ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ನಟ ಯಾರು?

By Pavithra

Recommended Video

ಗೂಗಲ್ ನಲ್ಲಿ ಹೆಚ್ಚು ಸುದ್ದಿ ಮಾಡಿದ ಕನ್ನಡದ ನಟರು | Filmibeat Kannada

ವರ್ಷದ ಆರಂಭದಿಂದಲೂ ಅಂತ್ಯದವರೆಗೂ ಸಿನಿ ಕಲಾವಿದರು ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಅಭಿನಯಿಸುವುದರಲ್ಲೇ ಬ್ಯುಸಿ ಇರ್ತಾರೆ. ವರ್ಷವಿಡಿ ಅವರ ಪರಿಶ್ರಮ ಸಿನಿಮಾಗಾಗಿಯೇ ಮೀಸಲಾಗಿರುತ್ತೆ. ತಮ್ಮ ಅಭಿಮಾನಿಗಳಿಗೆ ಉತ್ತಮ ಸಿನಿಮಾ ಕೊಟ್ಟು, ರಂಜಿಸಬೇಕು ಎಂಬ ಪಣ ತೊಟ್ಟಿರುತ್ತಾರೆ.

ಕೆಲ ನಟರು ಒಳ್ಳೆ ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಸುದ್ದಿ ಮಾಡಿದ್ರೆ, ಇನ್ನು ಕೆಲವರು ವಿವಾದಗಳನ್ನ ಮಾಡ್ಕೊಂಡು ಸುದ್ದಿಯಾಗ್ತಾರೆ. ಇದರ ಮಧ್ಯೆ ದೊಡ್ಡ ದೊಡ್ಡ ನಟರು ಎಂದು ಗುರುತಿಸಿಕೊಂಡಿರುವವರ ಸಿನಿಮಾ ಬಿಡುಗಡೆ ಆಗದೇ ಇದ್ದರೂ ಸದಾ ಅವರ ಹೆಸರು ಚಾಲ್ತಿಯಲ್ಲಿರುತ್ತೆ.

ಅದೇನೇ ಇದ್ದರೂ, ವರ್ಷದ ಅಂತ್ಯದಲ್ಲಿ ಒಂದು ಕುತೂಹಲ ಕಾಡುತ್ತೆ. ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ನಟ ಯಾರು? ಯಾರ ಬಗ್ಗೆ ಹೆಚ್ಚು ಜನರು ಸರ್ಚ್ ಮಾಡಿರಬಹುದು? ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಈ ವರ್ಷದ ಗೂಗಲ್ ಟಾಪ್ ನಲ್ಲಿರುವ ನಟ ಯಾರು ಅಂತ ನಾವು ಡೀಟೆಲ್ ಆಗಿ ನಿಮಗೆ ತಿಳಿಸುತ್ತೇವೆ. ಮುಂದೆ ಓದಿ

ನಂಬರ್ 1 ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್

ನಂಬರ್ 1 ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್

ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ನಟ ಕನ್ನಡದ ಮಾಸ್ಟರ್ ಪೀಸ್ ಯಶ್. ವರ್ಷದ ಪ್ರಾರಂಭದಿಂದಲೇ ಯಶ್ ಸುದ್ದಿಯಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ 'ಕೆ.ಜಿ.ಎಫ್' ಸಿನಿಮಾ ಪೋಸ್ಟರ್ ರಿಲೀಸ್ ಆಗಿತ್ತು. ಆದಾದ ನಂತರ 'ಯಶೋಮಾರ್ಗ'ದ ಮೂಲಕ ತಲ್ಲೂರು ಕೆರೆ ಹೂಳೆತ್ತುವ ಕೆಲಸ ಪ್ರಾರಂಭವಾಯ್ತು. ಇವುಗಳ ಮಧ್ಯೆ ಯಶ್ ಸಿನಿಮಾಗಳ ಸುದ್ದಿಗಳು ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡಲು ಕಾರಣವಾಗಿದೆ.

ಅತೀ ಹೆಚ್ಚು ಸರ್ಚ್ ಆದ ಎರಡನೇ ನಟ ಕಿಚ್ಚ

ಅತೀ ಹೆಚ್ಚು ಸರ್ಚ್ ಆದ ಎರಡನೇ ನಟ ಕಿಚ್ಚ

ನಟ ಕಿಚ್ಚ ಸುದೀಪ್ ಕೂಡ ಈ ವರ್ಷ ಪೂರ್ತಿ ಸುದ್ದಿಯಲ್ಲಿದ್ದರು. 'ದಿ ವಿಲನ್' ಸಿನಿಮಾ ಸೆಟ್ಟೇರಿದಾಗಿನಿಂದ ಗೂಗಲ್ ನಲ್ಲಿ ಸುದೀಪ್ ಬಗ್ಗೆ ಹೆಚ್ಚು ಜನರು ಸರ್ಚ್ ಮಾಡಿದ್ದಾರೆ. ಅದರ ಜೊತೆಯಲ್ಲಿ ಹಾಲಿವುಡ್ ಸಿನಿಮಾ 'ರೈಸನ್' ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಹುಡುಕಿದ್ದಾರೆ. ವಿಶೇಷ ಅಂದರೆ ಸುದೀಪ್ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿದ್ದ 'ಟೈಗರ್ ಜಿಂದಾ ಹೈ' ಸಿನಿಮಾದ ಬಗ್ಗೆಯೂ ಕಿಚ್ಚನ ಅಭಿಮಾನಿಗಳು ಸರ್ಚ್ ಮಾಡಿದ್ದಾರೆ.

ಮೂರನೇ ಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್

ಮೂರನೇ ಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್

ಮೋಸ್ಟ್ ಗೂಗಲ್ ಸರ್ಚ್ ನಲ್ಲಿ ದರ್ಶನ್ ಮೂರನೇ ಸ್ಥಾನದಲ್ಲಿದ್ದಾರೆ. ಸುದೀಪ್ ರಷ್ಟೇ ದರ್ಶನ್ ಬಗ್ಗೆಯೂ ಹುಡುಕಿದ್ದಾರೆ. ಈ ವರ್ಷದ ಬಿಡುಗಡೆಯಾದ 'ತಾರಕ್' ಚಿತ್ರದ ಬಗ್ಗೆ ಹಾಗೂ ದರ್ಶನ್ ಅಭಿನಯದ ಮುಂಬರುವ ಸಿನಿಮಾಗಳ ಬಗ್ಗೆ ಹೆಚ್ಚಾಗಿ ಗೂಗಲ್ ನಲ್ಲಿ ಹುಡುಕಿದ್ದಾರೆ. ಸ್ಪೆಷಲ್ ಅಂದರೆ ದರ್ಶನ್ ಹಾಡುಗಳನ್ನ ಕೇಳಲು ಹೆಚ್ಚಿನ ಸಂಖ್ಯೆಯ ಜನರು 'ಡಿ-ಬಾಸ್' ಅವರನ್ನ ಹುಡುಕಿದ್ದಾರೆ.

ಪುನೀತ್ ರಾಜ್ ಕುಮಾರ್ ನಾಲ್ಕನೇ ಸ್ಥಾನ

ಪುನೀತ್ ರಾಜ್ ಕುಮಾರ್ ನಾಲ್ಕನೇ ಸ್ಥಾನ

ಈ ವರ್ಷ ಪುನೀತ್ ರಾಜ್ ಕುಮಾರ್ ಅವರಿಗೆ ಹೆಸರು ಮತ್ತು ಖ್ಯಾತಿ ಗಳಿಸಿಕೊಟ್ಟ ಸಿನಿಮಾ 'ರಾಜಕುಮಾರ'. 'ರಾಜಕುಮಾರ' ಸಿನಿಮಾ ಬಗ್ಗೆಯೇ ಜನರು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡಿನ ಬಗ್ಗೆಯೂ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ. ಅದರ ಜೊತೆಯಲ್ಲಿ ಪುನೀತ್ ಅಭಿನಯದ ಸಿನಿಮಾದ ವಿಡಿಯೋಗಳನ್ನೂ ಸರ್ಚ್ ಮಾಡಿದ್ದಾರೆ.

More from Filmibeat

English summary
Kannada actors, Yash, Darshan Thungudeep, Sudeep, Puneet Rajkumar who is the most search person in google Worldwide in 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X