24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡದ ಟೀಸರ್‌ಗಳು; ಕೆಜಿಎಫ್ ಬಿಟ್ರೆ ಯಾವುದು ಟಾಪ್?

ಟೀಸರ್, ಸಿನಿಮಾವೊಂದರ ಮೇಲೆ ಪ್ರೇಕ್ಷಕನಿಗೆ ನಿರೀಕ್ಷೆ ಹುಟ್ಟುಹಾಕಲು ಚಿತ್ರತಂಡಕ್ಕೆ ಇರುವ ಆಯುಧ ಎಂದೇ ಹೇಳಬಹುದು. ಚಿತ್ರದ ಟೀಸರ್ ಚೆನ್ನಾಗಿದ್ದರೆ ಟೀಸರ್ ನೋಡುವ ಪ್ರೇಕ್ಷಕನಿಗೆ ಸಿನಿಮಾ ನೋಡಬೇಕೆಂಬ ಆಸಕ್ತಿ ಮೂಡಲು ಸಾಧ್ಯ. ಒಂದುವೇಳೆ ಚಿತ್ರದ ಟೀಸರ್ ಕಳಪೆಯಾಗಿತ್ತು ಎಂದರೆ 'ಚಿತ್ರದ ಟೀಸರ್ರೇ ಹೀಗಿದೆ, ಇನ್ನು ಸಿನಿಮಾ ಇನ್ನೆಷ್ಟು ಡಬ್ಬಾ ತರ ಇರುತ್ತೋ' ಎಂದು ಅಳೆದು ಬಿಡ್ತಾರೆ ಸಿನಿ ಪ್ರೇಕ್ಷಕರು.

ಇನ್ನು ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಹುತೇಕ ಟೀಸರ್‌ಗಳಲ್ಲಿ ಸಂಭಾಷಣೆಗಳೇ ಇರುವುದಿಲ್ಲ, ಬದಲಾಗಿ ಅಬ್ಬರದ ಹಿನ್ನೆಲೆ ಸಂಗೀತ, ಹಿನ್ನೆಲೆ ಸಂಗೀತಕ್ಕೆ ತಕ್ಕಂತ ಸಖತ್ ಟೀಸರ್ ಕಟ್ ಮಾಡಲಾಗುತ್ತಿದೆ. ಈ ರೀತಿಯ ಟೀಸರ್ ಕಟ್‌ಗೆ ಸರಿಯಾದ ಉದಾಹರಣೆಯೆಂದರೆ ಕೆಜಿಎಫ್ ಚಾಪ್ಟರ್ 2 ಟೀಸರ್. ಪ್ರಶಾಂತ್ ನೀಲ್ ಬಳಗ ಮೈನವಿರೇಳಿಸುವಂತ ಟೀಸರ್ ಕಟ್ ಮಾಡಿ ಕಳೆದ ವರ್ಷದ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಿತ್ತು. ಈ ಮೂಲಕ ಎಲ್ಲಾ ಭಾಷೆಗೂ ಒಂದೇ ಟೀಸರ್ ಎಂಬ ಟ್ರೆಂಡನ್ನೂ ಸಹ ಹುಟ್ಟುಹಾಕಿತ್ತು. ಈ ಉಪಾಯ ಚೆನ್ನಾಗಿಯೇ ಕೆಲಸ ಮಾಡಿತ್ತು, ಒಳ್ಳೆಯ ವೀಕ್ಷಣೆಗಳು ಚಿತ್ರಕ್ಕೆ ಸಿಕ್ಕಿತ್ತು.

ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಚಿತ್ರ ತಂಡಗಳು ಒಳ್ಳೆಯ ಗುಣಮಟ್ಟದ ನೋಡುಗರ ಕಣ್ಮನ ಸೆಳೆಯುವಂತಹ ಟೀಸರ್ ಕಟ್ ಮಾಡಿ ಬಿಡುಗಡೆ ಮಾಡುವತ್ತ ಕಣ್ಣಿಟ್ಟಿವೆ. ಕೆಜಿಎಫ್ ನಂತರ ಬಂದ ಜೇಮ್ಸ್, ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಇದೀಗ ಟ್ರೆಂಡಿಂಗ್‌ನಲ್ಲಿರುವ ಕಬ್ಜ ಚಿತ್ರದ ಟೀಸರ್‌ಗಳು ಒಳ್ಳೆಯ ಗುಣಮಟ್ಟದ ಟೀಸರ್‌ಗಳಾಗಿವೆ. ಇನ್ನು ಕಬ್ಜ ಕೆಜಿಎಫ್‌ನ ಹಾಗೆ ಎಲ್ಲಾ ಭಾಷೆಯೂ ಸೇರಿದಂತೆ ಒಂದೇ ಟೀಸರ್ ಬಿಡುಗಡೆ ಮಾಡಿದರೆ, ಜೇಮ್ಸ್, ಚಾರ್ಲಿ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ವಿವಿಧ ಭಾಷೆಗಳಿಗೆ ಪ್ರತ್ಯೇಕ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದವು. ಇನ್ನು ಈ ಪೈಕಿ ಯಾವ ಚಿತ್ರದ ಟೀಸರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿವೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಕೆಜಿಎಫ್ ಚಾಪ್ಟರ್ 2 ದಾಖಲೆ

ಕೆಜಿಎಫ್ ಚಾಪ್ಟರ್ 2 ದಾಖಲೆ

ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆಂದು ಕಟ್ ಮಾಡಲಾಗಿದ್ದ ಟೀಸರ್ ಲೀಕ್ ಆದ ಕಾರಣ ಒಂದು ದಿನ ಮುನ್ನವೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಎಲ್ಲಾ ಭಾಷೆಗೂ ಸೇರಿಸಿದಂತೆ ಡೈಲಾಗ್ ರಹಿತ ಒಂದೇ ಟೀಸರ್ ಕಟ್ ಮಾಡಲಾಗಿತ್ತು. ಹಾಗೂ ಈ ಟೀಸರ್ ಲೀಕ್ ಆದರೂ ಸಹ ಯುಟ್ಯೂಬ್‌ನಲ್ಲಿ ದಾಖಲೆ ನಿರ್ಮಿಸಿತು. ಮೊದಲ 24 ಗಂಟೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ 107.6 ಮಿಲಿಯನ್ ವೀಕ್ಷಣೆ ಪಡೆಯಿತು. ಈ ಮೂಲಕ ಈ ಚಿತ್ರದ ಟೀಸರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡದ ಟೀಸರ್ ಎನಿಸಿಕೊಂಡಿದೆ.

ಕೆಜಿಎಫ್ ಬಿಟ್ರೆ ಯಾರು ಟಾಪ್?

ಕೆಜಿಎಫ್ ಬಿಟ್ರೆ ಯಾರು ಟಾಪ್?

ಕೆಜಿಎಫ್ ಚಾಪ್ಟರ್ 2 ಬಿಟ್ಟರೆ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಟೀಸರ್ ಕನ್ನಡ ಚಲನಚಿತ್ರರಂಗದ ಟೀಸರ್ ಎಂದರೆ ಅದು ಕಬ್ಬಾ ಟೀಸರ್. ಈ ಟೀಸರ್ ಮೊದಲ 24 ಗಂಟೆಗಳಲ್ಲಿ 12.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಅಪ್ಪು ಅಭಿನಯದ ಜೇಮ್ಸ್ ಚಿತ್ರದ ಕನ್ನಡ ಟೀಸರ್ ಮೊದಲ 24 ಗಂಟೆಗಳಲ್ಲಿ 10.2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಒಂದುವೇಳೆ ಜೇಮ್ಸ್ ಎಲ್ಲಾ ಭಾಷೆಯ ಟೀಸರ್‌ಗಳನ್ನೂ ಸೇರಿಸಿದಂತೆ ಮೊದಲ 24 ಗಂಟೆಗಳ ವೀಕ್ಷಣೆಗಳನ್ನು ಗಣನೆಗೆ ತೆಗೆದುಕೊಂಡರೆ ಇದು ಕಬ್ಜವನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಳ್ಳಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಟೀಸರ್ ಎಲ್ಲವೂ ಸೇರಿದಂತೆ ಮೊದಲ 24 ಗಂಟೆಗಳಲ್ಲಿ ಜೇಮ್ಸ್ ಟೀಸರ್ 20 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರ ರಂಗದ ಟೀಸರ್‌ಗಳ ಪಟ್ಟಿ

24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರ ರಂಗದ ಟೀಸರ್‌ಗಳ ಪಟ್ಟಿ

1. ಕೆಜಿಎಫ್ ಚಾಪ್ಟರ್ 2 ಟೀಸರ್: 107.6 ಮಿಲಿಯನ್

2. ಜೇಮ್ಸ್ ( ಎಲ್ಲಾ ಭಾಷೆ ಸೇರಿ ): 20 ಮಿಲಿಯನ್. ಮೊದಲ 24 ಗಂಟೆಗಳಲ್ಲಿ ಜೇಮ್ಸ್ ಕನ್ನಡದ ಟೀಸರ್ ಪಡೆದದ್ದು: 10.2 ಮಿಲಿಯನ್ ವೀಕ್ಷಣೆ.

3. 777 ಚಾರ್ಲಿ ( ಎಲ್ಲಾ ಭಾಷೆ ಸೇರಿ ): 15.9 ಮಿಲಿಯನ್. ಮೊದಲ 24 ಗಂಟೆಗಳಲ್ಲಿ 777 ಚಾರ್ಲಿ ಕನ್ನಡದ ಟೀಸರ್ ಪಡೆದದ್ದು: 6.5 ಮಿಲಿಯನ್ ವೀಕ್ಷಣೆ.

4.ಕಬ್ಜಾ: 12.5 ಮಿಲಿಯನ್

5. ವಿಕ್ರಾಂತ್ ರೋಣ: 7.5 ಮಿಲಿಯನ್

6. ಮಾರ್ಟಿನ್: 7 ಮಿಲಿಯನ್

ಈ ದಾಖಲೆ ಮುರಿಯುತ್ತಾ ಕ್ರಾಂತಿ?

ಈ ದಾಖಲೆ ಮುರಿಯುತ್ತಾ ಕ್ರಾಂತಿ?

ಇನ್ನು ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ತೆರೆ ಕಾಣುವ ದಿನಗಳು ಸಮೀಪಿಸುತ್ತಿದ್ದು, ಈ ಚಿತ್ರದ ಟೀಸರ್ ಕೂಡ ಶೀಘ್ರದಲ್ಲಿಯೇ ಬಿಡುಗಡೆಗೊಳ್ಳಲಿದೆ. ಈ ಚಿತ್ರದ ಟೀಸರ್ ಒಳ್ಳೆಯ ವೀಕ್ಷಣೆಗಳನ್ನು ಪಡೆದುಕೊಂಡು ಈ ಮೇಲ್ಕಂಡ ಪಟ್ಟಿಯಲ್ಲಿನ ಚಿತ್ರಗಳನ್ನು ಹಿಂದಿಕ್ಕುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ ಹಾಗೂ ಈ ಟೀಸರ್ 24 ಗಂಟೆಗಳಲ್ಲಿ ಎಷ್ಟು ವೀಕ್ಷಣೆಗಳನ್ನು ಪಡೆಯಬಹುದು ಎಂಬ ಊಹೆಯನ್ನು ಸಿನಿ ಪ್ರೇಕ್ಷಕರು ಮಾಡುತ್ತಿದ್ದಾರೆ.

More from Filmibeat

English summary
List of most viewed KFI teaser in 24 hours: KGF Chapter 2 tops the list and Puneeth Rajkumar's James is at top 2. Check out full list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X