ಉಳಿದಿರುವುದು ಮೂರುವರೆ ತಿಂಗಳು: ಯಾರು ಬರ್ತಾರೆ, ಯಾರು ಬರಲ್ಲ.?
2018 ರಲ್ಲಿ ಮುಕ್ಕಾಲು ವರ್ಷ ಮುಗಿದಿದೆ. ಕಳೆದ ಅರ್ಧ ವರ್ಷದಲ್ಲಿ ಸ್ಟಾರ್ ನಟರ ಚಿತ್ರಗಳು ಇಲ್ಲವಾದರೂ, ಹೊಸಬರ ಸಿನಿಮಾಗಳು ಪ್ರೇಕ್ಷಕರನ್ನ ರಂಜಿಸಿದೆ. ಗುಳ್ಟು, ಆ ಕರಾಳ ರಾತ್ರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದಲ್ಲಾ ಎರಡಲ್ಲಾ ಚಿತ್ರಗಳು ಭಾರಿ ಮೆಚ್ಚುಗೆ ಗಳಿಸಿಕೊಂಡಿತ್ತು.
ಈಗ ಉಳಿದಿರುವುದು ಕೇವಲ ಮೂರುವರೆ ತಿಂಗಳು. ಈಗಲಾದರೂ ದೊಡ್ಡ ನಟರ ಚಿತ್ರಗಳು ಬರುತ್ತಾ, ಇಲ್ವಾ ಎಂಬುದು ಕುತೂಹಲ, ಅನುಮಾನ ಜನರನ್ನ ಕಾಡುತ್ತಿದೆ.
ಕೆಲವು ಚಿತ್ರಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಮತ್ತೆ ಕೆಲವು ಚಿತ್ರಗಳು ಇದೇ ವರ್ಷ ಬರ್ತೀವಿ ಎಂದು ಹೇಳಿಕೊಂಡಿದೆ. ಅಂತಿಮ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಇದೇ ವರ್ಷ ಬರಬಹುದು ಅಥವಾ ಮುಂದಿನ ವರ್ಷಕ್ಕೆ ಮುಂದೋಗಬಹುದು. ಹಾಗಿದ್ರೆ, ಉಳಿದಿರುವ ಮೂರುವರೆ ತಿಂಗಳಲ್ಲಿ ಯಾರ ಆಗಮನವಾಗಲಿದೆ.? ಮುಂದೆ ಓದಿ.....

'ದಿ ವಿಲನ್' ದಿನಾಂಕ್ ಪಕ್ಕಾ
ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಬಗ್ಗೆ ಪಕ್ಕಾ ಸ್ಪಷ್ಟನೆ ಸಿಕ್ಕಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಅಕ್ಟೋಬರ್ 18ಕ್ಕೆ ಈ ಬಿಗ್ ಸ್ಟಾರ್ ಗಳ ಚಿತ್ರ ಬರೋದು ಖಚಿತ. ಮತ್ಯಾವ ಬದಲಾವಣೆಯೂ ಆಗೋದಿಲ್ಲ.

ಕೆ.ಜಿ.ಎಫ್ ಬರಬಹುದು.?
ಎರಡು ವರ್ಷದಿಂದ ಕಾಯಿಸುತ್ತಿರುವ ಕೆಜಿಎಫ್ ಸಿನಿಮಾ ಅಕ್ಟೋಬರ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇನ್ನು ರಿಲೀಸ್ ಬಗ್ಗೆ ಪಕ್ಕಾ ಮಾಹಿತಿ ಇಲ್ಲ. ಸೆಪ್ಟೆಂಬರ್ 19 ರಂದು ಕೆಜಿಎಫ್ ರಿಲೀಸ್ ಬಗ್ಗೆ ಸ್ವತಃ ಚಿತ್ರತಂಡವೇ ಖಚಿತಪಡಿಸಲಿದೆಯಂತೆ. ಇದೇ ವರ್ಷ ಬರುವುದು ಬಹುತೇಕ ಖಚಿತವಾಗಿದೆ.

'ಕುರುಕ್ಷೇತ್ರ' ಮುಂದಕ್ಕೆ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ಇಷ್ಟೋತ್ತಿಗಾಗಲೇ ಬರಬೇಕಿತ್ತು. ಆದ್ರೆ, ಗ್ರಾಫಿಕ್ಸ್ ಕೆಲಸ ಹೆಚ್ಚಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಇದೀಗ, ಬಿಡುಗಡೆ ಬಗ್ಗೆ ಅಂತೆ ಕಂತೆಗಳು ಚಾಲ್ತಿಯಲ್ಲಿದ್ದು ಈ ವರ್ಷ ಈ ಸಿನಿಮಾ ಬರಲ್ಲ ಎನ್ನಲಾಗುತ್ತಿದೆ. ಮುಂದಿನ ವರ್ಷವೇ 'ಕುರುಕ್ಷೇತ್ರ' ನೋಡಬಹುದಂತೆ.

'ನಟಸಾರ್ವಭೌಮ' ಯಾವಾಗ.?
ಸದ್ದಿಲ್ಲದೇ ಚಿತ್ರೀಕರಣ ಮಾಡುತ್ತಿರುವ ಪುನೀತ್ ರಾಜ್ ಕುಮಾರ್ ಅವರ 'ನಟಸಾರ್ವಭೌಮ' ಸಿನಿಮಾ ಸದ್ಯ ಸಾಂಗ್ಸ್ ರೆಕಾರ್ಡಿಂಗ್ ಮಾಡ್ತಿದೆ. ಸೆಪ್ಟೆಂಬರ್ 19ರಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ಈ ವರ್ಷ ಪುನೀತ್ ಅವರ ಸಿನಿಮಾ ಯಾವುದೂ ಬಿಡುಗಡೆಯಾಗಿಲ್ಲ. ಹೀಗಾಗಿ, ಈ ಚಿತ್ರ ಬರೋದು ಕನ್ ಫರ್ಮ್ ಎನ್ನಲಾಗುತ್ತಿದೆ.

'ಅಂಬಿ' ಬರ್ತಾರೆ
ನಟ ಅಂಬರೀಶ್ ಅಭಿನಯದ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಕಂಪ್ಲೀಟ್ ಮುಗಿದಿದೆ. ಆಡಿಯೋ ಹಾಗೂ ಟ್ರೈಲರ್ ಬಿಡುಗಡೆಯಾಗಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಇದೇ ವರ್ಷ ಈ ಸಿನಿಮಾನೂ ಬರಲಿದೆ. ಈ ಸಿನಿಮಾದಲ್ಲೂ ಸುದೀಪ್ ಅಭಿನಯಿಸಿರುವುದರಿಂದ 'ದಿ ವಿಲನ್' ಬಂದ ಮೇಲೆ ಬರಬಹುದು.

ಉಳಿದಂತೆ ಯಾವುದು.?
ಈ ಸಿನಿಮಾಗಳ ಜೊತೆಗೆ ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಹಾಗೂ ರಕ್ಷಿತ್ ಶೆಟ್ಟಿ ಅವರ 'ಅವನೇ ಶ್ರೀಮನ್ನಾರಾಯಣ' ಚಿತ್ರಗಳು ಸಹ ಇದೇ ವರ್ಷ ಬಿಡುಗಡೆಯಾಗಲಿವೆಯಂತೆ. ಈ ಇಬ್ಬರ ಚಿತ್ರಗಳು ಈ ವರ್ಷ ಯಾವುದು ತೆರೆಕಂಡಿಲ್ಲ.


Click it and Unblock the Notifications











