ಮಾರ್ಚ್ ತಿಂಗಳ ಮೊದಲ 12 ದಿನಗಳಲ್ಲಿ ಹೆಚ್ಚು ಫೇಮಸ್ ಆದ ನಟರು; ಕನ್ನಡದಿಂದ ಇಬ್ಬರೇ!
ಈಗ ಸಿನಿ ರಸಿಕರು ಬಳಸುವ ಕಡ್ಡಾಯವಾದ ಅಪ್ಲಿಕೇಶನ್ ಆಗಿ ಮಾರ್ಪಡುತ್ತಿದೆ. ಯಾವುದೇ ಚಿತ್ರದ ಕುರಿತ ಅಪ್‌ಡೇಟ್‌ಗಳು, ಆ ಚಿತ್ರ ಎಷ್ಟು ಗಳಿಸಿತು ಎಂಬ ಮಾಹಿತಿ ಅತಿವೇಗವಾಗಿ ಉಳಿದ ಎಲ್ಲಾ ಅಪ್ಲಿಕೇಶನ್‌ಗಳಿಗಿಂತ ಈ ಅಪ್ಲಿಕೇಶನ್‌ನಲ್ಲಿಯೇ ಸಿಗಲಿದೆ. ಇನ್ನು ಸಿನಿ ರಸಿಕರು ಮಾತ್ರವಲ್ಲದೇ ಚಿತ್ರತಂಡಗಳೂ ಸಹ ಈ ಟ್ವಿಟರ್ ಉಪಯೋಗಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಸಿನಿಮಾವೊಂದನ್ನು ಘೋಷಿಸಿದರೆ, ಮುಹೂರ್ತ ಸಮಾರಂಭ ನಡೆದರೆ, ಹಾಡು ಹಾಗೂ ಟೀಸರ್‌ಗಳು ಬಿಡುಗಡೆಯಾದರೆ ಅವುಗಳನ್ನು ಚಿತ್ರತಂಡ ಈ ಟ್ವಿಟರ್‌ನಲ್ಲಿಯೇ ಘೋಷಿಸಿ ಅಭಿಮಾನಿಗಳಿಗೆ ಅಪ್‌ಡೇಟ್ ನೀಡುತ್ತವೆ. ಹೀಗೆ ಟ್ವಿಟರ್ ವೇಗವಾಗಿ ಮಾಹಿತಿಗಳನ್ನು ತಲುಪಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಬಳಕೆದಾರರು ಈ ವೇದಿಕೆಯಲ್ಲಿ ತಮ್ಮ ಖಾತೆಗಳನ್ನು ತೆರೆಯುತ್ತಿದ್ದಾರೆ.

ಹೀಗೆ ಸಿನಿ ಪ್ರೇಮಿಗಳ ಜನಪ್ರಿಯತೆಯನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿರುವ ಟ್ವಿಟರ್ ಕೂಡ ದಾಖಲೆಗಳ ಲೆಕ್ಕಾಚಾರಕ್ಕೆ ಒಳಪಡುತ್ತದೆ. ಇಲ್ಲಿ ಟ್ರೆಂಡಿಂಗ್ ವಿಭಾಗ ಇರುವ ಕಾರಣ ತಮ್ಮ ನೆಚ್ಚಿನ ನಟನ ಚಿತ್ರಗಳು ಬಿಡುಗಡೆಯಾದಾಗ ಅವುಗಳ ಹ್ಯಾಷ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಿ ತಮ್ಮ ಕ್ರೇಜ್ ತೋರಿಸಲಾಗುತ್ತದೆ. ಯಾವ ನಟನ ಹೆಸರು ಅಥವಾ ಚಿತ್ರಗಳ ಹೆಸರು ಹೆಚ್ಚು ಟ್ವೀಟ್‌ಗಳನ್ನು ಪಡೆದುಕೊಂಡಿದೆ ಎಂದೆಲ್ಲಾ ಕ್ರೇಜ್ ಅನ್ನು ಅಳೆಯಲಾಗುತ್ತದೆ.
ಕೇವಲ ಸಿನಿಮಾಗೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳ ಇತರೆ ಸುದ್ದಿ ಪೋಸ್ಟ್ ಆದಾಗಲೂ ಸಹ ಇಲ್ಲಿ ಆ ನಟರ ಹೆಸರುಗಳನ್ನು ಉಲ್ಲೇಖಿಸಲಿದ್ದು, ಪ್ರತಿ 12 ದಿನಗಳಿಗೊಮ್ಮೆ ಯಾವ ನಟನ ಬಗ್ಗೆ ಹೆಚ್ಚು ಚರ್ಚೆ ನಡೆಯಿತು ಎಂಬುದನ್ನು ಆ ನಟನ ಹೆಸರು ಉಲ್ಲೇಖಿಸಲ್ಪಟ್ಟ ಟ್ವೀಟ್‌ಗಳ ಸಂಖ್ಯೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಅದೇ ರೀತಿ ಈ ಮಾರ್ಚ್ 1ರಿಂದ 12ರವರೆಗೆ ಟ್ವಿಟರ್‌ನಲ್ಲಿ ಅತಿಹೆಚ್ಚು ಬಾರಿ ಮೆನ್ಷನ್ ಆದ ದಕ್ಷಿಣ ಭಾರತದ ನಟರ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಯಾವೆಲ್ಲಾ ಸೌತ್ ನಟರು ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಜೂನಿಯರ್ ಎನ್‌ಟಿಆರ್
2. ರಾಮ್ ಚರಣ್
3. ವಿಜಯ್
4. ಪ್ರಭಾಸ್
5. ಅಲ್ಲು ಅರ್ಜುನ್
6. ಯಶ್
7. ಪವನ್ ಕಲ್ಯಾಣ್
8. ಅಜಿತ್ ಕುಮಾರ್
9. ಮಹೇಶ್ ಬಾಬು
10. ದರ್ಶನ್

ಮಾರ್ಚ್ 1ರಿಂದ 12ರವರೆಗೆ ಟ್ವಿಟರ್‌ನಲ್ಲಿ ಆಸ್ಕರ್ ಪ್ರಶಸ್ತಿಯ ಕುರಿತು ಹೆಚ್ಚು ಚರ್ಚೆಗಳಾದ ಕಾರಣ ಹಾಗೂ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಗೆದ್ದ ಕಾರಣ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಅವರ ಹೆಸರುಗಳು ಹೆಚ್ಚಾಗಿ ಮೆನ್ಷನ್ ಆಗಿವೆ. ಇನ್ನುಳಿದಂತೆ ಈ ಹಿಂದಿನ ಪಟ್ಟಿಗಳಂತೆ ಸೌತ್‌ನ ಹೆಚ್ಚು ಚರ್ಚೆಗೀಡಾಗುವ ನಟರು ಈ ಪಟ್ಟಿಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹತ್ತನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಮಾರ್ಚ್ 1ರಿಂದ 12ರವರೆಗೆ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ಸೌತ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಕನ್ನಡದ ಇಬ್ಬರು ನಟರು ಎನಿಸಿಕೊಂಡಿದ್ದಾರೆ.


Click it and Unblock the Notifications











