ಕೆಜಿಎಫ್ ಓಟ, ಯಜಮಾನ ಬೇಟೆ: ಮೊದಲ ಸ್ಥಾನಕ್ಕಾಗಿ ನಿಲ್ಲದ ಪೈಪೋಟಿ
Recommended Video

ಯೂಟ್ಯೂಬ್ ವೀವ್ಸ್ ಎಂಬುದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಸ್ಯಾಂಡಲ್ ವುಡ್ ಅಭಿಮಾನಿಗಳು. ಒಂದು ಸಮಯದಲ್ಲಿ ಟ್ರೈಲರ್, ಟೀಸರ್ ರಿಲೀಸ್ ಆಗಿ ತಿಂಗಳು ಕಳೆದರೂ ಮಿಲಿಯನ್ ವೀಕ್ಷಣೆಯಾಗುತ್ತಿರಲಿಲ್ಲ. ಆದ್ರೀಗ, ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಮಿಲಿಯನ್ ದಾಟುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿಮಾಗಳ ಕ್ರೇಜ್ ಕೂಡ ಹೆಚ್ಚಾಗಿದೆ. ಪರಭಾಷೆಗಳ ಮೀರಿಸುವಂತಹ ದಾಖಲೆಗಳನ್ನ ಸ್ಯಾಂಡಲ್ ವುಡ್ ಚಿತ್ರಗಳು ಮಾಡ್ತಿದೆ.
ಎರಡ್ಮೂರು ವರ್ಷದ ಹಿಂದೆ ಯೂಟ್ಯೂಬ್ ವೀಕ್ಷಣೆಗೆ ಇಷ್ಟೊಂದು ಮಹತ್ವವಿರಲಿಲ್ಲ. ಈಗ ಒಂದು ಸಿನಿಮಾ ಸೃಷ್ಟಿಸಿದ ದಾಖಲೆಯನ್ನ ಇನ್ನೊಂದು ಸಿನಿಮಾ ಕ್ಷಣ ಮಾತ್ರದಲ್ಲಿ ಅಳಿಸಿಹಾಕುತ್ತಿದೆ. ಸದ್ಯ, ಕೆಜಿಎಫ್ ನಿರ್ಮಿಸಿದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಜಮಾನ? ಯಾವ ಕನ್ನಡ ಟ್ರೈಲರ್ ಅತಿ ಹೆಚ್ಚು ವೀಕ್ಷಣೆ ಕಂಡಿದೆ. ಮುಂದೆ ಓದಿ......

ಪುನೀತ್ 'ಅಂಜನಿಪುತ್ರ'
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಅಂಜನಿಪುತ್ರ ಸಿನಿಮಾದ ಟ್ರೈಲರ್ ಪಿಆರ್ ಕೆ ಚಾನಲ್ ಮೂಲಕ ನವೆಂಬರ್ 24, 2017 ರಂದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದೆ. ಇಲ್ಲಿಯವರೆಗೂ ಈ ಟ್ರೈಲರ್ ಪಡೆದಿರುವ ವೀಕ್ಷಣೆ 3.7 (3,751,548) ಮಿಲಿಯನ್. ಸದ್ಯ, ಕನ್ನಡ ಚಿತ್ರಗಳ ಪೈಕಿ ಅಂಜನಿಪುತ್ರ ಐದನೇ ಸ್ಥಾನದಲ್ಲಿದೆ.

ರಕ್ಷಿತ್ 'ಕಿರಿಕ್ ಪಾರ್ಟಿ'
ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಅಭಿನಯದ ಕಿರಿಕ್ ಪಾರ್ಟಿ ಚಿತ್ರದ ಟ್ರೈಲರ್ ಅಕ್ಟೋಬರ್ 26, 2016ರಂದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದೆ. ಈಗಿನ ವೀಕ್ಷಕರ ಸಂಖ್ಯೆ ನೋಡುವುದಾರೇ 3.8 (3,855,122) ಮಿಲಿಯನ್ ಆಗಿದೆ. ಅಲ್ಲಿಗೆ ಇದು ನಾಲ್ಕನೇ ಸ್ಥಾನದಲ್ಲಿದೆ.

ದುನಿಯಾ ವಿಜಿಯ 'ಮಾಸ್ತಿಗುಡಿ'
ಇನ್ನು ದುನಿಯಾ ವಿಜಯ್ ಅಭಿನಯಿಸಿದ್ದ ಮಾಸ್ತಿಗುಡಿ ಚಿತ್ರದ ಟ್ರೈಲರ್ ಜನವರಿ 19, 2017 ರಂದು ಅಪ್ ಲೋಡ್ ಆಗಿತ್ತು. ಇಲ್ಲಿಯವರೆಗೂ ಈ ಚಿತ್ರದ ವೀವ್ಸ್ 4.6 (4,648,463) ಮಿಲಿಯನ್ ಆಗಿದೆ. ಅಲ್ಲಿಗೆ ಕನ್ನಡ ಚಿತ್ರಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

'ಯಜಮಾನ' ನ್ಯೂ ಎಂಟ್ರಿ
ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ದರ್ಶನ್ ಅಭಿನಯದ ಯಜಮಾನ ಟ್ರೈಲರ್ 11.6 ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಆದ್ರೆ, ಈ ಟ್ರೈಲರ್ ವೀವ್ಸ್ ಹೆಚ್ಚಿದ್ದು ಯೂಟ್ಯೂಬ್ ಸರಿಯಾಗಿ ತೋರಿಸುತ್ತಿಲ್ಲ ಎಂಬ ಮಾತಿದೆ. ಇದರ ವೇಗ ನೋಡ್ತಿದ್ರೆ ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್ ಮಾಡೋ ಲಕ್ಷಣ ಕಾಣ್ತಿದೆ. ಸದ್ಯಕ್ಕೆ, ಅಂದ್ರೆ ಫೆಬ್ರವರಿ 12ಕ್ಕೆ (ಬೆಳಿಗ್ಗೆ 11.ಗಂಟೆಗೆ) ಯಜಮಾನ ವೀಕ್ಷಕರ ಸಂಖ್ಯೆ 11,614,324 ಆಗಿದೆ.

ಮೊದಲ ಸ್ಥಾನದಲ್ಲಿ ಕೆಜಿಎಫ್
ಐದು ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾದ ಒಟ್ಟಾರೆ ವೀವ್ಸ್ ಅತಿ ಹೆಚ್ಚಿದೆ. ಆದ್ರೆ, ಕನ್ನಡ ಚಿತ್ರಗಳ ಪೈಕಿ ನೋಡುವುದಾದರೇ 17.9 (17,917,069) ವೀವ್ಸ್ ಪಡೆದಿದೆ. ನವೆಂಬರ್ 9 ರಂದು ಅಪ್ ಲೋಡ್ ಆಗಿದ್ದ ಟ್ರೈಲರ್ ಸದ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಯಜಮಾನನ ವೇಗ ನೋಡ್ತಿದ್ರೆ ಕೆಜಿಎಫ್ ದಾಖಲೆ ಬ್ರೇಕ್ ಆಗುತ್ತಾ ಎಂಬ ಕುತೂಹಲ ಮೂಡ್ತಿದೆ.


Click it and Unblock the Notifications











