For Quick Alerts
  ALLOW NOTIFICATIONS  
  For Daily Alerts

  2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?

  |

  2019ನೇ ವರ್ಷ ಮುಗಿಯುತ್ತಿದೆ. ವರ್ಷದ ಕೊನೆಯಲ್ಲಿ ಸಹಜವಾಗಿ ಹಲವು ಕುತೂಹಲ ವಿಷಯಗಳು ಚರ್ಚೆಯಾಗುತ್ತೆ. ಇದೀಗ, ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾ ಯಾವುದು ಎಂಬ ಪಟ್ಟಿ ಬಿಡುಗಡೆಯಾಗಿದೆ.

  ಹಿಂದಿಯ ಕಬೀರ್ ಸಿಂಗ್ ಸಿನಿಮಾದ ಕುರಿತು ಹೆಚ್ಚು ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಟಾಪ್ 10 ಚಿತ್ರಗಳ ಪೈಕಿ ಹಿಂದಿ ಹಾಗೂ ಇಂಗ್ಲೀಷ್ ಚಿತ್ರಗಳೇ ಇರುವುದು ಸೌತ್ ಇಂಡಸ್ಟ್ರಿಗೆ ನಿರಾಸೆ.

  'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!

  ಇನ್ನು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾಗಳು ಪಟ್ಟಿಯೂ ಬಹಿರಂಗವಾಗಿದ್ದು, ತೆಲುಗಿನ ಸಿನಿಮಾಗಳೇ ಹೆಚ್ಚಿವೆ. ಹಾಗಿದ್ರೆ, ಗೂಗಲ್ನಲ್ಲಿ ಸೌತ್ ಇಂಡಿಯಾ ರೂಲ್ ಮಾಡಿದ ಚಿತ್ರಗಳು ಯಾವುದು? ಮುಂದೆ ಓದಿ...

  ಪ್ರಭಾಸ್ 'ಸಾಹೋ'

  ಪ್ರಭಾಸ್ 'ಸಾಹೋ'

  ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ನಟಿಸಿದ ಚಿತ್ರ ಸಾಹೋ. ಹಾಲಿವುಡ್ ರೇಂಜ್ ನಲ್ಲಿ ತಯಾರಾಗಿದ್ದ ಈ ಚಿತ್ರ ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡಿತ್ತು. ಈ ಹಿಂದಿನ ದಾಖಲೆಗಳನ್ನೆಲ್ಲಾ ಬ್ರೇಕ್ ಮಾಡಿ, ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ, ರಿಲೀಸ್ ಬಳಿಕ ಸಾಹೋ ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ. ಈ ಚಿತ್ರದ ಬಗ್ಗೆ ಸೌತ್ ಪ್ರೇಕ್ಷಕರು ಹೆಚ್ಚು ಸರ್ಚ್ ಮಾಡಿದ್ದಾರೆ.

  ಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣ

  ರಾಕಿಂಗ್ ಸ್ಟಾರ್ 'ಕೆಜಿಎಫ್'

  ರಾಕಿಂಗ್ ಸ್ಟಾರ್ 'ಕೆಜಿಎಫ್'

  ಸೌತ್ ಇಂಡಿಯಾ ರೂಲ್ ಮಾಡಿದ ಮತ್ತೊಂದು ಚಿತ್ರ ಯಶ್ ಅಭಿನಯಿಸಿದ್ದ ಕೆಜಿಎಫ್. 2018ರ ಕೊನೆಯಲ್ಲಿ ತೆರೆಕಂಡ ಈ ಚಿತ್ರ ದೊಡ್ಡ ಸಕ್ಸಸ್ ಕಂಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಗೆ ಎಲ್ಲ ಇಂಡಸ್ಟ್ರಿಯಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಜಿಎಫ್ ಚಾಪ್ಟರ್ 1 ನೋಡಿದ ಪ್ರೇಕ್ಷಕರು ಚಾಪ್ಟರ್ 2 ಕುರಿತು ಹೆಚ್ಚಿನ ಕುತೂಹಲ ಇಟ್ಟುಕೊಂಡಿದ್ದಾರೆ.

  ಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳುಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳು

  ಕಾಂಚನಾ ಮತ್ತು ವಿಶ್ವಾಸಂ

  ಕಾಂಚನಾ ಮತ್ತು ವಿಶ್ವಾಸಂ

  ರಾಘವ ಲಾರೆನ್ಸ್ ನಟಿಸಿರುವ ಕಾಂಚನಾ 3 ಸಿನಿಮಾ ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಗಳಿಸಿದ ದಾಖಲೆ ಮಾಡಿತ್ತು. ಅಜಿತ್ ಅಭಿನಯಿಸಿದ್ದ ಚಿತ್ರ ವಿಶ್ವಾಸಂ ಕೂಡ ಇದೇ ವರ್ಷ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ದಕ್ಷಿಣ ಚಿತ್ರಗಳ ಪೈಕಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಈ ಚಿತ್ರಗಳಿವೆ.

  ರಜನಿಯ 'ಪೇಟಾ'

  ರಜನಿಯ 'ಪೇಟಾ'

  ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ ಪೇಟಾ ಸಿನಿಮಾ ಈ ವರ್ಷ ತೆರೆಕಂಡ ಚಿತ್ರ. ಕಾರ್ತಿಕ್ ಸುಬ್ಬುರಾಜು ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಜನಿಕಾಂತ್ ತಮ್ಮ ಸ್ಟೈಲಿಶ್ ನಟನೆಯಿಂದ ಗಮನ ಸೆಳೆದಿದ್ದರು. ಸಿನಿಮಾಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರದ ಕುರಿತು ಕೂಡ ಸೌತ್ ಪ್ರೇಕ್ಷಕರು ಹೆಚ್ಚು ಹುಡುಕಾಟ ನಡೆಸಿದ್ದಾರೆ.

  ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

  ವಿಜಯ್ 'ಬಿಗಿಲ್'

  ವಿಜಯ್ 'ಬಿಗಿಲ್'

  ತಮಿಳು ನಟ ವಿಜಯ್ ನಟನೆಯ ಬಿಗಿಲ್ ಸಿನಿಮಾ ಈ ವರ್ಷದ ಬಿಗ್ಗೆಸ್ಟ್ ಹಿಟ್ ಚಿತ್ರ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್ ನಲ್ಲೂ 300 ಕೋಟಿ ಗಳಿಸಿದೆ. ನಿರ್ದೇಶಕ ಅಟ್ಲಿ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಬಂದ ಮೂರನೇ ಚಿತ್ರ ಇದಾಗಿದ್ದು, ಬಹುದೊಡ್ಡ ಟಾಕ್ ಆಗಿತ್ತು.

  ಕಾಮ್ರೆಡ್, ಅಸುರನ್

  ಕಾಮ್ರೆಡ್, ಅಸುರನ್

  ಇನ್ನುಳಿದಂತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಡಿಯರ್ ಕಾಮ್ರೇಡ್', ಪೂರಿ ಜಗನ್ನಾಥ್ ನಿರ್ದೇಶನ 'ಇಸ್ಮಾರ್ಟ್ ಶಂಕರ್', ರಾಮ್ ಚರಣ್ ತೇಜ ನಟನೆಯ 'ವಿನಯ ವಿಧೇಯ ರಾಮ' ಹಾಗೂ ಧನುಶ್ ನಟನೆಯ ಅಸುರನ್ ಸಿನಿಮಾಗಳು ಹೆಚ್ಚು ಸರ್ಚ್ ಆಗಿದೆ.

  English summary
  Which is most searched south movies on google in 2019. Saaho, KGF, Dear Comrade, iSmart Shankar and Vineya Vidhya Rama names are in the list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X