ಚಂದನವನದಲ್ಲಿ ಶುರುವಾಯ್ತು ಸಿನಿಮಾ ಜಾತ್ರೆ
ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಬಂತು ಅಂದರೆ ಕನ್ನಡ ಸಿನಿಮಾರಂಗದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆ ಮಾಡಲು ನಾ ಮುಂದು ತಾ ಮುಂದು ಎಂದು ನಿರ್ಮಾಪಕರುಗಳು ತಯಾರಾಗುತ್ತಿದ್ದರು. ಆದರೆ ಈ ಬಾರಿ ಫೆಬ್ರವರಿಯಲ್ಲಿ ಸಿನಿಮಾ ಜಾತ್ರೆ ನಡೆಯಲಿದೆ. ಇನ್ನು ಮೂರು ವಾರಗಳಲ್ಲಿ ಕನ್ನಡದ ಬಿಗ್ ಬಜೆಟ್ ಹಾಗೂ ವಿಭಿನ್ನ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ.
ಈ ವಾರ ಕನ್ನಡದ ಮೂರು ಚಿತ್ರಗಳು ರಿಲೀಸ್ ಆಗಲಿವೆ. ಬಹು ನಿರೀಕ್ಷಿತ 'ಪ್ರೇಮ ಬರಹ' ಹಾಗೂ 'ಸಂಹಾರ' ಚಿತ್ರ ಒಟ್ಟೊಟ್ಟಿಗೆ ಬಿಡುಗಡೆ ಆಗುತ್ತಿದೆ. ಈ ಎರಡು ಸಿನಿಮಾಗಳ ಜೊತೆಯಲ್ಲಿ 'ರಘುವೀರ' ಸಿನಿಮಾ ಬಿಡುಗಡೆ ಆಗುತ್ತಿದೆ.

ಮುಂದಿನ ವಾರದಲ್ಲಿ ಬಹು ನಿರೀಕ್ಷಿತ 'ರಾಜರಥ' ಸಿನಿಮಾ ಬಿಡುಗಡೆ ಆಗಲಿದ್ದು ಸೌತ್ ಬಿಗ್ ಸ್ಟಾರ್ ಗಳು ಚಿತ್ರದಲ್ಲಿ ಅಥಿತಿಗಳಾಗಿ ಕಾಣಿಸಿಕೊಂಡಿರುವುದು ಸಿನಿಮಾ ಒಂದು ವಿಶೇಷತೆ. ಅದರ ಜೊತೆಯಲ್ಲಿ ಬಂಡಾರಿ ಬ್ರದರ್ಸ್ ಈ ಬಾರಿ ಯಾವ ಮ್ಯಾಜಿಕ್ ಮಾಡುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಿಗೆ ಇದೆ.
'ರಾಜರಥ' ಸಿನಿಮಾದ ಜೊತೆಯಲ್ಲಿ ವಿ ನಾಗೇಂದ್ರ ಪ್ರಸಾದ್ ಹಾಗೂ ಶುಭಾ ಪೂಂಜಾ ಅಭಿನಯದ 'ಗೂಗಲ್' ಸಿನಿಮಾ ಕೂಡ ತೆರೆಗೆ ಬರುತ್ತಿದೆ. ವಿಭಿನ್ನ ಕಥೆ ಹಾಗೂ ಹಾಡುಗಳನ್ನ ಹೊತ್ತು ತರುತ್ತಿರುವ ಗೂಗಲ್ ಚಿತ್ರ ಕೂಡ ನಿರೀಕ್ಷೆ ಹುಟ್ಟುಹಾಕಿದೆ.

ಫೆಬ್ರವರಿ ಕೊನೆಯ ವಾರಕ್ಕೆ ಬಂದರೆ ಕನ್ನಡ ಸಿನಿಮಾ ಪ್ರೇಕ್ಷಕರು ಕಾತುರದಿಂದ ಕಾದಿರುವ 'ಟಗರು' ಚಿತ್ರ ಬಿಡುಗಡೆ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಸೆನ್ಸಾರ್ ಮುಗಿಸಿದ ತಕ್ಷಣ ಸಿನಿಮಾ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆ.

ಇಷ್ಟು ಸಿನಿಮಾಗಳ ಜೊತೆಯಲ್ಲಿ 'ದಳಪತಿ', 'ದಂಡುಪಾಳ್ಯ 3' ಹಾಗೂ 'ಕುಮಾರಿ 21' ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ. ಇನ್ನು ಬಾಲಿವುಡ್ ನಲ್ಲಿ 'ಹಿಚ್ಚಿ' ಮತ್ತು 'ಪ್ಯಾಡ್ ಮ್ಯಾನ್' ಚಿತ್ರಗಳು ರಿಲೀಸ್ ಆಗಲಿವೆ. ಒಟ್ಟಾರೆ ಈ ತಿಂಗಳು ಸಿನಿಮಾ ಪ್ರಿಯರಿಗೆ ಹಬ್ಬದ ಸಂಭ್ರಮ


Click it and Unblock the Notifications











