರ. ಆ ಹೀರೋಗಳ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ. ಈ ರಿಪೋರ್ಟ್ ಈಗಿನ ಹೀರೋಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ನಿಮ್ಮ ಗಮನಕ್ಕಿರಲಿ. ['ರನ್ನ' ಸ್ಯಾಟೆಲೈಟ್ ರೈಟ್ಸ್ ಅಬ್ಬಬ್ಬಾ ಅಷ್ಟೊಂದಾ?]

ಯಶ್ ಸಿನಿಮಾಗೆ ಚಿನ್ನದ ಬೆಲೆ

ಸದ್ಯ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಲ್ಲಾ ವಾಹಿನಿಗಳಿಗೂ ಯಶ್ ಫೇವರೀಟ್. ಎಲ್ಲಾ ವರ್ಗದ ಜನರ ಫೇವರೀಟ್ ಆಗ್ತಿರೋ ಯಶ್ ಸಿನಿಮಾಗಳಿಗೆ ಭರ್ಜರಿ ಬೇಡಿಕೆ ಇದೆ.

ದರ್ಶನ್ ಗೆ ಧನ್ ಧನಾ ಧನ್

ಮಾಸ್ ಮಹಾರಾಜ, ಮಾಸ್ ಸಿನಿಪ್ರೇಮಿಗಳ ಫೇವರೀಟ್ ದರ್ಶನ್ ಸಿನಿಮಾಗಳು ಸೋಲ್ತಾ ಇದ್ರೂ ದರ್ಶನ್ ಕ್ರೇಜ್ ಕಡಿಮೆಯಾಗಿಲ್ಲ. ಸ್ಯಾಟಲೈಟ್ ರೈಟ್ಸ್ ದರ್ಶನ್ ಸಿನಿಮಾ ಶುರುವಾದಾಗ್ಲೇ ಸೇಲಾಗೋ ವಾಡಿಕೆ ಈಗಲೂ ಮುಂದುವರೆದಿದೆ.

ಪವರ್ ಸ್ಟಾರ್ ಪುನೀತ್ ಪಂಟರ್

ಸ್ಯಾಟಲೈಟ್ಸ್ ರೈಟ್ಸ್ ವಿಷಯದಲ್ಲಿ ಗ್ಯಾರಂಟಿ ನಟ ಅಂದ್ರೆ ಪುನೀತ್. ಯಾಕಂದ್ರೆ ಪುನೀತ್ ಸಿನಿಮಾಗಳು ಅಂದ್ರೆ ಫ್ಯಾಮಿಲಿ ಲವ್ ಪ್ಯಾಕೇಜ್ ಗಳು. ಇಲ್ಲಿ ಇಡೀ ಕುಟುಂಬ ಕುಳಿತು ನೋಡೋ ಸಿನಿಮಾಗಳಿಗೆ ಟಿವಿ ರೈಟ್ಸ್ ಹೆಚ್ಚು. ಹಾಗಾಗಿ ಪುನೀತ್ ಎವರ್ ಗ್ರೀನ್.

ಸುದೀಪ್ ಚಿತ್ರಗಳು ಡಿಮಾಂಡ್

ಸುದೀಪ್ ಅಭಿನಯಿಸಿದ್ದು ಬಹುತೇಕ ರೀಮೇಕ್ ಚಿತ್ರಗಳಾದರೂ ಅವರ ಚಿತ್ರಗಳಿಗೂ ಬೇಡಿಕೆ ಇದ್ದೇ ಇದೆ. ಇನ್ನೂ ಬಿಡುಗಡೆಗೂ ಮುನ್ನವೇ ಅವರ 'ರನ್ನ' ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ರು.5 ಕೋಟಿ ಆಫರ್ ಬಂದಿದೆ.

ಶಿವಣ್ಣನ ಹವಾನೂ ಜೋರೇ

ಹ್ಯಾಟ್ರಿಕ್ ಹೀರೋ ಶಿವಣ್ಣ 52ರ ವಯಸ್ಸಲ್ಲೂ ತನ್ನ ಕ್ರೇಜ್ ಉಳಿಸಿದ್ದಾರೆ. ಶಿವಣ್ಣ ಸಿನಿಮಾಗಳು ಅಂದ್ರೆ ಕೌಟುಂಬಿಕ ಸಿನಿಮಾಗಳು. ಮನೆಯಲ್ಲಿ ಕುಳಿತು ನೋಡೋ ಹೆಣ್ಮಕ್ಕಳಿಗೆ, ಮಕ್ಕಳಿಗೆ ಇಷ್ಟವಾಗೋ ಸಿನಿಮಾಗಳು ಹಾಗಾಗೀನೇ 'ವಜ್ರಕಾಯ' ಕೂಡ ಒಳ್ಳೆಯ ಬೆಲೆಗೆ ಸೇಲಾಗಿದೆ.

ಗಣೇಶ್ ಹೆಂಗಳೆಯರ ಫೇವರೀಟ್

ಗೋಲ್ಡನ್ ಸ್ಟಾಅರ್ ಗಣೇಶ್ ಹೆಣ್ಮಕ್ಕಳ ಫೇವರೀಟ್ ಸ್ಟಾರ್. ಹಾಗಾಗಿ ಗೋಲ್ಡನ್ ಸ್ಟಾರ್ ಸಿನಿಮಾಗಳಿಗೂ ಸ್ಯಾಟಲೈಟ್ಸ್ ರೈಟ್ಸ್ ಸುಲಭವಾಗಿ ದಕ್ಕಿಬಿಡುತ್ತೆ.

ಬಹದ್ದೂರ್ ಭರ್ಜರಿ ಬಿಡ್ರಿ

ಧ್ರುವ ಸರ್ಜಾ ಗೆಲ್ಲೋ ಕುದುರೆ. ಕಾಲೇಜು ಹುಡುಗ ಹುಡುಗಿಯರ ಮೆಚ್ಚಿನ ಹೀರೋ. ಧ್ರುವ ಸಿನಿಮಾಗಳು ಕೂಡ ಸಾಲು ಸಾಲಾಗಿ ಕೋಟಿ ಕೋಟಿ ಸ್ಯಾಟಲೈಟ್ ರೈಟ್ಸನ್ನು ಕೊಳ್ಳೆ ಹೊಡೀತಿವೆ.

English summary
Who is the most bankable stars in Sandalwood? Only few actor movies are in demand. the trend of satellite rights for Kannada films is still new, it is only the big stars who make money, while there are no takers for films of second level of artistes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada