ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಮೆನ್ಷನ್ ಆದ ಭಾರತದ 10 ನಟರ ಪಟ್ಟಿ ರಿಲೀಸ್; ಕನ್ನಡದಿಂದ ಒಬ್ಬರೇ!
ಸೋಷಿಯಲ್ ಮೀಡಿಯಾ.. ಸದ್ಯ ಪ್ರತಿಯೊಂದು ಕ್ಷೇತ್ರಕ್ಕೂ ಸಹ ಅತಿಮುಖ್ಯವಾದ ಅಂಶವಾಗಿಬಿಟ್ಟಿದೆ. ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಸುಲಭವಾಗಿ ತಮ್ಮ ಅನುಯಾಯಿಗಳಿಗೆ ತಿಳಿಸಲು ಇರುವ ಅತ್ಯುತ್ತಮ ವೇದಿಕೆ ಇದಾಗಿದೆ. ಇನ್ನು ಸಿನಿಮಾ ಕ್ಷೇತ್ರಕ್ಕಂತೂ ಈ ಸಾಮಾಜಿಕ ಜಾಲತಾಣ ಅತ್ಯಗತ್ಯ ಎನಿಸಿಬಿಟ್ಟಿದೆ.
ಈ ಹಿಂದೆ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾದರೆ ಅಥವಾ ಹಾಡುಗಳ ಬಿಡುಗಡೆಯಾದರೆ ಮರುದಿನ ಬರುವ ದಿನಪತ್ರಿಕೆಗಳಲ್ಲಿ ಅದರ ಬಗ್ಗೆ ಸುದ್ದಿ ಇರುತ್ತಿತ್ತು. ಹೀಗೆ ಚಿತ್ರವೊಂದರ ಅಪ್‌ಡೇಟ್ ದಿನ ಕಳೆದ ಬಳಿಕ ಸಿನಿ ರಸಿಕನಿಗೆ ತಲುಪುತ್ತಿತ್ತು. ನಂತರ ಸುದ್ದಿ ವಾಹಿನಿಯ ಯುಗ ಆರಂಭವಾಯಿತು. ಒಂದು ದಿನ ತಡವಾಗಿ ತಿಳಿಯುತ್ತಿದ್ದ ಸುದ್ದಿ ಈ ವಾಹಿನಿಗಳ ಮೂಲಕ ಅದೇ ದಿನ ಸಿನಿ ರಸಿಕರನ್ನು ಮುಟ್ಟುತ್ತಿತ್ತು.

ಆದರೆ ಈಗ ಹಾಗಲ್ಲ. ಸ್ಮಾರ್ಟ್‌ಫೋನ್ ಯುಗ ನಡೆಯುತ್ತಿದ್ದು, ಸ್ಮಾರ್ಟ್‌ಫೋನ್ ಇಲ್ಲದ ಮನೆಯೇ ಇಲ್ಲ ಎಂಬಂತಾಗಿಬಿಟ್ಟಿದೆ. ಇನ್ನು ಈ ಹಿಂದೆ ದಿನಪತ್ರಿಕೆ ಹಾಗೂ ಟಿವಿ ನೋಡಲು ಆಸಕ್ತಿ ಹೊಂದಿಲ್ಲದೇ ಇದ್ದವರೂ ಸಹ ಈಗ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಿದ್ದಾರೆ. ಬಹುತೇಕರು ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ತೆರೆದು ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಎಲ್ಲಿ ಏನೇ ನಡೆದರೂ ನಿಮಿಷಗಳಲ್ಲೇ ಆ ಸುದ್ದಿ ಜನರನ್ನು ಮುಟ್ಟುತ್ತಿದೆ. ಹೀಗಾಗಿ ಜನರೂ ಸಹ ಈ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯತೊಡಗಿದ್ದಾರೆ. ಇನ್ನು ಸಿನಿಮಾ ಕ್ಷೇತ್ರಕ್ಕಂತೂ ಈ ಸಾಮಾಜಿಕ ಜಾಲತಾಣದಿಂದ ಹೆಚ್ಚಿನ ಲಾಭವೇ ಇದೆ. ಸಿನಿಮಾವೊಂದರ ಏನೇ ಅಪ್‌ಡೇಟ್ ಇದ್ದರೂ ಸರಿ, ಅದನ್ನು ಚಿತ್ರತಂಡದ ನಾಯಕ ಅಥವಾ ಉಳಿದ ಯಾರಾದರೂ ತಮ್ಮ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಸುದ್ದಿ ಸುಲಭವಾಗಿ ತಲುಪುತ್ತೆ.
ಹೀಗಾಗಿ ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಖಾತೆಗಳನ್ನು ತೆರೆದು ಸಕ್ರಿಯರಾಗಿರುತ್ತಾರೆ. ಅದರಲ್ಲಿಯೂ ಟ್ವಿಟರ್‌ನಲ್ಲಿ ಸಿನಿ ರಸಿಕರು ಹೆಚ್ಚು ಸಕ್ರಿಯರಾಗಿರುತ್ತಾರೆ. ತಮ್ಮ ನೆಚ್ಚಿನ ನಟರ ಕುರಿತು ಏನೇ ಅಪ್‌ಡೇಟ್ ಬಂದರೂ ಅದರ ಬಗ್ಗೆ ಹ್ಯಾಷ್‌ಟ್ಯಾಗ್ ಒಂದನ್ನು ಸೃಷ್ಟಿಸಿ ಟ್ವೀಟ್ ಮಾಡಿ ಅದನ್ನು ಟ್ರೆಂಡ್ ಮಾಡುತ್ತಾರೆ. ಇದು ದೊಡ್ಡ ಮಟ್ಟದ ಕ್ರೇಜ್ ಇರುವ ಅಂಶವಾಗಿದೆ.

ಇನ್ನು ಈ ಟ್ವಿಟರ್‌ನಲ್ಲಿ ತಮ್ಮ ನಟರ ಕುರಿತು ಪೋಸ್ಟ್ ಹಂಚಿಕೊಳ್ಳುವಾಗ ಆ ನಟರ ಹೆಸರುಗಳನ್ನು ಹ್ಯಾಷ್‌ಟ್ಯಾಗ್ ಮಾಡಿ ಬರೆಯುವ ಅಭಿಮಾನಿಗಳು ಅಭಿಮಾನ ಮೆರೆಯುತ್ತಾರೆ. ಆಗಾಗ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ನಟರ ಪಟ್ಟಿ ಬಿಡುಗಡೆಗೊಳ್ಳುತ್ತದೆ. ಸದ್ಯ ಕಳೆದ 30 ದಿನಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಅದ 10 ಭಾರತದ ನಟರ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಕನ್ನಡ ಇಂಡಸ್ಟ್ರಿಯ ಕೇವಲ ಓರ್ವ ನಟ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿ ಈ ಕೆಳಕಂಡಂತಿದೆ.
1. ದಳಪತಿ ವಿಜಯ್ -
2. ಅಜಿತ್ ಕುಮಾರ್
3. ಶಾರುಖ್ ಖಾನ್
4. ಎನ್‌ಟಿಆರ್
5. ಧನುಷ್
6. ಪವನ್ ಕಲ್ಯಾಣ್
7. ಸಲ್ಮಾನ್ ಖಾನ್
8. ಪ್ರಭಾಸ್
9. ರಾಮ್ ಚರಣ್
10. ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ 30 ದಿನಗಳಲ್ಲಿ ಅತಿಹೆಚ್ಚು ಮೆನ್ಷನ್ ಆದ ಭಾರತದ ಹತ್ತು ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಕನ್ನಡದ ನಟ ಎನಿಸಿಕೊಂಡಿದ್ದಾರೆ. ಈ ತಿಂಗಳು ದರ್ಶನ್ ಹುಟ್ಟುಹಬ್ಬವಿದ್ದ ಕಾರಣ ಹೆಚ್ಚು ಮೆನ್ಷನ್ ಬರಲು ಕಾರಣ ಎನ್ನಬಹುದು. ಇನ್ನುಳಿದಂತೆ ವಿಜಯ್, ಅಜಿತ್ ಹಾಗೂ ಶಾರುಖ್ ಖಾನ್ ನಟನೆಯ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದ ಕಾರಣ ಇವರು ಹೆಸರುಗಳು ಹೆಚ್ಚು ಮೆನ್ಷನ್ ಆಗಿದ್ದಾರೆ.
ಉಳಿದಂತೆ ಎನ್‌ಟಿಆರ್ ಹಾಗೂ ರಾಮ್ ಚರಣ್ ಆರ್ ಆರ್ ಆರ್ ಚಿತ್ರ ವಿವಿಧ ಪ್ರಶಸ್ತಿಗಳನ್ನು ಗೆದ್ದ ಹಾಗೂ ನಾಮಿನೇಟ್ ಆದ ಕಾರಣ ಅತಿಹೆಚ್ಚು ಬಾರಿ ಮೆನ್ಷನ್ ಆಗಿದ್ದಾರೆ. ಧನುಷ್ ಸಹ ತಮ್ಮ ಚಿತ್ರ ಬಿಡುಗಡೆಯಾದ ಕಾರಣ ಈ ಪಟ್ಟಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದ ಕಾರಣ ಮೆನ್ಷನ್ ಆಗಿದ್ದಾರೆ. ಇನ್ನು ಪ್ರಭಾಸ್ ಹಾಗೂ ಪವನ್ ಕಲ್ಯಾಣ್ ತಮ್ಮ ಮುಂದಿನ ಚಿತ್ರಗಳ ವಿಚಾರವಾಗಿ ಹೆಚ್ಚು ಬಾರಿ ಮೆನ್ಷನ್ ಆಗಿದ್ದಾರೆ.


Click it and Unblock the Notifications











