For Quick Alerts
  ALLOW NOTIFICATIONS  
  For Daily Alerts

  2014ರ ಕನ್ನಡದ ಮೋಸ್ಟ್ ಹಾಟ್ ಐಟಂಗಳು

  By ಜೀವನರಸಿಕ
  |

  ಹೆಂಗೆ ನಮ್ಮ ಕನ್ನಡದವರಿಗೆ ಕನ್ನಡ ಮಾತಾಡೋವಾಗ ಇಂಗ್ಲೀಷ್ ಮಿಕ್ಸ್ ಮಾಡದಿದ್ರೆ ಆಗೋದಿಲ್ವೋ ಹಂಗೆ ಸ್ಯಾಂಡಲ್ ವುಡ್ ನವರಿಗೆ ಸಿನಿಮಾ ಅಂತಿದ್ದ ಮೇಲೆ ಅಲ್ಲೊಂದು ಐಟಂ ಸಾಂಗ್ ಇಡದಿದ್ದರೆ ಆಗೋದಿಲ್ಲ.

  ಐಟಂ ಸಾಂಗ್ ಅಂದ್ಮೇಲೆ ಯಾವಾಗ್ಲೂ ನೋಡೋ ಕನ್ನಡದ ಮುಖಗಳು ಇದ್ರೆ ಚಂದಾನಾ, ಅದಕ್ಕೇ ಬಾಲಿವುಡ್ಡೋ ಇಲ್ಲದಿದ್ರೆ ಬೇರೆ ಕಡೆಯಿಂದ ಹಾಟ್ ಹಾಟ್ ಬ್ಯೂಟಿಗಳನ್ನ ಕರೆಸಿದರೇನೇ ಸೂಪರ್.

  ಕಳೆದ ವರ್ಷ ಬಾಲಿವುಡ್, ಹಾಲಿವುಡ್ ನ ಹಾಟ್ ಡಾಲ್ ಗಳೆಲ್ಲ ಕನ್ನಡಕ್ಕೆ ಬಂದು ಕುಣಿದರು. ಪಡ್ಡೆಗಳೂ ಬಾಯಲ್ಲಿ ನೀರೂರಿಸ್ತಾ ಬಾಯಿ ಚಪ್ಪರಿಸಿದರು.

  ಈ ವರ್ಷವಂತೂ ಚಳಿಗಾಲದ ಆರಂಭದಲ್ಲೇ ಕಾಶ್ಮೀರದ ಆಫಲ್ ತರಹದ ಹಾಟ್ ಬ್ಯೂಟಿಗಳು ಕನ್ನಡದಲ್ಲಿ ಐಟಂ ಹವಾ ಎಬ್ಬಿಸೋಕೆ ರೆಡಿಯಾಗಿದ್ದಾರೆ.

  ಕಳೆದ ವರ್ಷ ಕನ್ನಡಕ್ಕೆ ಒಂದಷ್ಟು ಐಟಂ ಡಾಲ್ಗಳು ಎಂಟ್ರಿಕೊಟ್ಟು ಸ್ಯಾಂಡಲ್ವುಡ್ನಲ್ಲಿ ಹೀಟೆಬ್ಬಿಸಿದ್ರು. 2014ರ ವರ್ಷವಂತೂ ಆರಂಭದಿಂದಲೇ ಇದರ ಹವಾ ಶುರುವಾಗಿದೆ. ಯಾವ ಯಾವ ಹಾಟ್ ಡಾಲ್ ಗಳು ಕನ್ನಡಕ್ಕೆ ಬಂದುಹೋದ್ರು,ಯಾರ್ಯಾರು ಬರ್ತಿದ್ದಾರೆ ಅನ್ನೋ ಒಂದು ಝಲಕ್ ಇಲ್ಲಿದೆ.

  ನೀತೂ ಅನ್ನೋ ನಿಂಬೆಹುಳಿ

  ನೀತೂ ಅನ್ನೋ ನಿಂಬೆಹುಳಿ

  ಪುನೀತ್ ಅಭಿನಯದ ತೆಲುಗಿನ 'ದೂಕುಡು' ಚಿತ್ರದ ಕನ್ನಡ ರೀಮೇಕ್ ಗೆ ಐಟಂ ಡಾನ್ಸರ್ ಆಗಿ ಎಂಟ್ರಿಕೊಡಲಿದ್ದಾರೆ ನೀತೂ. ಅಂದಮೇಲೆ ಪಡ್ಡೆಗಳು ಮತ್ತೊಂದು ಸಾರಿ ಬಾಯಿಚಪ್ಪರಿಸೋದು ಕನ್ಫರ್ಮ್.

  ಪೂನಂ ಪಾಂಡೆ ಅನ್ನೋ ರಸದಾಳಿಂಬೆ

  ಪೂನಂ ಪಾಂಡೆ ಅನ್ನೋ ರಸದಾಳಿಂಬೆ

  ಬಾಂಬೆಯಿಂದ ಬೆಂಗಳೂರಿಗೆ ಬಂದು ಬೆಂಗಳೂರನ್ನೇ ಬೆಚ್ಚಗಾಗಿಸಿರೋ ಪೂನಂ ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಹಾಟ್ ಐಟಂ ಅಂದ್ರೂ ತಪ್ಪಲ್ಲ. ಪೂನಂ ಐಟಂನ್ನ ಬಿಗ್ ಸ್ಕ್ರೀನ್ ನಲ್ಲಿ ಸವಿಯೋಕೆ ಚಿತ್ರರಸಿಕರು ಕಾಯ್ತಿದ್ದಾರೆ.

  ಭಾವನಾ ಅನ್ನೋ ಬಂಪರ್ ಬ್ಯೂಟಿ

  ಭಾವನಾ ಅನ್ನೋ ಬಂಪರ್ ಬ್ಯೂಟಿ

  'ಬಹುಪರಾಕ್' ಸಿನಿಮಾದಲ್ಲಿ ಭಾವನಾ ರಾವ್ ಅನ್ನೋ ಬಂಪರ್ ಬ್ಯೂಟಿ ಹಾಟ್ ಹಾಟ್ ಸ್ಟೆಪ್ಸ್ ಹಾಕಿದ್ದು. ಕಾಕ್ಸ್ ಟೌನ್ ಸ್ಮಶಾನದಲ್ಲಿ ಕುಣಿದಿರೋ ಭಾವನಾ ಐಟಂ ಡಾನ್ಸ್ ನ ಧಮಾಕಾ ಹೇಗಿರಬಹುದು ಅನ್ನೋ ಕುತೂಹಲ ಚಿತ್ರಪ್ರೇಮಿಗಳಿಗಿದೆ.

  ಸನ್ನಿ ಲಿಯೋನ್ ಬರ್ತಾರೆ ಕಾಯ್ತಾ ಇರಿ

  ಸನ್ನಿ ಲಿಯೋನ್ ಬರ್ತಾರೆ ಕಾಯ್ತಾ ಇರಿ

  ನಿರ್ಮಾಪಕ ಕೆ ಮಂಜು ಸನ್ನಿ ಲಿಯೋನ್ ರನ್ನ ಕನ್ನಡಕ್ಕೆ ಕರ್ಕೊಂಡ್ ಬರೋ ಪ್ಲಾನ್ ಮಾಡಿದ್ರು. ಅವ್ರನ್ನ ಮಾತಾಡಿಸಿ ಒಟ್ಟಿಗೆ ನಿಂತು ಫೋಟೋ ಕೂಡ ತೆಗಿಸಿದರು. ಸದ್ಯ ತಮಿಳಲ್ಲಿ ಐಟಂ ಬ್ಯೂಟಿಯಾಗ್ತಿರೋ ಸನ್ನಿಯನ್ನ ಕನ್ನಡಕ್ಕೆ ಕರೆತರೋ ಪ್ಲಾನ್ ಇದೆಯಂತೆ.

  ಬಿಪಾಷಾ ಬಸು ಅನ್ನೋ ಮೋಹಪಾಶ

  ಬಿಪಾಷಾ ಬಸು ಅನ್ನೋ ಮೋಹಪಾಶ

  ಕನ್ನಡದ ಮಾಮು ಟೀ ಅಂಗಡಿ ಸಿನಿಮಾಗೆ ಬಿಪಾಷಾ ಬಸು ಬರ್ತಾರೆ ಅನ್ನೋ ಸುದ್ದಿ ಬಹಳ ದಿನಗಳಿಂದ ಹರಿದಾಡ್ತಾ ಇದೆ. ಬಿಪ್ಸ್ ಕನ್ನಡಕ್ಕೆ ಬಂದ್ರಂತೂ ಪಡ್ಡೆಗಳ ಪವರ್ ಡಬಲ್ ಆಗೋದರಲ್ಲಿ ನೋಡೌಟ್.

  English summary
  The much expected Kannada item numbers of 2014. Neetu Chandra doing item number in Dookudu Kannada remake. Actress Poonam Pandey sizzles in Love is Poison. Bipasha Basu, Sunny Leone to do item number in Kannada. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X