ಹತ್ತು ಹಲವು ವಿಶೇಷಗಳ ಸಂಗಮ 'ಬಹದ್ದೂರ್'
ಧ್ರುವ ಸರ್ಜಾ-ರಾಧಿಕಾ ಪಂಡಿತ್ ಜೋಡಿಯಾಗಿರೋ 'ಬಹದ್ದೂರ್' ಚಿತ್ರ ಅಕ್ಟೋಬರ್ 2ಕ್ಕೆ ತೆರೆಗೆ ಬರೋಕೆ ಜೋರಾಗೆ ರೆಡಿಯಾಗಿದೆ. 'ಬಹದ್ದೂರ್' ಅನ್ನೋ ಹೆಸರಿಗೆ ತಕ್ಕಂತೆ ಮೂಡಿಬಂದಿದೆ ಧೃವ ಸರ್ಜಾ ಧಮಾಕಾ. 'ಬಹದ್ದೂರ್' ಬರೋದು ಲೇಟಾದ್ರೂ ಲೇಟೆಸ್ಟಾಗಿ ಬರ್ತಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
2012ರಲ್ಲಿ ಸೆಟ್ಟೇರಿದ ಬಹದ್ದೂರ್ ಸಿನಿಮಾ ಹೆಚ್ಚೂ ಕಡಿಮೆ ಎರಡು ವರ್ಷಗಳ ಟೈಮ್ ತೆಗೆದುಕೊಂಡಿದೆ. 'ಅದ್ದೂರಿ' ಅರ್ಜುನ್ ಶಿಷ್ಯ ಚೇತನ್ ಸಿನಿಮಾ ಎರಡು ವರ್ಷಗಳಷ್ಟು ಕಾದಿರೋದು ಕೂಡ ಒಂದು ರಿಚ್ ನೆಸ್ ಗಾಗಿ. ಚಿತ್ರವನ್ನ ಯಾವುದೇ ತೆಲುಗು, ತಮಿಳು ಸಿನಿಮಾಗಳಿಗೆ ಕಡಿಮೆಯಿಲ್ಲದಂತೆ ತರ್ತಿದ್ದಾರೆ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಶ್ರೀಕಾಂತ್. [ಅಕ್ಟೋಬರ್ ನಲ್ಲಿ ಅಬ್ಬರಿಸಲಿವೆ ಸ್ವಮೇಕ್ ಚಿತ್ರಗಳು]
ಚಿತ್ರ ನಿಮ್ಮ ಕಣ್ಣಿಗೆ ಕಲರ್, ಖದರ್ ಎರಡನ್ನೂ ತುಂಬಿಕೊಡುತ್ತೆ. ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಹೀರೋ ಒಬ್ಬನಿಗೆ ಬಜೆಟ್ ಹಾಕೋ ಮಟ್ಟಿಗೆ ಬಜೆಟ್ ಹಾಕಿದ್ದಾರೆ ನಿರ್ಮಾಪಕರು. ಇಷ್ಟೆಲ್ಲಾ ನಾವ್ ಬಿಲ್ಡಪ್ ಕೊಡ್ತಿರೋ ಬಹದ್ದೂರ್ ಚಿತ್ರದಲ್ಲಿ ಅಂತಾದ್ದೇನಿದೆ ಅನ್ನೋ ಡೀಟೈಲ್ಸ್ ಇಲ್ಲಿದೆ ಓದಿ. [ಬಹದ್ದೂರ್ ಚಿತ್ರಗಳು]

ಕನ್ನಡದಲ್ಲಿ ಮೊದಲ ಬಾರಿಗೆ 7.1 ಸೌಂಡ್
ಅತ್ಯುತ್ತಮ ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಕನ್ನಡದಲ್ಲೇ ಮೊದಲ ಬಾರಿಗೆ ಬಳಸಿಕೊಳ್ತಿದ್ದಾರೆ 'ಬಹದ್ದೂರ್' ಚಿತ್ರತಂಡದವ್ರು. ಬಾಲಿವುಡ್ ನಲ್ಲಿ ಬಳಸಿಕೊಂಡಿರೋ ಈ ಮುಂದುವರಿದ ತಂತ್ರಜ್ಞಾನದಿಂದ ಚಿತ್ರದ ಸೌಂಡ್ ಕ್ವಾಲಿಟಿ ಪ್ರೇಕ್ಷಕರನ್ನ ಥ್ರಿಲ್ಲಾಗಿಸಲಿದೆ.

ಡಿ ಬಿಟ್ಸ್ ನ 25ನೇ ಚಿತ್ರವಿದು
ವಿ ಹರಿಕೃಷ್ಣ ಸಂಗೀತದ ಡಿ ಬಿಟ್ಸ್ ಆಡಿಯೋ ಕಂಪೆನಿಯ 25ನೇ ಚಿತ್ರವಾಗಿರೋದು ಬಹದ್ದೂರ್ ಮತ್ತೊಂದು ವಿಶೇಷ. 'ಬುಲ್ ಬುಲ್' ಸಿನಿಮಾ ಮೂಲಕ ಆರಂಭವಾದ ಡಿ ಬಿಟ್ಸ್ ಆಡಿಯೋ ಕಂಪೆನಿ ಒಂದೇ ವರ್ಷದಲ್ಲಿ 25 ಸಿನಿಮಾಗಳನ್ನ ತಲುಪಿರೋದು ದಾಖಲೆ.

ಒಂದು ಫೈಟ್ ಮಾಡೋಕೆ ಎಂಟು ದಿನ
ಒಂದು ಫೈಟ್ ನ ಸ್ಯಾಂಡಲ್ವುಡ್ ಮಟ್ಟಿಗೆ ಎಂಟು ದಿನ ಮಾಡಿರೋದು ದಾಖಲೆ. ಫೈಟ್ ಮಾಸ್ಟರ್ ರವಿವರ್ಮ ಬಾಲಿವುಡ್ ನಲ್ಲಿ ಒಂದು ಫೈಟ್ ಗಾಗಿ 15 ದಿನ ಶೂಟ್ ಮಾಡಿದ್ವಿ ಅನ್ನೋದನ್ನ ಕೇಳಿ ಥ್ರಿಲ್ಲಾದ ನಿರ್ಮಾಪಕರು ನಿರ್ದೇಶಕರು ನಮ್ಮ ಚಿತ್ರವೂ ಹಾಗೇ ಮೂಡಿ ಬರ್ಬೇಕು ಅನ್ನೋ ನಿರ್ಧಾರಕ್ಕೆ ಬಂದು ಫೈಟ್ಸ್ ಮಾಡೋಕೆ ಎಂಟು ದಿನ ತೆಗೆದುಕೊಂಡ್ರೂ ಪರವಾಗಿಲ್ಲ ಸೂಪರ್ರಾಗಿ ಬರ್ಬೇಕು ಅಂದಿದ್ದಾರೆ.

ಫೈಟ್ ಗಾಗಿ 32 ಅಡಿ ಎತ್ತರದ ಭಜರಂಗಿ
ಚಿತ್ರದಲ್ಲಿ ಒಂದು ಫೈಟ್ಗಾಗಿ ಸಾಹಸ ನಿರ್ದೇಶಕ ರವಿವರ್ಮ 20 ಅಡಿ ಎತ್ತರದ ಹನುಮಾನ್ ಮೂರ್ತಿ ಕೇಳಿದ್ರೆ ನಿರ್ಮಾಪಕರು 20 ಅಡಿ ರಿಚ್ಚಾಗಿ ಕಾಣಿಸೋಲ್ಲ. 32 ಅಡಿಯ ಮೂರ್ತಿ ನಿಲ್ಲಿಸೋಣ ಅಂದಿದ್ದಾರೆ. ಈ ಸೆಟ್ ನ ಫೈಟ್ ನಿಮ್ಮ ರೋಮ ರೋಮಗಳನ್ನ ರೋಮಾಂಚನಗೊಳಿಸುತ್ತಂತೆ.

ಒಂದು ಫೈಟ್ಗಾಗಿ ಮೂರು ಸೆಟ್
ಬಹದ್ದೂರ್ ಚಿತ್ರತಂಡ ಒಂದು ಫೈಟ್ಗಾಗಿ ಮೂರು ಸೆಟ್ ಮಾಡಿದೆ. ಅದೂ ಕೂಡ ಅಂತಿಂಥಾ ಸೆಟ್ ಗಳಲ್ಲ ಒಂದಕ್ಕಿಂತ ಮತ್ತೊಂದು ಅದ್ದೂರಿ ಸೆಟ್ ಗಳು. ಒಂದು ಸೆಟ್ ಯಶವಂತಪುರ ಬಳಿ ಇರೋ ಮೈಸೂರ್ ಲ್ಯಾಂಪ್ಸ್ ನಲ್ಲಿ ಹಾಕಿದ್ರೆ, ಮತ್ತೊಂದು ಸೆಟ್ ಹುಬ್ಬಳ್ಳಿಯಲ್ಲಿ ಮತ್ತೊಂದು ಸೆಟ್ ಬೆಂಗಳೂರಿನ ಬಾಗಲಗುಂಟೆಯಲ್ಲಿ ಹಾಕಿದ್ರು. ಎಲ್ಲವೂ 15-20 ಲಕ್ಷಕ್ಕಿಂತ ಹೆಚ್ಚಿನ ಖರ್ಚು ಮಾಡಿದ ಸೆಟ್ ಗಳು.

ಒಂದೇ ಫೈಟ್ ನಲ್ಲಿ 12ಕ್ಕೂ ಹೆಚ್ಚು ಫೈಟ್ಸ್
ಒಂದೇ ಒಂದೇ ಫೈಟ್ನಲ್ಲಿ ಜಗತ್ತಿನ ಹನ್ನೆರಡಕ್ಕೂ ಹೆಚ್ಚು ಯುದ್ಧ ಕಲೆಗಳನ್ನ ನೀವು ನೋಡಬಹುದು. ಧೃವ ಸರ್ಜಾ ಅಷ್ಟಮಟ್ಟಿಗೆ ಯುದ್ಧ ಕಲೆಯನ್ನ ಕಲೆತು ಫೈಟ್ ಮಾಡಿದ್ದಾರೆ.

ರಾಣಿ-ರಾಜ ಅಶೋಕ್-ಅಂಜು
ಅದ್ದೂರಿಯದು ಅಚ್ಚು ರಚ್ಚು ಕಥೆಯಾದ್ರೆ ಇದು ಅಶೋಕ್ ಅಂಜಲಿ ಕಥೆ. ಇಲ್ಲಿ ಅಶೋಕ್ ಪಾತ್ರದಲ್ಲಿ ಧೃವ ಸರ್ಜಾ ರಾಜನಂತೆ ಕಂಗೊಳಿಸಿದ್ರೆ ರಾಧಿಕಾ ಪಂಡಿತ್ ರಾಣಿಯ ಗೆಟಪ್ ಗಳಲ್ಲಿ ಮಿಂಚ್ತಾರೆ. ಅದ್ದೂರಿ ಚಿತ್ರಕ್ಕಿಂತ ಕಂಪ್ಲೀಟ್ ಡಿಫ್ರೆಂಟ್ ಕಥೆ ಹೊಂದಿರೋ ಬಹದ್ದೂರ್ ಮೈಸೂರಿನಲ್ಲಿ ನಡೆದ ಒಂದು ನೈಜಘಟನೆ.


Click it and Unblock the Notifications











