2019ರಲ್ಲಿ ಕನ್ನಡ ಇಂಡಸ್ಟ್ರಿಯ ಹಣೆ ಬರಹ ನಿರ್ಧರಿಸಲಿರೋ ಚಿತ್ರಗಳು
Recommended Video

ಕಳೆದ ವರ್ಷ ಕನ್ನಡ ಇಂಡಸ್ಟ್ರಿಯಲ್ಲಿ ದಾಖಲೆಯ ಚಿತ್ರಗಳು ತೆರೆಕಂಡಿದ್ದವು. 80 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ವರ್ಷವೊಂದರಲ್ಲಿ 200ಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿತ್ತು.
ಅಮ್ಮ ಐ ಲವ್ ಯೂ, ಅಯೋಗ್ಯ, ಗುಳ್ಟು, ಸ.ಹಿ.ಪ್ರಾ ಪಾಠ ಶಾಲೆ, ಒಂದಲ್ಲಾ ಎರಡಲ್ಲಾ ಅಂತಹ ಸೂಪರ್ ಹಿಟ್ ಸಿನಿಮಾಗಳು ಬಂದ್ರೂ, ವರ್ಷವೆಲ್ಲಾ ಕೆಜಿಎಫ್, ಟಗರು, ದಿ ವಿಲನ್ ಅಂತಾಲೇ ಹೋಗಿಬಿಡ್ತು.
ಇದೀಗ, 2019ನೇ ವರ್ಷದಲ್ಲಿ ಸ್ಯಾಂಡಲ್ ವುಡ್ ಸಿನಿಮಾ ಸುಗ್ಗಿಗೆ ಸಜ್ಜಾಗಿದೆ. ಕಳೆದ ವರ್ಷ ಮಿಸ್ ಆದ ಕೆಲವು ಚಿತ್ರಗಳ ಜೊತೆ ಈ ವರ್ಷದ ಬಹುನಿರೀಕ್ಷೆಯ ಚಿತ್ರಗಳು ಕನ್ನಡ ಇಂಡಸ್ಟ್ರಿಯ ಹಣೆ ಬರೆಹ ಬರೆಯಲಿದೆ. ಹಾಗಿದ್ರೆ, ಈ ವರ್ಷದ ಬಿಗ್ ಸಿನಿಮಾಗಳು ಯಾವುದು? ಮುಂದೆ ಓದಿ.....

ನಟಸಾರ್ವಭೌಮ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಈ ವರ್ಷದ ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಜನವರಿ ತಿಂಗಳಲ್ಲೇ ತೆರೆಗೆ ಬರಲು ಸಜ್ಜಾಗಿರುವ ಈ ಸಿನಿಮಾ ಪುನೀತ್ ಪಾಲಿಗೆ ವರ್ಷದ ಮೊದಲ ಸಿನಿಮಾ. ಇದಾದ ಬಳಿಕ 'ಯುವರತ್ನ' ಆರಂಭಿಸಲಿದ್ದಾರೆ. ಬಟ್ ಆ ಚಿತ್ರ ಇದೇ ವರ್ಷ ಬರುತ್ತಾ ಗೊತ್ತಿಲ್ಲ.

ಯಜಮಾನ ಮತ್ತು ಕುರುಕ್ಷೇತ್ರ
ಕಳೆದ ವರ್ಷ ಚಿತ್ರವಿಲ್ಲದೇ ಮುಗಿಸಿದ ಡಿ ಬಾಸ್ ಈ ವರ್ಷ ಸತತವಾಗಿ ಪ್ರೇಕ್ಷಕರೆದುರು ಬಲಿದ್ದಾರೆ. ಕಳೆದ ವರ್ಷದಿಂದ ಕುತೂಹಲ ಮೂಡಿಸಿರುವ 'ಕುರುಕ್ಷೇತ್ರ' ರಿಲೀಸ್ ಗೆ ರೆಡಿಯಾಗಿದೆ. ಇದರ ಜೊತೆಗೆ 'ಯಜಮಾನ' ಚಿತ್ರವೂ ಶೂಟಿಂಗ್ ಮುಗಿಸಿದೆ. ಈ ಎರಡು ಚಿತ್ರಗಳು ಇದೇ ವರ್ಷ ಬರುತ್ತೆ. ಇನ್ನು ಈಗಾಗಲೇ 'ಒಡೆಯ' ಚಿತ್ರೀಕರಣ ಆರಂಭವಾಗಿದ್ದು, ಈ ಸಿನಿಮಾನೂ ಇದೇ ವರ್ಷ ಬಂದ್ರೆ ದರ್ಶನ್ ಭಕ್ತರಿಗೆ ಬಂಪರ್.

ಪೈಲ್ವಾನ್ ಮತ್ತು ಕೋಟಿಗೊಬ್ಬ 3
ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ 'ಪೈಲ್ವಾನ್' ಈ ವರ್ಷದ ಬಿಗ್ ಸಿನಿಮಾಗಳಲ್ಲಿ ಒಂದು. 'ಪೈಲ್ವಾನ್' ಜೊತೆಗೆ 'ಕೋಟಿಗೊಬ್ಬ-3' ಚಿತ್ರದ ಶೂಟಿಂಗ್ ಕೂಡ ಸಾಗುತ್ತಿದ್ದು, ಆ ಚಿತ್ರವೂ ಇದೇ ವರ್ಷ ಬರಬಹುದು ಎಂಬ ಲೆಕ್ಕಾಚಾರವಿದೆ. ಬಟ್, ರಿಲೀಸ್ ದಿನಾಂಕ ಘೋಷಿಸುವರೆಗೂ ಕುತೂಹಲ ಹಾಗೇ ಇರುತ್ತೆ.

ಕವಚ ಮತ್ತು ರುಸ್ತುಂ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಾಲು ಸಾಲು ಚಿತ್ರಗಳು ಶೂಟಿಂಗ್ ನಡೆಯುತ್ತಿದೆ. ಈ ವರ್ಷದ ಮೊದಲ ಸಿನಿಮಾ 'ಕವಚ'. ಜನವರಿ ತಿಂಗಳಲ್ಲೇ ರಿಲೀಸ್ ಆಗುವ ಸಾಧ್ಯತೆ ಇದೆ. ಇದಾದ ಬಳಿಕ ರವಿವರ್ಮ ನಿರ್ದೇಶನ 'ರುಸ್ತುಂ' ಸಿನಿಮಾ ಬರಬಹುದು. 'ಆನಂದ್', 'ದ್ರೋಣ' ಸಿನಿಮಾಗಳ ಶೂಟಿಂಗ್ ಕೂಡ ನಡೆಯುತ್ತಿದೆ.

ಐ ಲವ್ ಯೂ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ಬರಬೇಕಿತ್ತು. ಬಟ್, ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ. ಈಗ ಜನವರಿ ತಿಂಗಳಲ್ಲೇ 'ಐ ಲವ್ ಯೂ' ಸಿನಿಮಾ ರಿಲೀಸ್ ಆಗಬಹುದು. ಆರ್ ಚಂದ್ರು ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

ಗೀತಾ ಜೊತೆ 99
ಗಣೇಶ್ ಅಭಿನಯದ 'ಗೀತಾ' ಸಿನಿಮಾ ಈ ವರ್ಷ ತೆರೆಕಾಣಲಿದೆ. ಅದಕ್ಕೂ ಮುಂಚೆ ಅಥವಾ ಅದಾದ ಬಳಿ ತಮಿಳಿನ 96 ಚಿತ್ರದ ರೀಮೇಕ್ '99' ರಿಲೀಸ್ ಆಗಬಹುದು. ಈ ಮಧ್ಯೆ 'ಗಿಮಿಕ್' ಎಂಬ ಚಿತ್ರವೂ ಶುರುವಾಗಿದೆ.

ಅವನೇ ಶ್ರೀಮನ್ನಾರಾಯಣ ಮತ್ತು ಚಾರ್ಲಿ
ಕಳೆದ ಎರಡು ವರ್ಷವೂ ರಕ್ಷಿತ್ ಶೆಟ್ಟಿ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಟ್ ಈ ವರ್ಷ ಸಿಂಪಲ್ ಸ್ಟಾರ್ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಮತ್ತು 'ಚಾರ್ಲಿ' ಚಿತ್ರಗಳು ತೆರೆಗೆ ಬರಲಿದೆ.

ಸೀತಾರಾಮ ಕಲ್ಯಾಣ
ಜಾಗ್ವಾರ್ ನಂತರ ನಿಖಿಲ್ ಕುಮಾರ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಹರ್ಷ ನಿರ್ದೇಶನ 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ಮುಗಿದಿದ್ದು, ಜನವರಿ ಅಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

ಬೆಲ್ ಬಾಟಂ ಮತ್ತು ಪಂಚತಂತ್ರ
ರಿಷಬ್ ಶೆಟ್ಟಿ ನಟಿಸಿರುವ 'ಬೆಲ್ ಬಾಟಂ' ಸಿನಿಮಾ ಮತ್ತು ಯೋಗರಾಜ್ ಭಟ್ ನಿರ್ದೇಶನ ಮಾಡಿರುವ 'ಪಂಚತಂತ್ರ', ಜಗ್ಗೇಶ್ ನಟಿಸುತ್ತಿರುವ 'ಪ್ರೀಮಿಯರ್ ಪದ್ಮಿನಿ', ಪಾರುಲ್ ಅಭಿನಯದ 'ಬಟರ್ ಫ್ಲೈ' ಚಿತ್ರಗಳು ಈ ವರ್ಷದ ನಿರೀಕ್ಷೆಯ ಪ್ರಾಜೆಕ್ಟ್.


Click it and Unblock the Notifications











