»   » 2017ರಲ್ಲಿ ಕನ್ನಡದ 'ಬಿಗ್' ನಟರ ಭವಿಷ್ಯ ಹೇಗಿದೆ!

2017ರಲ್ಲಿ ಕನ್ನಡದ 'ಬಿಗ್' ನಟರ ಭವಿಷ್ಯ ಹೇಗಿದೆ!

Posted By:
Subscribe to Filmibeat Kannada

2016ರಲ್ಲಿ ಅಬ್ಬರಿಸಿ ಬೊಬ್ಬರಿದ ಕನ್ನಡದ ಸ್ಟಾರ್ ಗಳು ಈಗ 2017ಕ್ಕೆ ಸಜ್ಜಾಗಿ ನಿಂತಿದ್ದಾರೆ. ಕೆಲವರು ವರ್ಷಾಂರಂಭ ಮಾಡುವ ಸಂತಸದಲ್ಲಿದ್ದರೇ, ಮತ್ತೆ ಕೆಲವರು ಹೊಸ ಹೊಸ ಸಿನಿಮಾಗಳ ಚಿತ್ರೀಕರಣ ಶುರು ಮಾಡುವ ಯೋಚನೆಯಲ್ಲಿದ್ದಾರೆ.

ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಕಳೆದ ವರ್ಷ ತಲಾ ಎರಡೆರೆಡು ಚಿತ್ರಗಳನ್ನ ಮಾಡಿ ತಮ್ಮ ಅಭಿಮಾನಿಗಳನ್ನ ರಂಜಿಸಿದ್ದರು. ಆದ್ರೆ, ಈ ವರ್ಷ ಈ ನಟರ ಚಿತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಕಳೆದ ವರ್ಷವಡೀ ಘರ್ಜಿಸಿದ್ದ ಶಿವರಾಜ್ ಕುಮಾರ್, ಈ ವರ್ಷವೂ ತಮ್ಮ ದರ್ಬಾರ್ ನಡೆಸಲಿದ್ದಾರೆ. ಇವರ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನೀಡುವ ತಯಾರಿಯಲ್ಲಿದ್ದಾರೆ.

ಹಾಗಾದ್ರೆ, 2017ರಲ್ಲಿ ಯಾವ ನಟರ ಎಷ್ಟು ಸಿನಿಮಾಗಳು ತೆರೆಕಾಣಲಿದೆ. ಎಷ್ಟು ಹೊಸ ಚಿತ್ರಗಳು ಶುರುವಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

2017ರಲ್ಲೂ ಶಿವಣ್ಣನೇ ಟಾಪ್!

ಕಳೆದ ವರ್ಷ ಮೂರು ಸಿನಿಮಾ ನೀಡಿದ್ದ ಸೆಂಚುರಿ ಸ್ಟಾರ್, ಈ ವರ್ಷ ಅದಕ್ಕಿಂತ ಹೆಚ್ಚು ಚಿತ್ರಗಳನ್ನ ನೀಡುವ ಸೂಚನೆ ಕೊಟ್ಟಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ 'ಶ್ರೀಕಂಠ' ಜನವರಿಯ ಮೊದಲ ವಾರದಲ್ಲೇ ಬಿಡುಗಡೆಯಾಗಲಿದೆ. ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. 'ಬಂಗಾರು ಸನ್ ಆಫ್ ಬಂಗಾರದ ಮನುಷ್ಯ' ಚಿತ್ರೀಕರಣ ಮುಗಿಸಿದೆ. ಇದ್ರಾ ಜೊತೆಗೆ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಿರುವ 'ದಿ ಲೀಡರ್' ಚಿತ್ರವೂ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ಇನ್ನೂ ನಾಲ್ಕು ಚಿತ್ರಗಳ ಜೊತೆ 'ಮಫ್ತಿ', ಹಾಗೂ ತೆಲುಗಿನ 'ಗೌತಮಿಪುತ್ರ ಶಾತಕರ್ಣೀ' ಚಿತ್ರಗಳಲ್ಲೂ ಶಿವಣ್ಣ ಮಿಂಚಿದ್ದಾರೆ. ಅಲ್ಲಿಗೆ ಶಿವಣ್ಣ ಅಭಿನಯದ ನಾಲ್ಕು ಚಿತ್ರಗಳ ಜೊತೆ ಮತ್ತೆರಡು ವಿಶೇಷ ಸಿನಿಮಾಗಳು ಈ ವರ್ಷ ತೆರೆಗೆ ಬರೋದು ಗ್ಯಾರೆಂಟಿ.

ಈ ವರ್ಷ 'ಉಪ್ಪಿ' ಫುಲ್ ಬ್ಯುಸಿ!

ರಿಯಲ್ ಸ್ಟಾರ್ ಉಪೇಂದ್ರ ಕಳೆದ ವರ್ಷ ಎರಡು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದ್ರೆ, ಈ ವರ್ಷ ಮತ್ತಷ್ಟು ಚಿತ್ರಗಳು ಉಪ್ಪಿಯ ಅಕೌಂಟ್ ಗೆ ಬಿದ್ದಿದೆ. ''ಉಪೇಂದ್ರ ಮತ್ತೆ ಹುಟ್ಟಿ ಬಾ ಇಂತಿ ಪ್ರೇಮ'' ಚಿತ್ರ ಈ ವರ್ಷ ತೆರೆ ಕಾಣಲಿರುವ ಮೊದಲ ಚಿತ್ರ. ಇದ್ರಾ ಜೊತೆಗೆ ನಾಗಣ್ಣ ನಿರ್ದೇಶನ ಮಾಡುತ್ತಿರುವ 'ಕನ್ನೇಶ್ವರ' ಈಗಾಗಲೇ ಚಿತ್ರೀಕರಣ ಮಾಡುತ್ತಿದೆ. ಇನ್ನೂ ಇತ್ತೀಚೆಗೆ ರಚಿತಾ ರಾಮ್ ಜೊತೆ 'ಪ್ರೊಡಕ್ಷನ್ ನಂಬರ್-1' ಅಂತ ಹೊಸ ಸಿನಿಮಾ ಕೂಡ ಶುರುವಾಗಿದೆ. ಇದಕ್ಕೂ ಮುಂಚೆ 'ಮಿಸ್ಟರ್ ಮೋದಿ' ಚಿತ್ರ ಸೆಟ್ಟೇರಿತ್ತು. ಇಷ್ಟೇಲ್ಲ ಚಿತ್ರಗಳ ಜೊತೆಯಲ್ಲಿ ಉಪ್ಪಿಯ 50ನೇ ಚಿತ್ರವನ್ನ ಮಂಜುಮಾಂಡವ್ಯ ನಿರ್ದೇಶನ ಮಾಡಲಿದ್ದು, ಈ ಚಿತ್ರಕ್ಕೂ 2017 ಸಾಕ್ಷಿಯಾಗಲಿವೆ.

ಪುನೀತ್ 'ರಾಜಕುಮಾರ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಎರಡು ಯಶಸ್ವಿ ಚಿತ್ರಗಳು ಕಳೆದ ವರ್ಷ ತೆರೆಕಂಡಿವೆ. ಈ ವರ್ಷದಲ್ಲಿ ಪುನೀತ್ ಅಭಿನಯದ ದೊಡ್ಡ ಸಿನಿಮಾ ಅಂದ್ರೆ, 'ರಾಜಕುಮಾರ'. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದು, ಬಿಡುಗಡೆಗಾಗಿ ಕಾಯುತ್ತಿದೆ. 'ರಾಜಕುಮಾರ' ಚಿತ್ರದ ನಂತರ ಅಪ್ಪು ಯಾವ ಸಿನಿಮಾವನ್ನ ಶುರು ಮಾಡಲಿದ್ದಾರೆ ಎಂಬ ನಿಖಿರತೆಯಿಲ್ಲವಾದರೂ, ಅಪ್ಪು ಕೈಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿರುವ 'ಆಹ್ವಾನ', ಮತ್ತು ಚೇತನ್ ಬಹುದ್ದೂರ್ ಸಾರಥ್ಯದ 'ಜೇಮ್ಸ್' ಚಿತ್ರಗಳಿವೆ.

ಕಿಚ್ಚನ 'ಹೆಬ್ಬುಲಿ'

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಆಡಿಯೋ ಬಿಡುಗಡೆ ಮಾಡಿ ಅಬ್ಬರಿಸುತ್ತಿರುವ 'ಹೆಬ್ಬುಲಿ' ಸುದೀಪ್ ಅಭಿನಯದಲ್ಲಿ ಈ ವರ್ಷ ತೆರೆಕಾಣಲಿರುವ ದೊಡ್ಡ ಸಿನಿಮಾ. ಈ ಚಿತ್ರದ ನಂತರ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರ ಹಾಗೂ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ 'ಟಗ್ಸ್ ಆಫ್ ಮಾಲ್ಗುಡಿ' ಚಿತ್ರಗಳು ಅನೌನ್ಸ್ ಆಗಿದೆ. ಆದ್ರೆ, ಯಾವುದು ಶುರುವಾಗುತ್ತೆ ಎಂಬುದು ಕಾದುನೋಡಬೇಕಿದೆ.

ದರ್ಶನ್ 'ಚಕ್ರವರ್ತಿ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಈ ವರ್ಷ ತೆರೆ ಮೇಲೆ ಬರಲಿದೆ. ಇದಾದ ನಂತರ ಮಿಲನ ಪ್ರಕಾಶ್ ನಿರ್ದೇಶನ ಮಾಡಲಿರುವ 49ನೇ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಈ ಮಧ್ಯೆ ತಮ್ಮ 50ನೇ ಚಿತ್ರದ ಕೆಲಸ ಕೂಡ ಶುರುವಾಗಿದ್ದು, ಈ ವರ್ಷ ದರ್ಶನ್ ಅಭಿಮಾನಿಗಳಿಗೆ ಎರಡು ಸಿನಿಮಾ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಯಶ್ 'ಕೆಜಿಎಫ್'!

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ವರ್ಷಕ್ಕೆ ಒಂದೆ ಚಿತ್ರವಾಗಬಹುದು ಎಂಬ ನಿರೀಕ್ಷೆಯಿದೆ. ಯಾಕಂದ್ರೆ, ಕಳೆದ ಎರಡು ವರ್ಷಗಳಿಂದ ಯಶ್, ವರ್ಷಕ್ಕೆ ಒಂದು ಚಿತ್ರವನ್ನ ಮಾತ್ರ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಇನ್ನೂ ಶೂಟಿಂಗ್ ಶುರು ಮಾಡದ 'ಕೆಜಿಎಫ್' ಈ ವರ್ಷಾಂತ್ಯಕ್ಕೆ ತೆರೆಕಾಣಬಹುದು.

ಗೋಲ್ಡನ್ 'ಮುಗುಳುನಗೆ'

ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ 'ಮುಗುಳುನಗೆ'ಯಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಇನ್ನೂ ಗಣೇಶ್ ಅಭಿನಯದ 'ಪಟಾಕಿ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಜನವರಿಯಲ್ಲೇ ತೆರೆಕಾಣಬಹುದು.

'ಭರ್ಜರಿ' ಧೃವ

2016ರಲ್ಲಿ ಸಿನಿಮಾನೇ ಇಲ್ಲದೇ ವರ್ಷಾಂತ್ಯ ಮುಗಿಸಿದ ಧೃವ ಸರ್ಜಾ, ಈ ವರ್ಷ ಎರಡು ಸಿನಿಮಾವನ್ನ ನೀಡುವ ಯೋಚನೆಯಲ್ಲಿದ್ದಾರೆ. ಚೇತನ್ ಬಹುದ್ದೂರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಭರ್ಜರಿ' ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿದೆ.

ರೋರಿಂಗ್ ಸ್ಟಾರ್ 'ಮಫ್ತಿ'

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ 'ಮಫ್ತಿ' ಈ ವರ್ಷದ ಬಹುನಿರೀಕ್ಷೆಯ ಚಿತ್ರಗಳಲ್ಲೊಂದು. 'ರಥಾವರ' ಚಿತ್ರದ ನಂತರ ಶ್ರೀಮುರುಳಿ ಅಭಿನಯದ ಚಿತ್ರ ಇದಾಗಿದ್ದು, 2017ರಲ್ಲಿ ಬಿಡುಗಡೆಯಾಗಲಿದೆ.

English summary
Most Expected Kannada Movies Of 2017. Shiva Rajkumar's 'Srikanta', Darshan's 'Chakravarthy', Sudeep Starerr 'Hebbuli', Puneeth RajKumar's 'Rajakumara' and some other movies are in the Race. here is the Complete details of Most Expected Movies In 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada