50 ಜನ 'ಮೋಸ್ಟ್ ಡಿಸೈರಬಲ್ ಮಹಿಳೆ' ಪಟ್ಟಿಯಲ್ಲಿ ಕನ್ನಡಿಗರು ಯಾರಿದ್ದಾರೆ.?

By Bharath Kumar

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿ ಬಹಿರಂಗವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭಾರತದ ವಿವಿಧ ಕ್ಷೇತ್ರಗಳ 50 ಜನ ಮಹಿಳೆಯರ ಪಟ್ಟಿ ಪ್ರಕಟವಾಗಿದೆ. ಎಂದಿನಿಂತೆ ಬಾಲಿವುಡ್ ತಾರೆಯರೇ ಹೆಚ್ಚಾಗಿದ್ದಾರೆ.

ವಿಶೇಷ ಅಂದ್ರೆ, ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಸ್ಯಾಂಡಲ್ ವುಡ್ ನಟಿಯರು ಕೂಡ ಸಂಚಲನ ಸೃಷ್ಟಿಸಿದ್ದಾರೆ. ಕಳೆದ ಬಾರಿ ಸದ್ದು ಮಾಡಿದ್ದ ಮತ್ತದೇ ನಟಿಯರು ಈ ಬಾರಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಹಾಗಿದ್ರೆ, ಭಾರತದ 50 ಜನ ಮೋಸ್ಟ್ ಡಿಸೈರಬಲ್ ಮಹಿಳೆಯರ ಪಟ್ಟಿಯಲ್ಲಿ ಯಾವ ಯಾವ ನಟಿಯರು ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ. ಮುಂದೆ ಓದಿ....

ವಿಶ್ವ ಸುಂದರಿ ಮಾನುಷಿ ಚಿಲ್ಲರ್

ವಿಶ್ವ ಸುಂದರಿ ಮಾನುಷಿ ಚಿಲ್ಲರ್

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಮೊದಲ ಸ್ಥಾನದಲ್ಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ವಿಶೇಷತೆಯೂ ಇಲ್ಲ. ಯಾಕಂದ್ರೆ, ಇದು ನಿರೀಕ್ಷಿತ.

ದೀಪಿಕಾ ಪಡುಕೋಣೆಗೆ ಪ್ರಮೋಷನ್

ದೀಪಿಕಾ ಪಡುಕೋಣೆಗೆ ಪ್ರಮೋಷನ್

ಕಳೆದ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ದೀಪಿಕಾ ಪಡುಕೋಣೆ ಈ ಬಾರಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ದೀಪಿಕಾ ಅಭಿನಯದ 'ಪದ್ಮಾವತ್' ಸಿನಿಮಾದ ವಿವಾದಿಂದಲೇ ದೀಪಿಕಾ ಹೆಚ್ಚು ಸುದ್ದಿಯಾಗಿದ್ದರು.

ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್

2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ 'ಕಿಕ್' ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಸಲ್ಮಾನ್ ಖಾನ್ ಅಭಿನಯದ 'ಕಿಕ್' ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡ್ರು, ಸದ್ಯ ಸಲ್ಮಾನ್ ಜೊತೆಯಲ್ಲಿ 'ರೇಸ್-3' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದರು.

ಕತ್ರಿನಾ ಕೈಫ್

ಕತ್ರಿನಾ ಕೈಫ್

ಬಾಲಿವುಡ್ ನ ಆಕ್ಷನ್ ಕ್ವೀನ್ ಕತ್ರಿನಾ ಕೈಫ್ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಕಳೆದ ಸಲ ಕತ್ರಿನಾ ಐದನೇ ಸ್ಥಾನದಲ್ಲಿದ್ದರು.

ಬೋಲ್ಡ್ ನಟಿ ಇಶಾ ಗುಪ್ತಾ

ಬೋಲ್ಡ್ ನಟಿ ಇಶಾ ಗುಪ್ತಾ

ಬೋಲ್ಡ್ ಮತ್ತು ಹಾಟ್ ಫೋಟೋಗಳ ಮೂಲಕ ಸಂಚಲನ ಸೃಷ್ಟಿಸುವ ಇಶಾ ಗುಪ್ತಾ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಬಾರಿ ಹದಿನೈದನೇ ಸ್ಥಾನದಲ್ಲಿದ್ದರು.

ಆಮಿ ಜಾಕ್ಸನ್

ಆಮಿ ಜಾಕ್ಸನ್

ಬಹುಭಾಷಾ ತಾರೆ ಆಮಿ ಜಾಕ್ಸನ್ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ರಜನಿಕಾಂತ್ ಜೊತೆಯಲ್ಲಿ '2.0' ಹಾಗೂ ಕನ್ನಡ 'ದಿ ವಿಲನ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಮಿ ಏಂಟನೇ ಸ್ಥಾನದಲ್ಲಿದ್ದರು.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ಜೊತೆಗೆ ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ರಿಯಾಂಕಾ ಮೂರನೇ ಸ್ಥಾನದಲ್ಲಿದ್ದರು.

ಸನ್ನಿ ಲಿಯೋನ್

ಸನ್ನಿ ಲಿಯೋನ್

ಮಾಜಿ ನೀಲಿ ತಾರೆ, ಬಾಲಿವುಡ್ ಹಾಟ್ ಬಾಂಬ್ ಸನ್ನಿ ಲಿಯೋನ್ 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಏಂಟನೇ ಸ್ಥಾನದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಸನ್ನಿ ಆರನೇ ಸ್ಥಾನದಲ್ಲಿದ್ದರು.

ಇನ್ನುಳಿದಂತೆ ಪ್ರಮುಖರು

ಇನ್ನುಳಿದಂತೆ ಪ್ರಮುಖರು

ಇನ್ನುಳಿದಂತೆ ಯಾಮಿ ಗೌತಮ್ (9), ಆಧಿತಿ ರಾವ್ ಹೈದರಿ (11), ಶ್ರದ್ಧಾ ಕಪೂರ್ (13), ಕೃತಿ ಸನೂನ್ (14), ದಿಶಾ ಪಟಾನಿ (19), ಪೂಜಾ ಹೆಗಡೆ (22), ಸೋನಂ ಕಪೂರ್ (24), ಇಲಿಯಾನ (30), ರಕುಲ್ ಪ್ರೀತ್ ಸಿಂಗ್ (33), ಕಂಗನಾ ರನೌತ್ (34), ಆಲಿಯಾ ಭಟ್ (37), ರಾಧಿಕಾ ಆಪ್ಟೆ (43), ಶ್ರೀಯಾ ಶರಣ್ (48), ಪಾರ್ವತಿ (50) 2017ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟಿಯರು

ಸ್ಯಾಂಡಲ್ ವುಡ್ ನಟಿಯರು

ಇನ್ನು ಕನ್ನಡದ ನಟಿಯರ ಪೈಕಿ 'ಕೆಜಿಎಫ್' ನಾಯಕಿ ಶ್ರೀನಿಧಿ ಶೆಟ್ಟಿ 17ನೇ ಸ್ಥಾನ, 'ಕಿರಾತಕ' ನಟಿ ಓವಿಯಾ 28ನೇ ಸ್ಥಾನ, ಕೃತಿ ಕರಬಂಧ 32ನೇ ಸ್ಥಾನ, ರಶ್ಮಿಕಾ ಮಂದಣ್ಣ 39ನೇ ಸ್ಥಾನ, 'ಐರಾವತ' ಚಿತ್ರದ ನಾಯಕಿ ಊರ್ವಶಿ ರೌಟೇಲಾ 16ನೇ ಸ್ಥಾನ ಗಳಿಸಿಕೊಂಡಿದ್ದಾರೆ.

More from Filmibeat

English summary
They are gorgeous, talented, and have oodles of style and confidence. These ladies — some of them are fresh faces on the block — have made news for the right reasons. Here’s presenting The Times 50 Most Desirable Women 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X